Home_Page_Advt
Home_Page_Advt
Home_Page_Advt
Breaking News

ಪಣೆಮಜಲು ಮಹಲ್ ಗಲ್ಫ್ ಕಮಿಟಿ ರಚನೆ – ಅಧ್ಯಕ್ಷ: ಯೂಸುಫ್ ಹಾಜಿ, ಪ್ರಧಾನ ಕಾರ್ಯದರ್ಶಿ: ಅಬ್ದುಲ್ ರಹಿಮಾನ್ ಪಿ. ಎಂ.


ಸವಣೂರು: ಪಣೆಮಜಲು ರಹ್ಮಾನಿಯಾ ಜುಮ್ಮಾ ಮಸೀದಿಯ ಅಧೀನದಲ್ಲಿ “ಪಣೆಮಜಲು ಮಹಲ್ ಗಲ್ಫ್ ಕಮಿಟಿ” ಎಂಬ ಹೆಸರಿನಲ್ಲಿ ಅನಿವಾಸಿ ಯುವಕರ ಸಂಘಟನೆಯನ್ನು ನ.29 ರಂದು ದುಬೈಯ ಅಲ್ ಫರ್ದಾನ್ ಅಡಿಟೋರಿಯಂನಲ್ಲಿ ನಡೆದ ಸಭೆಯಲ್ಲಿ ರಚಿಸಲಾಯಿತು. ಅಧ್ಯಕ್ಷತೆಯನ್ನು ವಹಿಸಿ ಪ್ರಾಸ್ತಾವಿಕ ಮಾತನಾಡಿದ ಪಣೆಮಜಲು ರಹ್ಮಾನಿಯಾ ಜುಮ್ಮಾ ಮಸೀದಿಯ ಆಡಳಿತ ಸಮಿತಿಯ ಅಧ್ಯಕ್ಷ ಸಿ.ಎಂ ಮೂಸಾ ಹಾಜಿ ಬೇರಿಕೆ ಮಾತನಾಡಿ ಜಮಾಅತಿನ ಅಭಿವೃದ್ಧಿಗೋಸ್ಕರ ನಮ್ಮ ಯುವಕರು ಇಂತಹ ಒಂದು ಕಮಿಟಿಯನ್ನು ರಚಿಸುತ್ತಿರುವುದು ಸಂತೋಷವಾಗಿದೆ ಈ ಕಾರ್ಯ ಶ್ಲಾಘನೀಯ ಎಂದರು. ಅಶ್ರಫ್ ಖಾನ್ ಮಾಂತೂರು ಮಾತನಾಡಿ ಉದ್ಯೋಗ ನಿಮಿತ್ತ ವಿದೇಶದಲ್ಲಿ ನೆಲೆಸಿರುವ ಯುವಕರು ತಮ್ಮ ಜಮಾ ಅತಿನ ಏಳಿಗೆಗೆ ಶ್ರಮಿಸುವ ಸಲುವಾಗಿ ಇಂತಹ ಕಮೀಟಿಗಳನ್ನು ಸ್ಥಾಪಿಸಿರುವುದು ತುಂಬಾ ಒಳ್ಳೆಯ ಬೆಳವಣಿಗೆ. ಈ ಕಮಿಟಿಯ ಮೂಲಕ ಸಮುದಾಯಕ್ಕೆ ಉತ್ತಮ ಕೊಡುಗೆಗಳನ್ನು ನೀಡಲು ಜಗದೊಡೆಯ ಅಲ್ಲಾಹನು ಅನುಗ್ರಹಿಸಲಿ ಎಂದರು. ನೂರ್ ಮುಹಮ್ಮದ್ ನೀರ್ಕಜೆ ಮಾತನಾಡಿ ಅನಿವಾಸಿ ಯುವಕರು ಸೇರಿ ಕಮಿಟಿಯೊಂದನ್ನು ರಚಿಸುತ್ತಿರುವಾಗ ಜಮಾಅತಿನ ಅಧ್ಯಕ್ಷರೇ ಅಧ್ಯಕ್ಷತೆ ವಹಿಸುತ್ತಿರುವುದು ತಮ್ಮ ಭಾಗ್ಯವೆಂದರು. ತಮ್ಮ ಈ ಕಾರ್ಯವನ್ನು ಅಲ್ಲಾಹನು ಸ್ವೀಕರಿಸಲಿ ಎಂದು ಹಾರೈಸಿದರು. ಅಬ್ಬಾಸ್ ಕೇಕುಡೆಯವರು ನೂತನ ಕಮಿಟಿಗೆ ಶುಭ ಹಾರೈಸಿದರು.

