Home_Page_Advt
Home_Page_Advt
Home_Page_Advt
Breaking News

ಮಠಂತಬೆಟ್ಟು ಮಹಿಷಮರ್ದಿನಿ ದೇವಸ್ಥಾನದಿಂದ ಕುಂಜಾರು, ಕುಂಟ್ಯಾನ ದೇವಸ್ಥಾನಕ್ಕೆ ಭೇಟಿ

ಪುತ್ತೂರು: ಕೋಡಿಂಬಾಡಿ ಮಠಂತಬೆಟ್ಟು ಶ್ರೀ ಮಹಿಷಮರ್ದಿನಿ ದೇವಳದಲ್ಲಿ ನಡೆಯುತ್ತಿರುವ ಜೀರ್ಣೋದ್ಧಾರ ಕಾರ್ಯಗಳು ಮತ್ತು ಮುಂದಿನ ಬ್ರಹ್ಮಕಲಶೋತ್ಸವಕ್ಕೆ ಆಹ್ವಾನಿಸುವ ನಿಟ್ಟಿನಲ್ಲಿ ಸುತ್ತ ಮುತ್ತಲಿನ ಎಲ್ಲಾ ಗ್ರಾಮಗಳ ಸಂಪರ್ಕಿಸಿ ಆಯಾ ಗ್ರಾಮದ ಗ್ರಾಮಸ್ಥರನ್ನು ಭೇಟಿಯಾಗುವ ಕಾರ್ಯಕ್ರಮದ ಅಂಗವಾಗಿ ಪಡ್ನೂರು ಗ್ರಾಮದ ಕುಂಜಾರು ಮದಗ ಶ್ರೀಜನಾರ್ದನ ದೇವಸ್ಥಾನ ಮತ್ತು ಬನ್ನೂರು ಗ್ರಾಮದ ಕುಂಟ್ಯಾನ ಶ್ರೀ ಸದಾಶಿವ ದೇವಾಸ್ಥಾನಗಳ ಆಡಳಿತ ಮಂಡಳಿ, ಊರಿನ ಪ್ರಮುಖರು ಹಾಗೂ ಬೈಲುವಾರು ಸಮಿತಿಗಳ ಮುಖ್ಯಸ್ಥರುಗಳನ್ನು ಭೇಟಿ ಮಾಡಲಾಯಿತು.

ಜೀರ್ಣೋದ್ಧಾರ ಸಮಿತಿಯ ಕಾರ್ಯಾಧ್ಯಕ್ಷ ಸೀತಾರಾಮ ಶೆಟ್ಟಿ ಹೆಗ್ಡೆಹಿತ್ಲು, ಉಪಾಧ್ಯಕ್ಷ ಜಗನ್ನಾಥ ಶೆಟ್ಟಿ ನಡುಮನೆ, ವ್ಯವಸ್ಥಾಪನ ಸಮಿತಿ ಅಧ್ಯಕ್ಷ ನಿರಂಜನ ರೈ ಮಠಂತಬೆಟ್ಟು, ಸದಸ್ಯರುಗಳಾದ ಗಂಗಾಧರ ಶೆಟ್ಟಿ ಮಠಂತಬೆಟ್ಟು, ಜಯಪ್ರಕಾಶ್ ಬದಿನಾರು, ಶ್ರೀನಿವಾಸ ನಾಯ್ಕ ದಾಸಕೋಡಿ, ಮಾಜಿ ಆಡಳಿತ ಮೊಕ್ತೇಸರ ಸಂಕಪ್ಪ ಶೆಟ್ಟಿ ಮಠಂತಬೆಟ್ಟು, ಜೀರ್ಣೋದ್ಧಾರ ಸಮಿತಿಯ ಸಹ ಸಂಚಾಲಕ ಯೋಗೀಶ್.ಯಸ್.ಸಾಮಾನಿ ಸಂಪಿಗೆದಡಿ-ಮಠಂತಬೆಟ್ಟು ಜೊತೆಗಿದ್ದರು. ಕುಂಟ್ಯಾನ ದೇವಸ್ಥಾನದಲ್ಲಿ ರಾಜಶೇಖರ್ ಜೈನ್, ಧರ್ಣಪ್ಪ ಮೂಲ್ಯ, ಕುಂಜಾರು ದೇವಸ್ಥಾನದಲ್ಲಿ ಈಶ್ವರ ಭಟ್ ಸ್ವಾಗತಿಸಿದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.