Home_Page_Advt
Home_Page_Advt
Home_Page_Advt
Breaking News

ಮಂಗಳೂರಿನಲ್ಲಿ ಪತ್ರಕರ್ತರ ವಾರ್ಷಿಕ ಕ್ರೀಡಾಕೂಟ: ಕ್ರಿಕೆಟ್ ಪಂದ್ಯಾಟದಲ್ಲಿ ಸುದ್ದಿ ಬಿಡುಗಡೆ ಚಾಂಪಿಯನ್

ಪ್ರಥಮ ಸ್ಥಾನ ಪಡೆದ ಸುದ್ದಿ ಬಿಡುಗಡೆ ತಂಡಕ್ಕೆ ಡಾ.ಎಂ.ಎನ್. ರಾಜೇಂದ್ರ ಕುಮಾರ್‌ರವರು ಬಹುಮಾನ ವಿತರಿಸುತ್ತಿರುವುದು

ಪುತ್ತೂರು: ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ದ.1ರಂದು ಮಂಗಳೂರಿನ ನೆಹರೂ ಮೈದಾನದ ಬಳಿಯ ಫುಟ್ಬಾಲ್ ಕ್ರೀಡಾಂಗಣದಲ್ಲಿ ನಡೆದ ಪತ್ರಕರ್ತರ ವಾರ್ಷಿಕ ಕ್ರೀಡಾಕೂಟದ ಕ್ರಿಕೆಟ್ ಪಂದ್ಯಾಟದಲ್ಲಿ ಪುತ್ತೂರು ಸುದ್ದಿ ಬಿಡುಗಡೆ ತಂಡ ಪ್ರಥಮ ಸ್ಥಾನಿಯಾಗಿದೆ. ವಿ೪ ಮಂಗಳೂರು ತಂಡ ದ್ವಿತೀಯ ಸ್ಥಾನ ಗಳಿಸಿದೆ. ಮಂಗಳೂರು ಪ್ರೆಸ್‌ಕ್ಲಬ್ ಮತ್ತು ಪತ್ರಿಕಾ ಭವನ ಟ್ರಸ್ಟ್‌ನ ಸಹಕಾರದೊಂದಿಗೆ ನಡೆದ ವಾರ್ಷಿಕ ಕ್ರೀಡಾಕೂಟದಲ್ಲಿ ಹಲವು ಸ್ಪರ್ಧೆಗಳು ನಡೆದಿದ್ದು ಕ್ರಿಕೆಟ್ ಪಂದ್ಯಾಕೂಟದಲ್ಲಿ ಒಟ್ಟು 13 ತಂಡಗಳು ಭಾಗಿಯಾಗಿತ್ತು. ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಎಸ್‌ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಡಾ. ಎಂ.ಎನ್. ರಾಜೇಂದ್ರ ಕುಮಾರ್, ನಿರ್ದೇಶಕ ಬೆಳಪು ದೇವಿಪ್ರಸಾದ್ ಶೆಟ್ಟಿ, ವಿಜಯ ಕರ್ನಾಟಕ ದಿನಪತ್ರಿಕೆಯ ಸ್ಥಾನೀಯ ಸಂಪಾದಕ ಯು.ಕೆ. ಕುಮಾರನಾಥ್, ಜಿಲ್ಲಾ ವಾರ್ತಾಧಿಕಾರಿ ಬಿ.ಎ. ಖಾದರ್ ಶಾ ಮತ್ತು ಉದ್ಯಮಿ ದಿಲ್‌ರಾಜ್ ಆಳ್ವರವರು ಬಹುಮಾನ ವಿತರಿಸಿ ಶುಭ ಹಾರೈಸಿದರು. ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ, ಪ್ರಧಾನ ಕಾರ್ಯದರ್ಶಿ ಇಬ್ರಾಹಿಂ ಅಡ್ಕಸ್ಥಳ, ಪದಾಧಿಕಾರಿಗಳಾದ ಭಾಸ್ಕರ ರೈ ಕಟ್ಟ, ಆರ್.ಸಿ. ಭಟ್, ದಯಾ ಕುಕ್ಕಾಜೆ, ಜಿತೇಂದ್ರ ಕುಂದೇಶ್ವರ, ಸುರೇಶ್ ಡಿ. ಪಳ್ಳಿ ಮತ್ತಿತರರು ವಿವಿಧ ಕಾರ್ಯಕ್ರಮ ನಿರ್ವಹಿಸಿದರು.

