Home_Page_Advt
Home_Page_Advt

ಪಕ್ಷದ ಜತೆ ಗುರುತಿಸದೇ, ಪಕ್ಷೇತರನಾಗಿ ಕಣಕ್ಕೆ – ಪತ್ರಿಕಾಗೋಷ್ಠಿಯಲ್ಲಿ ಎಂ. ಶಂಕರ್

Puttur_Advt_NewsUnder_1
Puttur_Advt_NewsUnder_1

ಬೆಂಗಳೂರು: ಆದರ್ಶ ಹಾಗೂ ಪ್ರಾಮಾಣಿಕವಾಗಿ ಕೆಲಸ ಮಾಡುವ ಉದ್ದೇಶದಿಂದ ಮಹಾಲಕ್ಷ್ಮೀ ವಿಧಾನ ಸಭಾ ಕ್ಷೇತ್ರದಿಂದ ಉಪಚುನಾವಣಾ ಕಣದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದೇನೆ ಎಂದು ಎಂ. ಶಂಕರ್ ತಿಳಿಸಿದರು.

ನ.29 ರಂದು ಬೆಂಗಳೂರು ಪ್ರೆಸ್‌ಕ್ಲಬ್‌ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಉದ್ಯಮಿಯಾಗಿ ಈಗಾಗಲೇ ಹಲವು ಸಾಮಾಜಿಕ ಕಾರ್ಯಗಳಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದೇನೆ. ಜನಸಾಮಾನ್ಯರ ಹಿತದೃಷ್ಟಿಯನ್ನು ಗಮನಿಸಿಕೊಂಡು, ಹಲವು ಕೆಲಸ ಕಾರ್ಯಗಳ ಬಗ್ಗೆ ಜನಪ್ರತಿನಿಧಿಗಳಿಗೆ ಈಗಾಗಲೇ ಮನವಿ ನೀಡಿದ್ದೇನೆ. ಅವುಗಳ ಜಾರಿಗೆ ಒತ್ತಾಯಿಸಿ ಪ್ರತಿಭಟನೆಯನ್ನು ಹಮ್ಮಿಕೊಂಡಿದ್ದೇನೆ. ಆದರೆ ಈ ಎಲ್ಲಾ ಕೆಲಸಗಳನ್ನು ಮಾಡಲು ಅಧಿಕಾರ ಇದ್ದರೆ ಉತ್ತಮ ಎನ್ನುವ ಉದ್ದೇಶದಿಂದ ಈ ಬಾರಿ ಉಪಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿದ್ದೇನೆ ಎಂದರು.

ಸದ್ಯದ ರಾಜಕೀಯ ಪರಿಸ್ಥಿತಿಯಲ್ಲಿ ಯಾವ ಪಕ್ಷಗಳನ್ನು ನಂಬುವ ಸ್ಥಿತಿ ಇಲ್ಲ. ಜನಸಾಮಾನ್ಯರಿಗೆ ಹಲವು ಭರವಸೆಗಳನ್ನು ನೀಡುತ್ತಾ, ಚುನಾವಣೆಯಲ್ಲಿ ಗೆದ್ದ ಬಳಿಕ ಸ್ವ ಹಿತವೇ ಮುಖ್ಯ ಎಂಬಂತಾಗಿದೆ. ಆದ್ದರಿಂದ ಯಾವುದೇ ಪಕ್ಷದ ಜತೆ ಗುರುತಿಸಿಕೊಳ್ಳದೇ, ಪಕ್ಷೇತರನಾಗಿ ಕಣಕ್ಕೆ ಧುಮುಕ್ಕುತ್ತಿದ್ದೇನೆ. ಮುಂದೆಯೂ ಯಾವುದೇ ಪಕ್ಷದ ಜತೆ ಗುರುತಿಸಿಕೊಳ್ಳಲು ಬಯಸುವುದಿಲ್ಲ ಎಂದರು.

ಉಪಚುನಾವಣೆಯಲ್ಲಿ ಗೆದ್ದ ಬಳಿಕ ಒಂದಷ್ಟು ಕೆಲಸ ಕಾರ್ಯಗಳನ್ನು ಮಾಡುವ ಉದ್ದೇಶ ಇಟ್ಟುಕೊಂಡಿದ್ದು, ಕರಪತ್ರ ಮಾಡಲಾಗಿದೆ. ಕ್ಷೇತ್ರದ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಶಾಲೆಗಳನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಇರುವ ಹಾಗೆ ಇ-ಶಾಲೆ ಪರಿಣಿತ ಶಿಕ್ಷಕರು ಹಾಗೂ ಆಟದ ಮೈದಾನ ನಿರ್ಮಾಣಕ್ಕೆ ವ್ಯವಸ್ಥೆ ಮಾಡಲಾಗುವುದು. ವಿದ್ಯೆಯಲ್ಲಿ ಹಿಂದುಳಿದವರಿಗೆ ಟ್ಯೂಷನ್ ವ್ಯವಸ್ಥೆ, ಪೋಸ್ಟ್ ಮೆಟ್ರಿಕ್ ವಿದ್ಯಾರ್ಥಿಗಳಿಗೆ ಉನ್ನತ ವ್ಯಾಸಂಗಕ್ಕೆ ಸಹಾಯ, ಅರ್ಹರಿಗೆ ಉದ್ಯೋಗಾವಕಾಶ ಮೀಸಲಾತಿ ಕೋರಲಾಗುವುದು. ನಾಗರಿಕ ಪರೀಕ್ಷೆಗಾಗಿ ಉಚಿತ ಟ್ಯೂಷನ್ ವ್ಯವಸ್ಥೆ ಮಾಡಲಾಗುವುದು ಎಂದರು.

ಮೂಲ ಸೌಕರ್ಯಗಳಾದ ನೀರು, ರಸ್ತೆ, ವಿದ್ಯುತ್, ಇತರೆ ಸಾರ್ವಜನಿಕ ಕ್ಷೇತ್ರದ ವ್ಯವಸ್ಥೆ ನೀಡಲಾಗುವುದು. ಕೊರತೆ ನಿವಾರಣೆಗೆ ಕಾಲ್ ಸೆಂಟರ್ ತೆರೆಯಲಾಗುವುದು. ಪ್ರತಿ ವಾರ್ಡ್‌ನಲ್ಲಿ ಸಾರ್ವಜನಿಕ ಆರೋಗ್ಯ ಕೇಂದ್ರ ಹಾಗೂ ಉಚಿತ ಔಷಧ ವಿತರಿಸಲಾಗುವುದು. ವೃದ್ಧರಿಗೆ ಪೆನ್‌ಶನ್ ಹಾಗೂ ವೃದ್ಧಾಶ್ರಮದ ವ್ಯವಸ್ಥೆ ಮಾಡಲಾಗುವುದು. ಶ್ರಮಿಕರಿಗಾಗಿ ಮಿನಿಮಮ್ ವೇಜಸ್, ಇಪಿಎಫ್, ಇಎಸ್‌ಐಸಿ ನೀಡಲು ಒತ್ತಾಯಿಸಲಾಗುವುದು ಎಂದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.