ಪುತ್ತೂರು: ಚಿಕ್ಕಮುಡ್ನೂರು ಗ್ರಾಮದ ರೋಟರಿಪುರದಲ್ಲಿ ವ್ಯಕ್ತಿಯೋರ್ವರು ನೇಣು ಬಿಗಿದು ಅತ್ಮಹತ್ಯೆ ಮಾಡಿಕೊಂಡ ಘಟನೆ ಡಿ.2 ರಂದು ವರದಿಯಾಗಿದೆ.
ರೋಟರಿಪುರ ದಿ.ಜಗನ್ನಾಥ ರಾವ್ ಮತ್ತು ವಿಜಯಲಕ್ಷ್ಮೀ ದಂಪತಿ ಪುತ್ರ ನಾರಾಯಣ (35.ವ) ಎಂಬವರು ಮೃತಪಟ್ಟವರು. ನಾರಾಯಣ ಅವರು ಮಧ್ಯಾಹ್ನ ಮನೆಯ ಪಕ್ಕಾಸ್ ಗೆ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನಾರಾಯಣ ಅವರ ತಾಯಿ ವಿಜಯಲಕ್ಷ್ಮೀ ಅವರು ಮಧ್ಯಾಹ್ನ ಊಟಕ್ಕೆಂದು ನಾರಾಯಣ ಅವರನ್ನು ಕರೆದಾಗ ಬಾರದ ಹಿನ್ನಲೆಯಲ್ಲಿ ಕೋಣೆಗೆ ಹೋದಾಗ ಮಗ ನೇಣು ಬಿಗಿದಿರುವುದು ಬೆಳಕಿಗೆ ಬಂದಿದೆ. ನಾರಾಯಣ ಅವರ ಪತ್ನಿ ವಾರದ ಹಿಂದೆ ತವರು ಮನೆ ಬೆಳ್ತಂಗಡಿಯಲ್ಲಿ ಪೂಜೆಗೆಂದು ಹೋಗಿದ್ದರು. ಮೃತರು ತಾಯಿ, ಪತ್ನಿ, ಮಗು ಹಾಗೂ ಸಹೋದರಿಯನ್ನು ಅಗಲಿದ್ದಾರೆ.