Home_Page_Advt
Home_Page_Advt

ಕೆಯ್ಯೂರು ಕರ್ನಾಟಕ ಪಬ್ಲಿಕ್ ಸ್ಕೂಲ್‌ನಲ್ಲಿ ಪ್ರೌಢಶಾಲೆ, ಕಾಲೇಜು ವಿಭಾಗದ ವಾರ್ಷಿಕೋತ್ಸವ

Puttur_Advt_NewsUnder_1
Puttur_Advt_NewsUnder_1

ಮಕ್ಕಳಲ್ಲಿರುವ ಪ್ರತಿಭೆಗಳನ್ನು ಗುರುತಿಸುವ ಕೆಲಸ ಶಿಕ್ಷಕರಿಂದ, ಹೆತ್ತವರಿಂದ ಆಗಬೇಕು: ಮಠಂದೂರು

ಪುತ್ತೂರು: ಕರ್ನಾಟಕ ಪಬ್ಲಿಕ್ ಸ್ಕೂಲ್ ಕೆಯ್ಯೂರಿನಲ್ಲಿ ಪ್ರೌಢಶಾಲೆ ಹಾಗೂ ಕಾಲೇಜು ವಿಭಾಗದ ವಾರ್ಷಿಕೋತ್ಸವವನ್ನು ನ. 29ರಂದು ಆಚರಿಸಲಾಯಿತು. ಶಾಸಕ ಸಂಜೀವ ಮಠಂದೂರು ಕಾರ್ಯಕ್ರಮದ ಅದ್ಯಕ್ಷತೆ ವಹಿಸಿ ವಿದ್ಯಾರ್ಥಿಗಳು ಜೀವನದಲ್ಲಿ ಸಾಧನೆ ಮಾಡಬೇಕು ಎಂಬ ಗುರಿ ಇರಬೇಕು , ಇದಕ್ಕೆ ಪೂರಕವಾಗಿ ಶ್ರಮ ಅಗತ್ಯ, ಆಗ ನೀವು ಸಾಧಿಸಿದ ಗುರಿಯ ಕಡೆಗೆ ಇಡೀ ಸಮಾಜವೇ ನಿಮ್ಮನ್ನು ಗುರುತಿಸಲ್ಪಡುತ್ತದೆ ಎಂದ ಅವರು, ಮಕ್ಕಳಲ್ಲಿರುವ ಪ್ರತಿಭೆಗಳನ್ನು ಗುರುತಿಸುವ ಕೆಲಸ ಶಿಕ್ಷಕರಿಂದ ಮತ್ತು ಹೆತ್ತವರಿಂದ ಆಗಬೇಕಾಗಿದೆ. ಕೆಯ್ಯೂರಿನ ಈ ವಿದ್ಯಾಸಂಸ್ಥೆ ಪಬ್ಲಿಕ್ ಸ್ಕೂಲ್ ಆಗಲಿರುವ ಈ ಸಂದರ್ಭದಲ್ಲಿ ಇಲ್ಲಿನ ಮಕ್ಕಳಿಗೆ ಉತ್ತಮ ಶಿಕ್ಷಣ ಸಿಗುವಂತಾಗಲಿ ಎಂದು ಶುಭ ಹಾರೈಸಿದರು. ತಾಲೂಕು ಪಂಚಾಯತ್ ಸದಸ್ಯೆ ಭವಾನಿ ಚಿದಾನಂದರವರು, ದೀಪ ಪ್ರಜ್ವಲಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿ, ಪ್ರತಿಭಾನ್ವಿತ ಮಕ್ಕಳನ್ನು ಸನ್ಮಾನಿಸಿ ಮಾತನಾಡಿ, ಸರಕಾರಿ ಶಾಲೆಗಳು ಯಾವುದಕ್ಕೂ ಕಡಿಮೆಯಿಲ್ಲ, ಪೋಷಕರು ಮಕ್ಕಳನ್ನು ಸರಕಾರಿ ಶಾಲೆಗಳಿಗೆ ಕಳುಹಿಸಲು ಮುಂದಾಗಬೇಕು .ಮಕ್ಕಳು ಕಲಿತು ಎಷ್ಟೇ ಉನ್ನತ ಹುದ್ದೆಗೇರಿದರೂ ಮೂಲವನ್ನು ಮರೆಯಬಾರದು, ಇಂದಿನ ದಿನಗಳಲ್ಲಿ ಮಕ್ಕಳು ಮೊಬೈಲ್ , ಟಿ.ವಿ.ಗಳಿಂದ ದೂರ ಇದ್ದರೆ ಶಿಕ್ಷಣದಲ್ಲಿ ಮುಂದೆ ಬರಲು ಸಾದ್ಯ ಎಂದು ಹೇಳಿ ಶುಭ ಹಾರೈಸಿದರು.

