Home_Page_Advt
Home_Page_Advt
Home_Page_Advt
Breaking News

ಎಸ್.ಐ ಗಳೇ ಇಲ್ಲದೆ ಕಾರ್ಯನಿರ್ವಹಿಸುತ್ತಿರುವ ಪುತ್ತೂರು ನಗರ ಪೊಲೀಸ್ ಠಾಣೆ!

✍ಲೋಕೇಶ್ ಬನ್ನೂರು

ಪುತ್ತೂರು: ಜನಜೀವನದೊಂದಿಗೆ ನೇರ ಸಂಪರ್ಕ ಹೊಂದಿರುವ ಇಲಾಖೆಗಳಲ್ಲಿ ಪೊಲೀಸ್ ಇಲಾಖೆಯೂ ಒಂದು. ರಾಜ್ಯ ಸರಕಾರಗಳ ವ್ಯಾಪ್ತಿಗೆ ಬರುವ ಪೊಲೀಸ್ ಇಲಾಖೆ ಎಲ್ಲ ರಾಜ್ಯಗಳಲ್ಲೂ ಸಿಬ್ಬಂದಿ ಕೊರತೆ ಮಾತ್ರವಲ್ಲದೆ ಇನ್ನೂ ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದೆ. ಆದರೆ ಪುತ್ತೂರು ನಗರ ಠಾಣೆಯಲ್ಲಿ ಸಿಬಂದಿಗಳ ಕೊರತೆ ನಡುವೆ ೪ ಎಸ್.ಐಗಳ ಹುದ್ದೆ ಖಾಲಿ ಇದೆ. ಕೋಮು ಗಲಭೆ, ರಾಜಕೀಯ ಹಿಂಸಾಚಾರ, ಗುಂಪು ಘರ್ಷಣೆ, ಪ್ರತಿಭಟನೆ ಮುಂತಾದ ಸಮಸ್ಯೆಗಳು ಕಾಣಿಸಿಕೊಂಡಾಗ ಪೊಲೀಸರು ಮಹತ್ವಪೂರ್ಣ ಪಾತ್ರ ನಿಭಾಯಿಸಬೇಕಾಗುತ್ತದೆ. ಆದರೆ ಅನೇಕ ಸಂದರ್ಭಗಳಲ್ಲಿ ಸಿಬ್ಬಂದಿಗಳ ಕೊರತೆ ಜೊತೆಗೆ ರಿಪೇರಿ ಮಾಡಿದಷ್ಟೂ ಮುಗಿಯದ ಇಲಾಖಾ ವಾಹನಗಳ ಸಮಸ್ಯೆಯಿಂದಾಗಿಯೂ ಪೊಲೀಸರು ಅಸಹಾಯಕರಾಗಬೇಕಾದ ಪರಿಸ್ಥಿತಿ ಎದುರಾಗುತ್ತದೆ.