ಸುದ್ದಿ ಬಿಡುಗಡೆ ಚಾಂಪಿಯನ್:
ಪ್ರಥಮ ಸುತ್ತಿನ ಪಂದ್ಯಾಟದಲ್ಲಿ ಮಂಗಳೂರು ವಾರಿಯರ್ಸ್, ದ್ವಿತೀಯ ಸುತ್ತಿನಲ್ಲಿ ಹೊಸ ದಿಗಂತ ತಂಡ, ಸೆಮಿಫೈನಲ್‌ನಲ್ಲಿ ನಮ್ಮ ಕುಡ್ಲ ಲೈವ್ ತಂಡ ಮತ್ತು ಫೈನಲ್ ಪಂದ್ಯಾಟದಲ್ಲಿ ವಿ4 ತಂಡವನ್ನು ಸೋಲಿಸಿದ ಪುತ್ತೂರು ಸುದ್ದಿ ಬಿಡುಗಡೆ ತಂಡ ಚಾಂಪಿಯನ್ ಆಗಿ ಹೊರ ಹೊಮ್ಮಿತು. ವಿ4 ಮಂಗಳೂರು ತಂಡ ರನ್ನರ್ಸ್ ಪ್ರಶಸ್ತಿಗೆ ಭಾಜನವಾಯಿತು.

ಸುದ್ದಿ ಬಿಡುಗಡೆ ತಂಡದಲ್ಲಿ ಶೋಭರಾಜ್ ಉರ್ಲಾಂಡಿ, ಶಿವ ಕುಮಾರ್ ಆರ್ಲಪದವು ಮತ್ತು ಯೂಸುಫ್ ರೆಂಜಲಾಡಿರವರು ಆಲ್‌ರೌಂಡ್ ಆಟ ಪ್ರದರ್ಶಿಸಿದರು. ಉಳಿದಂತೆ ಸುದ್ದಿ ತಂಡದಲ್ಲಿ ಸಂತೋಷ್ ಕುಮಾರ್ ಶಾಂತಿನಗರ(ನಾಯಕ), ಫಾರೂಕ್ ಶೇಖ್ ಮುಕ್ವೆ(ಉಪನಾಯಕ), ಲೋಕೇಶ್ ಬನ್ನೂರು, ರಮೇಶ್ ಬೆಳ್ಳಿಪ್ಪಾಡಿ, ಶ್ರೇಯಸ್ ಸೂತ್ರಬೆಟ್ಟು, ಅಭಿಷೇಕ್, ಸುಮನ್‌ರಾಜ್ ರೆನ್ಯ ಮತ್ತು ಪ್ರಶಾಂತ್ ಮಿತ್ತಡ್ಕರವರು ಸಹ ಆಟಗಾರರಾಗಿದ್ದರು. ಸುದ್ದಿ ಬಿಡುಗಡೆ ಸಿಇಓ ಸೃಜನ್ ಊರುಬೈಲುರವರು ಉಪಸ್ಥಿತರಿದ್ದರು. ಗೋಣಿ ಚೀಲ ಓಟದ ಸ್ಪರ್ಧೆಯಲ್ಲಿ ಸುದ್ದಿ ಬಿಡುಗಡೆಯ ಪ್ರಶಾಂತ್ ಮಿತ್ತಡ್ಕರವರು ಪ್ರಥಮ ಸ್ಥಾನ ಪಡೆದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.