ಮುಖ್ಯ ಅತಿಥಿಗಳಾಗಿದ್ದ ಕೆಪಿಎಸ್ ಕೆಯ್ಯೂರು ಕಾಲೇಜು ಅಭಿವೃದ್ಧಿ ಸಮಿತಿಯ ಕಾರ್ಯಾಧ್ಯಕ್ಷ ಶಶಿಧರ ರಾವ್ ಬೊಳಿಕ್ಕಳ, ಪ್ರೌಢಶಾಲಾ ಎಸ್ ಡಿ ಎಂ ಸಿ ಕಾರ್ಯಾಧ್ಯಕ್ಷ ಎಸ್.ಬಿ ಜಯರಾಮ ರೈ ಬಳಜ್ಜ, ಪಲ್ಲತ್ತಡ್ಕ ಹೊಸಮ್ಮ ದೈವಸ್ಥಾನದ ಪ್ರದಾನ ಕಾರ್ಯದರ್ಶಿ ಗೋಪಾಲಕೃಷ್ಣ ಮಾಡಾವು, ಕೆಯ್ಯೂರು ಮಾಡಾವು ವರ್ತಕ ಸಂಘದ ಅಧ್ಯಕ್ಷ ಸುಬ್ರಾಯ ಗೌಡ ಮಾಡಾವು, ಗುತ್ತಿಗೆದಾರ ಶಿವರಾಮ ರೈ ಕಜೆ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.

ವಿವಿಧ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ, ಪೂರ್ಣ ಹಾಜರಾತಿ ಪಡೆದವರಿಗೆ, ತರಗತಿವಾರು ಅತ್ಯುತ್ತಮ ಅಂಕ ಪಡೆದವರಿಗೆ ಬಹುಮಾನಗಳನ್ನು ಈ ಸಂದರ್ಭದಲ್ಲಿ ನೀಡಿ ಪ್ರೋತ್ಸಾಹಿಸಲಾಯಿತು. ಕ್ರೀಡೆಯಲ್ಲಿನ ವೈಯಕ್ತಿಕ ಚಾಂಪಿಯನ್ ಗಳನ್ನು, ವಾರ್ಷಿಕ ಸಮಗ್ರ ಪ್ರಶಸ್ತಿ ಪಡೆದ ತಂಡಗಳನ್ನು, ಎಸ್ ಎಸ್ ಎಲ್ ಸಿ ಯಲ್ಲಿ ಶೇಕಡಾ ನೂರು ಫಲಿತಾಂಶ ದಾಖಲಿಸಿದ ತಂಡವನ್ನು, ಪಿಯುಸಿ ಹಾಗೂ ಎಸ್ ಎಸ್ ಎಲ್ ಸಿ ಯಲ್ಲಿ ವಿಶಿಷ್ಟ ಶ್ರೇಣಿ ಹಾಗೂ ಅತ್ಯಧಿಕ ಅಂಕ ಪಡೆದವರನ್ನು ಸನ್ಮಾನಿಸಲಾಯಿತು. ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರ ವಿವರಗಳನ್ನು ಹೈಸ್ಕೂಲ್ ವಿಭಾಗದಿಂದ ಶಿಕ್ಷಕರಾದ ನಳಿನಿ ಡಿ, ಸೌಮ್ಯ ಶೆಟ್ಟಿ ಹಾಗೂ ಇಂದಿರಾ ಪಿ ವಾಚಿಸಿದರು. ಕಾಲೇಜು ವಿಭಾಗದಿಂದ ಉಪನ್ಯಾಸಕರಾದ ಜಯಶ್ರೀ, ಗುಣಶೀಲ ಕೆ.ಎನ್, ಅರ್ಚನಾ ರಾವ್, ಶಿವಪ್ರಭಾ ಹಾಗೂ ಚಂದ್ರಿಕಾ ಬಹುಮಾನ ವಿಜೇತರ ಪಟ್ಟಿಯನ್ನು ಓದಿದರು. ಸಾಧಕ ವಿದ್ಯಾರ್ಥಿಗಳ ಸನ್ಮಾನ , ಶಿಕ್ಷಕರ ಸನ್ಮಾನ ಹಾಗೂ ಸಮಗ್ರ ಪ್ರಶಸ್ತಿಗಳ ವಿವರಗಳನ್ನು ಉಪಪ್ರಾಂಶುಪಾಲ ವಿನೋದ್ ಕುಮಾರ್ ಕೆ ಎಸ್ ಮುಂದಿಟ್ಟರು. ವಿಷಯವಾರು ಶಿಕ್ಷಕರು ಹಾಗೂ ಉಪನ್ಯಾಸಕರು ಎಸ್ ಎಸ್ ಎಲ್ ಸಿ ಹಾಗೂ ಪಿ ಯು ಸಿ ವಾರ್ಷಿಕ ಪರೀಕ್ಷೆಗಳಲ್ಲಿ ಅತ್ಯಧಿಕ ಅಂಕ ಗಳಿಸಿದವರಿಗೆ ನಗದು ಬಹುಮಾನ ನೀಡಿದರು. ಇದೇ ಸಂದರ್ಭದಲ್ಲಿ ವಿವಿಧ ದಾನಿಗಳು ಸ್ಥಾಪಿಸಿದ ದತ್ತಿನಿಧಿಗಳ ಬಹುಮಾನವನ್ನೂ ವಿತರಿಸಲಾಯಿತು.


