ಪದಾಳ ಶ್ರೀ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಷಷ್ಠಿಯ ಸಂಭ್ರಮ

Puttur_Advt_NewsUnder_1
Puttur_Advt_NewsUnder_1

ಉಪ್ಪಿನಂಗಡಿ: ಇಲ್ಲಿನ ಪದಾಳ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಷಷ್ಠಿ ಉತ್ಸವ ಮತ್ತು ಬಲಿವಾಡು ಕೂಟ ಸೋಮವಾರ ವಿಜೃಂಭಣೆಯಿಂದ ನಡೆಯಿತು.

ಡಿ.1ರಂದು ರಾತ್ರಿ ಹೂವಿನ ಪೂಜೆ ನಡೆದು, ಡಿ.2ರಂದು ಬೆಳಗ್ಗೆ ಉಷಃ ಪೂಜೆ, 8.45ಕ್ಕೆ ಬೆಳಗ್ಗಿನ ಪೂಜೆ, 9ರಿಂದ ನಾಗತಂಬಿಲ ನಡೆಯಿತು. ಮಧ್ಯಾಹ್ನದ ಪೂಜೆಯಾದ ಬಳಿಕ ಪಲ್ಲ ಪೂಜೆ ಮತ್ತಿತರ ಸೇವೆಗಳು ನಡೆದು, ಪ್ರಸಾದ ವಿತರಣೆಯಾಗಿ ಅನ್ನ ಸಂತರ್ಪಣೆ ನಡೆಯಿತು.

ಇದಕ್ಕೂ ಮೊದಲು ಪೆರಿಯಡ್ಕದ ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂದಿರದ ತಂಡದಿಂದ ಭಜನಾ ಸೇವೆ ನಡೆಯಿತು. ಸಂಜೆ ಮತ್ತೆ ಭಜನಾ ಸೇವೆ ನಡೆದು 8.15ಕ್ಕೆ ರಾತ್ರಿಯ ಪೂಜೆ ನಡೆದು, ಪ್ರಸಾದ ವಿತರಣೆ ಮಾಡಲಾಯಿತು. ಶ್ರೀ ದೇವಾಲಯದ ಪ್ರಧಾನ ಅರ್ಚಕ ಕೇಶವರಾಜ ಅವರ ನೇತೃತ್ವದಲ್ಲಿ ಪೂಜಾ ವಿಧಿ ವಿಧಾನಗಳನ್ನು ನೆರವೇರಿತು.

ಈ ಸಂದರ್ಭ ಶ್ರೀ ದೇವಾಲಯದ ಆಡಳಿತ ಸಮಿತಿ ಅಧ್ಯಕ್ಷ ಉದಯಶಂಕರ ಭಟ್ ನಡುಸಾರು, ಜಿ.ಪಂ. ಸದಸ್ಯೆ ಶಯನಾ ಜಯಾನಂದ್, ತಾ.ಪಂ. ಸದಸ್ಯೆ ಸುಜಾತಕೃಷ್ಣ ಆಚಾರ್ಯ, ಉಪ್ಪಿನಂಗಡಿ ಗ್ರಾ.ಪಂ. ಸದಸ್ಯರಾದ ಸುನೀಲ್ ಕುಮಾರ್ ದಡ್ಡು, ಸುರೇಶ್ ಅತ್ರಮಜಲು, ಚಂದ್ರಶೇಖರ ಮಡಿವಾಳ, ಉಪ್ಪಿನಂಗಡಿ ಸಿಎ ಬ್ಯಾಂಕ್ ಉಪಾಧ್ಯಕ್ಷ ಯತೀಶ್ ಶೆಟ್ಟಿ, ನಿರ್ದೇಶಕ ರಾಮಚಂದ್ರ ಮಣಿಯಾಣಿ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜತ್ತಪ್ಪ ಗೌಡ ರಂಗಾಜೆ, ಪೆರಿಯಡ್ಕ ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷ ಜಗದೀಶ್ ರಾವ್ ಮಣಿಕ್ಕಳ, ನಿವೃತ ಎಸಿಎಫ್ ಪಿ.ವಿ. ಭಟ್, ಪ್ರಮುಖರಾದ ಶಂಕರನಾರಾಯಣ ಭಟ್ ಬೊಳ್ಳಾವು, ರಾಧಾಕೃಷ್ಣ ಭಟ್ ಬೊಳ್ಳಾವು, ಲೊಕೇಶ್ ಬೆತ್ತೋಡಿ, ಸತ್ಯನಾರಾಯಣ ಭಟ್ ಬೊಳ್ಳಾವು, ಕೇಶವ ರಂಗಾಜೆ, ಚಂದ್ರಶೇಖರ ತಾಳ್ತಜೆ, ಸುಬ್ಬಯ್ಯ ಭಟ್ ಕಲ್ಲಾಜೆ, ರಾಮಣ್ಣ ಶೆಟ್ಟಿ ಬೊಳ್ಳಾವು, ಬಿ. ವೆಂಕಟ್ರಮಣ ಭಟ್ ಪೆರಿಯಡ್ಕ, ಜಯಗೋವಿಂದ ಭಟ್ ನಡುಸಾರು, ಚಿನ್ಮಯ ಭಟ್ ನಡುಸಾರು, ಅವಿನಾಶ್ ಭಟ್ ಪೆರಿಯಡ್ಕ, ರಾಮ ಭಟ್ ಬೊಳ್ಳಾವು, ಡಾ. ರಾಜಗೋಪಾಲ ಭಟ್ ಕೈಲಾರ್, ಯು.ರಾಮ, ಅರವಿಂದ ಭಂಡಾರಿ, ಪ್ರತಾಪ ಯು., ಪ್ರಶಾಂತ್ ಯು., ಹರೀಶ್ವರ ಮೊಗ್ರಾಲ್, ಗೋಪಾಲ ನಾಯ್ಕ, ಮಹಾಲಿಂಗ ಕಜೆಕ್ಕಾರು, ಮಹಾಲಿಂಗ ಭಟ್ ಪೆರಿಯಡ್ಕ, ಸತೀಶ್ ರಾವ್ ನೆಡ್ಚಿಲ್, ಉಮೇಶ್ ಶೆಣೈ, ವೆಂಕಟೇಶ್ ರಾವ್, ಕೇಶವ ಬೆತ್ತೋಡಿ, ಕಂಗ್ವೆ ವಿಶ್ವನಾಥ ಶೆಟ್ಟಿ, ಹೇರಂಭ ಶಾಸ್ತ್ರಿ ಮೊದಲಾದವರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.