ಪದಾಧಿಕಾರಿಗಳ ಆಯ್ಕೆ: ಸಭೆಯಲ್ಲಿ ಸಮಿತಿಯ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಗೌರವಾಧ್ಯಕ್ಷರಾಗಿ ಅಬ್ದುಲ್ ಹಮೀದ್ ಅರ್ತಿಕೆರೆ ಅಬುಧಾಬಿ, ಅಧ್ಯಕ್ಷರಾಗಿ ಯೂಸುಫ್ ಹಾಜಿ ಬೇರಿಕೆ ಶಾರ್ಜಾ, ಉಪಾಧ್ಯಕ್ಷರಾಗಿ ಹಂಝ ಪಣೆಮಜಲು ಅಬುಧಾಬಿ, ಪ್ರಧಾನ ಕಾರ್ಯದರ್ಶಿಯಾಗಿ ಅಬ್ದುಲ್ ರಹಿಮಾನ್ ಪಿ. ಎಂ. ಅಬುಧಾಬಿ ನೇಮಕಗೊಂಡರು. ಜೊತೆ ಕಾರ್ಯದರ್ಶಿಗಳಾಗಿ ರಫೀಕ್ ಪಣೆಮಜಲು ಸೌದಿ ಅರೇಬಿಯಾ, ಲತೀಫ್ ಪಲ್ಲತ್ತಮೂಲೆ ಶಾರ್ಜಾ, ಖಜಾಂಜಿಯಾಗಿ ಅಶ್ರಫ್ ಅರ್ತಿಕೆರೆ ದುಬೈ, ಸಂಘಟನಾ ಕಾರ್ಯದರ್ಶಿಯಾಗಿ ಹಂಝ ಪಲ್ಲತ್ತಮೂಲೆ ಶಾರ್ಜಾ, ಮುಖ್ಯ ಸಲಹೆಗಾರರಾಗಿ ಫಯಾಝ್ ಪಣೆಮಜಲು ಸೌದಿ ಅರೇಬಿಯಾ, ಸಂಚಾಲಕರಾಗಿ ಸಾದಿಕ್ ಪಲ್ಲತ್ತಮೂಲೆ ದುಬೈ, ಇರ್ಷಾದ್ ಸರ್ವೆ ಅಬುಧಾಬಿ, ಇಸಾಕ್ ಬೇರಿಕೆ ಶಾರ್ಜಾ, ರಝಾಕ್ ಪಲ್ಲತ್ತಮೂಲೆ ಶಾರ್ಜಾ, ಅಬ್ದುಲ್ ರಹಿಮಾನ್ ಕುಕ್ಕುಜೆ ಅಬುಧಾಬಿಯವರನ್ನು ಆಯ್ಕೆ ಮಾಡಲಾಯಿತು.

ಪಣೆಮಜಲು ರಹ್ಮಾನಿಯಾ ಜುಮ್ಮಾ ಮಸೀದಿಯ ಅಧ್ಯಕ್ಷ ಸಿ.ಎಂ ಮೂಸಾ ಹಾಜಿ ಬೇರಿಕೆಯವರನ್ನು ಕಮಿಟಿಯ ವತಿಯಿಂದ ಶಾಲು ಹೊದಿಸಿ ಗೌರವ ಫಲಕ ನೀಡಿ ಸನ್ಮಾನಿಸಲಾಯಿತು. ನೂತನ ಅಧ್ಯಕ್ಷ ಯೂಸುಫ್ ಹಾಜಿ ಬೇರಿಕೆಯವರು ಸಮಾರೋಪ ಮಾತುಗಳನ್ನಾಡಿ ಕಮಿಟಿಯನ್ನು ಮುಂದಕ್ಕೆ ಕೊಂಡೊಯ್ಯಲು ಎಲ್ಲರ ಸಹಕಾರವನ್ನು ಕೋರಿ ಅಭಿನಂದಿಸಿದರು. ಅಶ್ರಫ್ ಆರ್ತಿಕೆರೆ ಸ್ವಾಗತಿಸಿ, ಅಬ್ದುಲ್ ರಹಿಮಾನ್.ಪಿ.ಎಂ ಕಾರ್ಯಕ್ರಮ ನಿರೂಪಿಸಿದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.