Home_Page_Advt
Home_Page_Advt
Home_Page_Advt
Breaking News

ನೆಲ್ಯಾಡಿ: ಉಚಿತ ಆರೋಗ್ಯ ತಪಾಸಣಾ ಶಿಬಿರ


ನೆಲ್ಯಾಡಿ: ವೈಸ್ ಮೆನ್ ಇಂಟರ್ ನ್ಯಾಷನಲ್ ಕ್ಲಬ್, ಮಂಗಳೂರು ಇದರ ನೇತೃತ್ವದಲ್ಲಿ ಡಿ.ಕೆ.ಆರ್.ಡಿ.ಎಸ್ ಬೆಳ್ತಂಗಡಿ, ಕೆ.ಎಂ.ಸಿ ಆಸ್ಪತ್ರೆ ಮಂಗಳೂರು, ಪ್ರಸಾದ್ ನೇತ್ರಾಲಯ ಉಡುಪಿ ಇವರ ಸಹಕಾರದೊಂದಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ ನ.೨೪ ರಂದು ನೆಲ್ಯಾಡಿ ಸೈಂಟ್ ಅಲ್ಫೋನ್ಸಾ ಚರ್ಚ್‌ನಲ್ಲಿ ನಡೆಯಿತು.

ನೆಲ್ಯಾಡಿ ಸೈಂಟ್ ಅಲ್ಪೋನ್ಸಾ ಚರ್ಚ್‌ನ ಸಹಾಯಕ ಧರ್ಮಗುರುಗಳಾದ ವಂ.ಫಾ.ಸೋಜನ್ ಕೊಟ್ಟಾರಾತ್ತಿಲ್‌ರವರು ಅಧ್ಯಕ್ಷತೆ ವಹಿಸಿದ್ದರು. ನೆಲ್ಯಾಡಿ ಗ್ರಾಮ ಪಂಚಾಯತ್‌ನ ಅಧ್ಯಕ್ಷ ಗಂಗಾಧರ ಶೆಟ್ಟಿ ಹೊಸಮನೆಯವರು ಕಾರ್ಯಕ್ರಮ ಉದ್ಘಾಟಿಸಿದರು. ಕೆ.ಎಂ.ಸಿ ಆಸ್ಪತ್ರೆಯ ಸುಪರಿಂಟೆಂಡೆಂಟ್ ಡಾ.ಜಾನ್ ರಾಮಪುರಂ, ಡಿ.ಕೆ.ಆರ್.ಡಿ.ಎಸ್ ಸಂಸ್ಥೆಯ ನಿರ್ದೇಶಕರಾದ ವಂ.ಫಾ. ಬಿನೋಯಿ ಎ.ಜೆ ವೇದಿಕೆಯಲ್ಲಿ ಉಪಸ್ಥಿತರಿದ್ದರು. ವೈಸ್ ಮೆನ್ ಇಂಟರ್ ನ್ಯಾಷನಲ್ ಕ್ಲಬ್‌ನ ಅಧ್ಯಕ್ಷ ವೈಸ್ ಮೆನ್ ಬಾಬು ಪಿ.ಸಿ. ಸ್ವಾಗತಿಸಿದರು. ಮಾತಾ ಲ್ಯಾಬೋರೇಟರಿಯ ಜೋಸ್ ವಂದಿಸಿದರು. ಡಿ.ಕೆ.ಆರ್.ಡಿ.ಎಸ್ ಸಂಸ್ಥೆಯ ಮಹಿಳಾ ಸಬಲೀಕರಣ ಯೋಜನಾ ಸಂಯೋಜಕಿ ಶುಭ ನಿರೂಪಿಸಿದರು. ಕಾರ್ಯಕರ್ತೆ ಎಲ್ಸಿ ತೋಮಸ್ ಸಹಕರಿಸಿದರು. ಸಭಾ ಕಾರ್ಯಕ್ರಮದ ನಂತರ ಕೆ.ಎಂ.ಸಿ ಆಸ್ಪತ್ರೆ ಮಂಗಳೂರು ಇದರ ಮಕ್ಕಳ ತಜ್ಞರು, ಸ್ತ್ರೀ ರೋಗ ತಜ್ಞರು, ಇ.ಎನ್.ಟಿ.ತಜ್ಞರು, ಎಲುಬು ತಜ್ಞರು ಮತ್ತು ಸಾಮಾನ್ಯ ಆರೋಗ್ಯ ತಪಾಸಣೆಗಳು ನಡೆದವು. ೧೪೩ ಫಲಾನುಭವಿಗಳು ಪ್ರಯೋಜನ ಪಡೆದಿದ್ದಾರೆ. ಪ್ರಸಾದ್ ನೇತ್ರಾಲಯ ಉಡುಪಿ ಇವರ ತಂಡದಿಂದ ಕಣ್ಣಿನ ತಪಾಸಣೆ, ಅಗತ್ಯವುಳ್ಳವರಿಗೆ ರಿಯಾಯಿತಿ ದರದಲ್ಲಿ ಕನ್ನಡಕವನ್ನು ನೀಡಲಾಯಿತು. ಹಾಗೂ ಉಚಿತವಾಗಿ ಮಂಗಳೂರಿನಲ್ಲಿ ಕಣ್ಣಿನ ತಪಾಸಣೆ ಮಾಡುವುದಾಗಿ ತಿಳಿಸಲಾಗಿದೆ. ಒಟ್ಟು ೧೧೩ ಫಲಾನುಭವಿಗಳು ಪ್ರಯೋಜನ ಪಡೆದುಕೊಂಡರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.