ಶಾಲಾ ವಿದ್ಯಾರ್ಥಿಗಳು ಪ್ರಾರ್ಥಿಸಿ, ಕಾಲೇಜು ಉಪನ್ಯಾಸಕ ಇಸ್ಮಾಯಿಲ್ ಸ್ವಾಗತಿಸಿ, ಹಿಂದಿ ಶಿಕ್ಷಕ ಜಗದೀಶ್ ಜಿ.ಎಂ ವಂದಿಸಿದರು. ಕಾಲೇಜಿನ ಪ್ರಾಂಶುಪಾಲೆ ಗೀತಾ.ಬಿ. ಹಾಗೂ ಉಪಪ್ರಾಂಶುಪಾಲ ವಿನೋದ್ ಕುಮಾರ್ ಕೆ ಎಸ್ ವರದಿಗಳನ್ನು ವಾಚಿಸಿದರು. ಉಪನ್ಯಾಸಕಿ ಉಮಾಶಂಕರಿ ಹಾಗೂ ಆಂಗ್ಲ ಭಾಷಾ ಶಿಕ್ಷಕಿ ಜೆಸ್ಸಿ ಪಿ.ವಿ. ಕಾರ್ಯಕ್ರಮ ನಿರೂಪಿಸಿದರು. ಮಧ್ಯಾಹ್ನದ ಬಳಿಕ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಕಾಲೇಜು ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳು ಕಾರ್ಯಕ್ರಮ ನಿರೂಪಿಸಿದರು. ವಿವಿಧ ನೃತ್ಯಗಳು ಹಾಗೂ ರೂಪಕಗಳನ್ನು ಪ್ರದರ್ಶಿಸಿದರು. ಎಸ್ ಡಿ ಎಂ ಸಿ ಹಾಗೂ ಕಾಲೇಜು ಅಭಿವೃದ್ಧಿ ಸಮಿತಿಯ ಸದಸ್ಯರು, ಗ್ರಾಮ ಪಂಚಾಯತ್ ಸದಸ್ಯರು, ಮಕ್ಕಳ ಪೋಷಕರು, ಹಳೆ ವಿದ್ಯಾರ್ಥಿಗಳು, ವಿದ್ಯಾಭಿಮಾನಿಗಳು, ಸಂಸ್ಥೆಯ ಕಛೇರಿ ಸಿಬ್ಬಂದಿ, ಅಡುಗೆ ಸಿಬ್ಬಂದಿ, ಉಪನ್ಯಾಸಕರು ಹಾಗೂ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.