ಪುತ್ತೂರು ಜಿಲ್ಲೆಯಾಗುವ ಎಲ್ಲಾ ಸಾಧ್ಯತೆಗಳ ನಡುವೆಯೂ ಪ್ರಧಾನವಾಗಿರುವ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಉಪನಿರೀಕ್ಷಕರುಗಳ ಕೊರತೆ ಬಹು ದೊಡ್ಡ ಸಮಸ್ಯೆಯಾಗಿದೆ. ಶೂಟೌಟ್, ಕಳವು ಪ್ರಕರಣಗಳು ಹೆಚ್ಚಾಗುತ್ತಿದ್ದ ವೇಳೆ ಅದನ್ನು ಮಟ್ಟ ಹಾಕಲು ಇರಬೇಕಾದಷ್ಟು ಪ್ರಮಾಣದ ಪೊಲೀಸ್ ಬಲ ಇಲ್ಲದ ಪುತ್ತೂರಿನಲ್ಲಿ ಅಪರಾಧ ಪ್ರಕರಣ ಪತ್ತೆ ಕಾರ್ಯಾಚರಣೆಯ ನೇತೃತ್ವ ವಹಿಸುವ ಉಪನಿರೀಕ್ಷಕರ ಹುದ್ದೆಗಳೆಲ್ಲವೂ ಖಾಲಿ ಇದೆ. ಕಳೆದ ೧೦ ತಿಂಗಳಿನಿಂದ ಖಾಲಿ ಉಳಿದಿರುವ ಪುತ್ತೂರು ನಗರ ಪೊಲೀಸ್ ಠಾಣಾ ಉಪನಿರೀಕ್ಷಕರ ಹುದ್ದೆಗೆ ನೇಮಕ ಮಾಡುವಂತೆ ಸಾರ್ವಜನಿಕರಿಂದ ಇದೀಗ ಆಗ್ರಹ ವ್ಯಕ್ತವಾಗಿದೆ. ಠಾಣೆಯ ವ್ಯಾಪ್ತಿಯಲ್ಲಿ ಅನೇಕ ಸಣ್ಣಪುಟ್ಟ ಕಳವು, ಹೊಡೆದಾಟ ಪ್ರಕರಣಗಳು ನಡೆದರೆ ಎ.ಎಸ್.ಐಗಳು ಮತ್ತು ಪೊಲೀಸರು ಅದನ್ನು ನಿಬಾಯಿಸುತ್ತಾರೆ. ಅದರೆ ದರೋಡೆ, ಶೂಟೌಟ್‌ನಂತಹ ಪ್ರಕರಣಗಳ ತನಿಖೆಗೆಗಾಗಿ ಎಸ್.ಐಗಳ ನೇಮಕ ಅಗತ್ಯವಾಗಿ ಬೇಕು. ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ನಾಲ್ಕು ಎಸ್.ಐ ಹುದ್ದೆಗಳು ಖಾಲಿ ಇವೆ. ಎಲ್‌ಆಂಡ್‌ಒ ೧, ಎಲ್‌ಆಂಡ್‌ಒ ೨, ಅಪರಾಧ ಪತ್ತೆ ದಳ, ಮಹಿಳಾ ಎಸ್,ಐ ಗಳ ಅಗತ್ಯವಿದೆ. ಕಳೆದ ಜನವರಿ ತಿಂಗಳಲ್ಲಿ ಎಸ್.ಐ ಅಜೇಯ್ ಅವರು ಮೈಸೂರು ಡಿವಿಜನ್‌ಗೆ ವರ್ಗಾವಣೆ ಆಗಿ ಹೋದ ಬಳಿಕ ತೆರವಾದ ಹುದ್ದೆ ಖಾಲಿ ಇದೆ. ಮಹಿಳಾ ಎಸ್.ಐ ಆಗಿ ಕರ್ತವ್ಯದಲ್ಲಿದ್ದ ಓಮನ ಅವರು ಸುಬ್ರಹ್ಮಣ್ಯ ಠಾಣೆಗೆ ವರ್ಗಾವಣೆಗೊಂಡಿದ್ದಾರೆ. ಕೈಂ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಎಸ್.ಐ ಚೆಲುವಯ್ಯ ಅವರು ಪುತ್ತೂರು ಸಂಚಾರ

ಠಾಣೆಗೆ ವರ್ಗಾವಣೆಗೊಂಡಿದ್ದಾರೆ. ಹಾಗಾಗಿ ಪುತ್ತೂರು ನಗರ ಪೊಲೀಸ್ ಠಾಣೆ. ಎಸ್.ಐ ಗಳಿಲ್ಲದ ಪೊಲೀಸ್ ಠಾಣೆ ಆಗಿದೆ. ೬ ಮಂದಿ ಎ.ಎಸ್.ಐ ಗಳು ಮತ್ತು ಸಿಬಂದಿಗಳು ಹಾಗೂ ಎಲ್ಲಾ ಜವಾಬ್ದಾರಿ ಹೊಣೆ ಹೊತ್ತಿರುವ ವೃತ್ತನಿರೀಕ್ಷಕ ತಿಮ್ಮಪ್ಪ ನಾಯ್ಕ ಅವರು ಮಾತ್ರ ಠಾಣೆಯಲ್ಲಿ ಪ್ರಸ್ತುತ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇಲ್ಲಿ ಅಗತ್ಯದಷ್ಟು ಸಿಬ್ಬಂದಿಗಳು ಇಲ್ಲ. ಇರುವ ಅಧಿಕಾರಿಗಳಿಗೆ, ಸಿಬಂದಿಗಳಿಗೆ ವರ್ಗಾವಣೆ ಆಗುತ್ತಿದ್ದು, ವರ್ಗಾವಣೆಗೊಂಡು ಖಾಲಿಯಾದ ಸ್ಥಳಕ್ಕೆ ಯಾವ ಅಧಿಕಾರಿಯೂ ಬಂದಿಲ್ಲ. ಸಿಬ್ಬಂದಿ ಕೊರತೆ ಪೊಲೀಸರ ಕಾರ್ಯವೈಖರಿಯ ಮೇಲೆ ಭಾರೀ ಪ್ರತಿಕೂಲ ಪರಿಣಾಮ ಬೀರುತ್ತಿದೆ.

