ಪುತ್ತೂರು: ಇಲ್ಲಿನ ಎಂ ಟಿ ರೋಡ್ ಸಮೀಪದ ಚೇತನಾ ಆಸ್ಪತ್ರೆಯ ಮುಂಭಾಗದ ರುಕ್ಮಾ ಕಾಂಪ್ಲೆಕ್ಸ್ ನಲ್ಲಿ ಬಿ ಎಸ್, ಜಿಎಸ್ ಟಿ ಸೊಲ್ಯೂಶನ್ಸ್ ಡಿ.2 ರಂದು ಶುಭಾರಂಭಗೊಂಡಿತು. ಸಂಸ್ಥೆಯನ್ನು ಮಾಲಕರ ತಾಯಿ ಮಾಲತಿ ಮಾದವ ನಾಯಕ್ ಆಜೇರು ಪುಣಚ, ಚಾರ್ಟೆಡ್ ಅಕೌಂಟೆಂಟ್ ಗಣೇಶ್ ಜೋಷಿ, ವಕೀಲ ಚೇತನ್ ನಾಯಕ್, ಟ್ಯಾಕ್ಸ್ ಕನ್ಸಲ್ಟೆಂಟ್ ರಾಮಚಂದ್ರ ಭಟ್ ದೀಪ ಬೆಳಗಿಸಿ ಶುಭಹಾರೈಸಿದರು.
ಈ ಸಂದರ್ಭದಲ್ಲಿ ಕಟ್ಟಡದ ಮಾಲಕ ಶೈಲೇಶ್ ನಾಯಕ್, ಪ್ರಭು ಪ್ರಿಂಟರ್ಸ್ ನ ಮಾಲಕ ಸಚ್ಚಿದಾನಂದ ಪ್ರಭು ಆಜೇರು, ಶ್ರೀಪತಿ ನಾಯಕ್ ಆಜೇರು, ಶುಭಕರ ನಾಯಕ್ ಅಟ್ಲಾರು ಹಾಗೂ ಅನೇಕ ಗಣ್ಯರು ಶುಭಹಾರೈಸಿದರು.
ಸಂಸ್ಥೆಯ ಮಾಲಕ ಬಾಲಸುಬ್ರಹ್ಮಣ್ಯ ಪುಣಚ ಆಜೇರು ಮಾತನಾಡಿ ನಮ್ಮಲ್ಲಿ ಅಕೌಂಟಿಂಗ್, ಜಿ ಎಸ್ ಟಿ ಸರ್ವೀಸ್, ಇನ್ ಕಮ್ ಟ್ಯಾಕ್ಸ್ ಸರ್ವೀಸ್, ಟಿಡಿಎಸ್, ಇಎಸ್ ಐ ಹಾಗೂ ಪಿಎಫ್ ಸಂಬಂಧಪಟ್ಟ ಸರ್ವೀಸ್ ಲಭ್ಯವಿದೆ ಎಂದು ಹೇಳಿ ಎಲ್ಲರ ಸಹಕಾರ ಕೋರಿದರು.