Home_Page_Advt
Home_Page_Advt
Home_Page_Advt
Breaking News

ಬನ್ನೂರು ಕರ್ಮಲದಲ್ಲಿ ಅಪರಿಚಿತ ಕಾರು ಪತ್ತೆ – ಕಾರಿನೊಳಗಡೆ ರಕ್ತದ ಕಲೆ ಪತ್ತೆ?

ಪುತ್ತೂರು: ಬನ್ನೂರು ಕರ್ಮಲ ವಿವೇಕಾನಂದ ಕಾಲೇಜು ಕ್ಯಾಂಪಸ್ ಬಳಿಯಿರುವ ವಾಟರ್‌ಸರ್ವಿಸ್ ಸ್ಟೇಷನ್ ವಠಾರದಲ್ಲಿರುವ ಮೆಸ್ಕಾಂ ಬೃಹತ್ ಟವರ್ ಅಡಿಯಲ್ಲಿ ಅಪರಿಚಿತ ಕಾರೊಂದು ಡಿ.2ರಂದು ಪತ್ತೆಯಾಗಿದೆ. ಪತ್ತೆಯಾದ ಕಾರಿನ ಒಳಗಡೆ ರಕ್ತದ ಕಲೆಗಳಂತೆ ಇರುವುದು ಬೆಳಕಿಗೆ ಬಂದಿದ್ದರಿಂದ ವಿಚಾರ ಇನ್ನಷ್ಟು ಕುತೂಹಲ ಸೃಷ್ಟಿಸಿದೆ.

ವಾಟರ್‌ಸರ್ವಿಸ್ ಸ್ಟೇಷನ್ ಬಳಿಯ ಗುಜುರಿ ಅಂಡಿಯ ಮಾಲಕರು ಬೆಳಿಗ್ಗೆ ಬಂದು ನೋಡಿದಾಗ ಅಪರಿಚಿತ ಕಾರೊಂದು ವಿದ್ಯುತ್ ಟವರ್ ಅಡಿಯಲ್ಲಿ ಇರುವುದು ಬೆಳಕಿಗೆ ಬಂದಿದ್ದು, ತಕ್ಷಣ ಅವರು ಪೊಲೀಸರಿಗೆ ಮಾಹಿತಿ ನೀಡಿದರು. ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಕಾರಿನ ಒಳಗೆ ರಕ್ತದ ಕಲೆಗಳಂತೆ ಇರುವುದು ಕಂಡು ಬಂದಿದ್ದು, ಯಾವುದೋ ಕೃತ್ಯ ಎಸಗಿ ಕಾರನ್ನು ಇಲ್ಲಿ ಬಿಟ್ಟು ಹೋಗಿರುವ ಸಾಧ್ಯತೆ ಕುರಿತು ಶಂಕೆ ವ್ಯಕ್ತವಾಗಿದೆ.

ಉಳ್ಳಾಲದ ಕೊಲೆಗೆ ಸಂಬಂಧ ?: ಉಳ್ಳಾಲದ ತೊಕ್ಕೊಟ್ಟು ಕಾಪಿಕಾಡು ಸಮೀಪ ರೈಲ್ವೆ ಹಳಿಯ ಪಕ್ಕದಲ್ಲೇ ನಡೆದಿದ್ದ ಕೇರಳದ ಕಾಸರಗೋಡು ಜಿಲ್ಲೆಯ ಪುತ್ತಿಗೆ ನಿವಾಸಿ ಸುದರ್ಶನ್ ಸಿ.ಎಚ್. (20ವ) ಎಂಬ ಯುವಕನ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಗಳು ಕೃತ್ಯಕ್ಕೆ ಬಳಸಿದ್ದ ಕಾರು ಇದಾಗಿರಬಹುದು ಎಂದು ಕಾರಿನ ಬಳಿ ಜಮಾಯಿಸಿದ ಜನರು ಮಾತನಾಡಿಕೊಳ್ಳುತ್ತಿದ್ದರು. ಸುದರ್ಶನ್‌ರವರನ್ನು ಕೊಲೆ ಮಾಡಿದ ಆರೋಪಿ ರಕ್ಷಿತ್ ಠಾಣೆಗೆ ಶರಣಾಗಿದ್ದು, ಪುತ್ತೂರಿನಲ್ಲಿರುವ ಕಾರಿನ ಕುರಿತು ವಿಚಾರಣೆ ವೇಳೆ ಯಾವುದೇ ಮಾಹಿತಿ ದೊರೆತಿಲ್ಲ ಎಂದು ಪೊಲೀಸ್ ಮೂಲದಿಂದ ತಿಳಿದು ಬಂದಿದೆ. ಆದರೂ ಡಿ.೩ರಂದು ಉಳ್ಳಾಲ ಪೊಲೀಸರು ಅಪರಿಚಿತ ಕಾರು ಇರುವ ಸ್ಥಳಕ್ಕೆ ಆಗಮಿಸಿ ತನಿಖೆ ನಡೆಸಲಿದ್ದಾರೆ ಎಂದು ತಿಳಿದು ಬಂದಿದೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.