ಹೋದಲ್ಲೆಲ್ಲಾ ಬಾಕಿ ಆಗುವ ಜೀಪು: ಠಾಣೆಗೆ ಇನ್‌ಸ್ಪೆಕ್ಟರ್, ಎಸ್.ಐಗಳಿಗೆ, ಪ್ರತ್ಯೇಕ ಜೀಪುಗಳಿವೆ. ಆದರೆ ಸದ್ಯದ ಪರಿಸ್ಥಿತಿಯಲ್ಲಿ ಎಸ್.ಐ ಹುದ್ದೆ ಖಾಲಿ ಇದೆ ಎಂದು ಅವರು ಬಳಸುವ ಜೀಪನ್ನು ಇಲಾಖೆ ಹಿಂದಕ್ಕೆ ಪಡೆದಿದೆ. ಜೊತೆಗೆ ಅಪರಾಧದ ಪತ್ತೆ ವಿಭಾಗದ ಎಸ್.ಐ ಕೂಡಾ ವರ್ಗಾವಣೆ ಆದ ಹಿನ್ನೆಲೆಯಲ್ಲಿ ಅವರ ಜೀಪನ್ನು ಕೂಡಾ ಇಲಾಖೆ ಹಿಂಪಡೆಯುವ ಸಿದ್ಧತೆಯಲ್ಲಿದೆ. ಇದರೊಂದಿಗೆ ಇಲ್ಲಿರುವ ವೃತ್ತನಿರೀಕ್ಷಕರ ಜೀಪು ಹೋದಲ್ಲೆಲ್ಲಾ ಆಗಾಗೆ ಬಾಕಿ ಆಗುತ್ತಿದೆ. ಇತ್ತೀಚೆಗೆ ಉಪ್ಪಿನಂಗಡಿಯಲ್ಲೂ ಒಮ್ಮೆ ಬಾಕಿಯಾಗಿತ್ತು. ಸದ್ಯ ರಿಪೇರಿ ಆಗಿ ಠಾಣೆಯ ಮುಂದೆ ನಿಲ್ಲಿಸಲಾಗಿದೆ.

  • ಅಸಹಾಯಕರಾದ ಪೊಲೀಸರು
  • ದುಸ್ಥಿತಿಯಲ್ಲೇ ಇರುವ ವಾಹನಗಳು

ದೇಶದ ಆಂತರಿಕ ಭದ್ರತೆಯಲ್ಲಿ ಪೊಲೀಸರು ಅತಿ ಮುಖ್ಯ ಪಾತ್ರ ನಿಭಾಯಿಸುತ್ತಾರೆ. ಭಯೋತ್ಪಾದನೆ, ಜನಾಂಗೀಯ ಘರ್ಷಣೆ, ಧಾರ್ಮಿಕ ಮೂಲಭೂತವಾದ ಇವೇ ಮುಂತಾದ ಆಂತರಿಕ ಭದ್ರತೆಗೆ ಸವಾಲಾಗುವ ಸನ್ನಿವೇಶಗಳನ್ನು ನಿಭಾಯಿಸಲು ದಕ್ಷ ಮತ್ತು ಸಮರ್ಥ ಪೊಲೀಸರ ಅಗತ್ಯವಿದೆ. ಅಲ್ಲದೆ ತಂತ್ರಜ್ಞಾನದ ಅಭಿವೃದ್ಧಿಯ ಜೊತೆಗೆ ಕಾಣಿಸಿರುವ ಸೈಬರ್ ಅಪರಾಧ, ಬ್ಯಾಂಕ್ ವಂಚನೆ, ಸಂಘಟಿತ ಅಪರಾಧಗಳು, ಹ್ಯಾಕಿಂಗ್ ಈ ಮುಂತಾದ ಕೃತ್ಯಗಳ ಜೊತೆ ವ್ಯವಹರಿಸಲು ತಾಂತ್ರಿಕ ತರಬೇತಿ ಹೊಂದಿರುವ ಸಿಬ್ಬಂದಿಗಳ ಅಗತ್ಯ ಬಹಳ ಹೆಚ್ಚಿದೆ. ಆದರೆ ಪೊಲೀಸರು ಮಾತ್ರ ಮೂಲಸೌಕರ್ಯ ಕೊರತೆ, ಸಿಬ್ಬಂದಿಗಳ ಕೊರತೆಯಿಂದಾಗಿ ಪೊಲೀಸರ ಕೆಲಸದ ಹೊರೆ ವಿಪರೀತ ಹೆಚ್ಚಾಗಿದೆ ಎನ್ನುವ ದೂರು ಇಂದು ನಿನ್ನೆಯದ್ದಲ್ಲ. ಇದು ಪೊಲೀಸರ ದಕ್ಷತೆ ಮತ್ತು ಸಾಮರ್ಥ್ಯವನ್ನು ಕುಂಠಿತಗೊಳಿಸುವುದು ಮಾತ್ರವಲ್ಲದೆ ವಿವಿಧ ರೀತಿಯ ಮಾನಸಿಕ ಒತ್ತಡಗಳಿಗೂ ಕಾರಣವಾಗುತ್ತಿದೆ.

