Home_Page_Advt
Home_Page_Advt
Home_Page_Advt
Breaking News

ಕಲ್ಲಂದಡ್ಕ ಶೂಟೌಟ್ ಪ್ರಕರಣ – ಕಸ್ಟಡಿಯಲ್ಲಿದ್ದ ಪ್ರಮುಖ ಸಾಧಿಕ್ ಗೆ ನ್ಯಾಯಾಂಗ ಬಂಧನ

ಪುತ್ತೂರು: ಕೊಡಿಪಾಡಿ ಗ್ರಾಮದ ಕಲ್ಲಂದಡ್ಕದಲ್ಲಿ ನ.26ರಂದು ಮುಸ್ಸಂಜೆ ವೇಳೆ ನಡೆದ ಶೂಟೌಟ್ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸ್ ಕಸ್ಟಡಿಯಲ್ಲಿರುವ ಪ್ರಮುಖ ಆರೋಪಿ ಸಾಧಿಕ್ ಅಲಿಯಾಸ್ ಬ್ಲೇಡ್ ಸಾಧಿಕ್ ಅಲಿಯಾಸ್ ಹಸನ್ ಸಾಧಿಕ್ ಅವರನ್ನು ಡಿ.2ರಂದು ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯ ಆರೋಪಿಗೆ ಡಿ.11ರ ತನಕ ನ್ಯಾಯಾಂಗ ಬಂಧನ ವಿಧಿಸಿದೆ.

ಪೊಲೀಸ್ ಕಸ್ಟಡಿಯಲ್ಲಿದ್ದ ಆರೋಪಿ ಬ್ಲೇಡ್ ಸಾಧಿಕ್ ವಿಚಾರಣೆ ವೇಳೆ ಆತನಿಂದ ಕೃತ್ಯಕ್ಕೆ ಬಳಸಲಾಗಿದ್ದ ಪಿಸ್ತೂಲ್‌ನ್ನು ವಶಕ್ಕೆ ಪಡೆದು ಕೊಳ್ಳಲಾಗಿತ್ತು. ಬಳಿಕ ಕೃತ್ಯಕ್ಕಾಗಿ ಸಂಚು ರೂಪಿಸಿದ ವಿಟ್ಲದ ಸ್ಥಳದ ಪರಿಶೀಲನೆ ಮಾಡಿದ ಬಳಿಕ ಇದೀಗ ಆರೋಪಿ ಬ್ಲೇಡ್ ಸಾಧಿಕ್ ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ನ್ಯಾಯಾಲಯ ಆರೋಪಿಗೆ ಡಿ.11ರ ತನಕ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಶೂಟೌಟ್ ಪ್ರಕರಣಕ್ಕೆ ಸಂಬಂಧಿಸಿ ಉಳಿದ ಆರೋಪಿಗಳಿಗೆ ಪೊಲೀಸರು ಶೋಧ ಕಾರ್ಯ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.