ಎಸ್.ಐಗಳ ಹುದ್ದೆ ಭರ್ತಿ ಮಾಡಲಾಗುವುದು
ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಎಸ್.ಐಗಳ ಹುದ್ದೆ ಖಾಲಿ ಇರುವುದು ನನ್ನ ಗಮನದಲ್ಲಿದೆ. ಈ ಕುರಿತು ಅತಿ ಶೀಘ್ರದಲ್ಲಿ ಎಸ್.ಐಗಳ ಹುದ್ದೆ ಭರ್ತಿ ಮಾಡುವ ನಿಟ್ಟಿನಲ್ಲಿ ಸಂಬಂಧಿಸಿದವರ ಜೊತೆ ಮಾತನಾಡಿ ಅಗತ್ಯ ಕ್ರಮ ಕೈಗೊಳ್ಳುತ್ತೇನೆ – ಸಂಜೀವ ಮಠಂದೂರು, ಶಾಸಕರು ಪುತ್ತೂರು

೬೫ ಸಿಬ್ಬಂದಿ ಬಲದ ಠಾಣೆಯಲ್ಲಿ ಸದ್ಯ ಇನ್ಸ್‌ಪೆಕ್ಟರ್, ೭ ಮಂದಿ ಸಹಾಯಕ ಸಬ್ ಇನ್ಸ್‌ಪೆಕ್ಟರ್‌ಗಳು, ೧೪ ಹೆಡ್‌ಕಾನ್‌ಸ್ಟೇಬಲ್‌ಗಳು, ೩೫ ಮಂದಿ ಪೇದೆಗಳು ಕಾರ್ಯ ನಿರ್ವಹಿಸುತ್ತಿದ್ದಾರೆ. ಸಂಖ್ಯಾ ಬಲದ ಕೊರತೆಯ ನಡುವೆಯೇ ಇಲ್ಲಿರುವ ಸಿಬ್ಬಂದಿ ಹಗಲೂ ರಾತ್ರಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಆದರೆ ಬಹಳ ದೊಡ್ಡ ಪುತ್ತೂರು ಕಸಬಾ ಸೇರಿ ೧೨ ಗ್ರಾಮಗಳ ವ್ಯಾಪ್ತಿಯನ್ನು ಸೀಮಿತ ಸಿಬ್ಬಂದಿಗಳು ಪರಿಣಾಮಕಾರಿಯಾಗಿ ನಿರ್ವಹಿಸಲು ಸಾಧ್ಯವಿಲ್ಲ. ಜೊತೆಗೆ ೫ ಸೂಕ್ಷ್ಮ ಪ್ರದೇಶವನ್ನು ಹೊಂದಿರುವ ಪುತ್ತೂರು ನಗರ ಠಾಣೆಯ ವ್ಯಾಪ್ತಿಯಲ್ಲಿ ನಡೆದ ಯಾವುದೇ ಪ್ರಕರಣಗಳ ತನಿಖೆ ನೆಲಕಚ್ಚುವ ಸಾಧ್ಯತೆಯೂ ಇದೆ. ಈ ನಿಟ್ಟಿನಲ್ಲಿ ಆದಷ್ಟು ಶೀಘ್ರವಾಗಿ ಎಸ್.ಐಗಳ ನೇಮಕಕ್ಕೆ ಸಾರ್ವಜನಿಕರು ಆಗ್ರಹಿಸಿದ್ದಾರೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

1 Comment

  1. Team Young Brigade Puttur

    ಸಮಾಜದಲ್ಲಿ ಅಹಿತಕರ ಘಟನೆಗಳು ನಡೆಯದಂತೆ ನೋಡಿಕೊಳ್ಳುವ so called busiest ಪೋಲೀಸ್ ಇಲಾಖೆಯಲ್ಲೇ ಇಂತಹ ಪರಿಸ್ಥಿತಿ ಉಂಟಾದರೆ ಹೇಗೆ😏
    ಏನೂ ಕೆಲಸ ಇಲ್ಲದ ಬೇರೆ ಇಲಾಖೆಗಳ ಅಧಿಕಾರಿಗಳಿಗೆ ಐಷಾರಾಮಿ ವಾಹನದ ವ್ಯವಸ್ಥೆ ಇದೆ ಪಾಪ ದಿನದ 24 ಗಂಟೆ ಕೆಲಸ ನಿರ್ವಹಿಸುವ ಪೋಲೀಸ್ ಇಲಾಖೆಯಲ್ಲಿ ಒಂದು ಗುಜರಿ ಬೊಲೆರೋ ಜೀಪು ಮಾತ್ರ 😔

    Reply

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.