ರಾಮಕುಂಜ ಪ.ಪೂ.ಕಾಲೇಜು, ಪ್ರೌಢಶಾಲಾ ಪ್ರತಿಭಾ ಪುರಸ್ಕಾರ

Puttur_Advt_NewsUnder_1
Puttur_Advt_NewsUnder_1
  • ಶಾಲೆಗಳಲ್ಲಿ ಜೀವನ ಪಾಠವೂ ಸಿಗಬೇಕು: ಶಗ್ರಿತ್ತಾಯ
  • ಸಾಧನೆ ಇತರೇ ವಿದ್ಯಾರ್ಥಿಗೆ ಪ್ರೇರಣೆಯಾಗಬೇಕು: ಬೋರ್ಕರ್
  • ಸಾಧಕರ ಸಾಧನೆ ದಾರಿದೀಪ ಆಗಬೇಕು: ನಾಗರಾಜ್ ಎನ್.ಕೆ.

ರಾಮಕುಂಜ: ಶ್ರೀ ರಾಮಕುಂಜೇಶ್ವರ ಪದವಿ ಪೂರ್ವ ಕಾಲೇಜು ಮತ್ತು ಶ್ರೀ ರಾಮಕುಂಜೇಶ್ವರ ಕ.ಮಾ.ಪ್ರೌಢಶಾಲೆಯಲ್ಲಿ ೨೦೧೯-೨೦ನೇ ಶೈಕ್ಷಣಿಕ ಸಾಲಿನ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ದ.೨ರಂದು ನಡೆಯಿತು.

ಶೈಕ್ಷಣಿಕ ಮಾರ್ಗದರ್ಶನ ನೀಡಿದ ರಾಷ್ಟ್ರಪ್ರಶಸ್ತಿ ಪುರಸ್ಕೃತ ನಿವೃತ್ತ ಮುಖ್ಯಶಿಕ್ಷಕ ಬಿ.ವಿ.ಶಗ್ರಿತ್ತಾಯರವರು, ಶಿಕ್ಷಣ ಮಕ್ಕಳಲ್ಲಿ ಆತ್ಮಬಲ ವೃದ್ಧಿಸಬೇಕು. ಶಾಲೆಯ ವಾತಾವರಣವೂ ಕಲಿಕೆಗೆ ಪೂರಕವಾಗಿರಬೇಕು. ಶಿಕ್ಷಣ ಪಡೆಯುವುದು ಕೇವಲ ಅಂಕಗಳಿಕೆಯ ಒಂದೇ ಉದ್ದೇಶವಲ್ಲ. ಐಎಎಸ್, ಡಾಕ್ಟರ್, ಇಂಜಿನಿಯರ್ ಆಗಬೇಕೆಂಬ ಒಂದೇ ಕನಸು ಬೇಡ. ಕೃಷಿಯ ಬಗ್ಗೆಯೂ ವಿದ್ಯಾರ್ಥಿಗಳಲ್ಲಿ ಆಸಕ್ತಿ ಮೂಡಿಸಬೇಕು. ಜೊತೆಗೆ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಜೀವನ ಪಾಠವೂ ಸಿಗಬೇಕೆಂದು ಹೇಳಿದರು. ವಿದ್ಯಾರ್ಥಿಗಳಿಗೆ ಏನು ಬೇಕು ? ಹೇಗಿರಬೇಕು ?ಎಂಬುದನ್ನು ಶಿಕ್ಷಕರು ಕಲಿಸಿಕೊಡಬೇಕು. ಮಕ್ಕಳ ಮೇಲೆ ಶಿಕ್ಷಕರು ಪ್ರೀತಿ ತೋರಿಸಬೇಕು, ಇದರಿಂದ ಮಕ್ಕಳಲ್ಲಿ ಕಲಿಯುವ ಆಸಕ್ತಿ, ಶಿಸ್ತು ಉತ್ತಮಗೊಳ್ಳುತ್ತದೆ ಎಂದು ಬಿ.ವಿ.ಶಗ್ರಿತ್ತಾಯರು ಹೇಳಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ತಾ.ಪಂ.ಅಧ್ಯಕ್ಷ ರಾಧಾಕೃಷ್ಣ ಬೋರ್ಕರ್‌ರವರು ಮಾತನಾಡಿ, ವಿದ್ಯಾರ್ಥಿಗಳಲ್ಲಿ ಧನಾತ್ಮಕ ಚಿಂತನೆ, ಬೇರೆ ಬೇರೆ ರೀತಿಯ ಆಲೋಚನೆ ಹಾಗೂ ಆತ್ಮವಿಶ್ವಾಸ, ಛಲ ಇರಬೇಕು. ವಿದ್ಯಾರ್ಥಿಯ ಸಾಧನೆ ಇತರೇ ವಿದ್ಯಾರ್ಥಿಗಳಿಗೆ ಪ್ರೇರಣೆಯಾಗಬೇಕು. ಒಳ್ಳೆಯ ಸ್ನೇಹಿತನ ಸ್ನೇಹ ಬೆಳೆಸಿಕೊಂಡಲ್ಲಿ ಆದರ್ಶ ವಿದ್ಯಾರ್ಥಿಯಾಗಬಹುದು. ಪೋಷಕರ ಆಕಾಂಕ್ಷೆ ಈಡೇರಿಸುವ ಜವಾಬ್ದಾರಿ ವಿದ್ಯಾರ್ಥಿ ಮೇಲಿದೆ ಎಂದು ಹೇಳಿದ ಅವರು, ರಾಮಕುಂಜ ಪ್ರೌಢಶಾಲೆಯಲ್ಲಿರುವ ಗಣಿತ ಪ್ರಯೋಗಾಲಯ ಅತ್ಯುತ್ತಮವಾಗಿದೆ. ಆಧುನಿಕ ತಂತ್ರಜ್ಞಾನ ಉಪಯೋಗಿಸಿಕೊಂಡು ರಚನೆಯಾಗಿರುವ ಇಂತಹ ಗಣಿತ ಪ್ರಯೋಗಾಲಯ ತಾಲೂಕಿನ ಬೇರೆ ಎಲ್ಲೂ ಇಲ್ಲ ಎಂದು ಮೆಚ್ಚುಗೆ ಸೂಚಿಸಿದರು. ಮುಖ್ಯ ಅತಿಥಿಯಾಗಿದ್ದ ಕಡಬ ಕದಂಬ ಚಾರಿಟೇಬಲ್ ಟ್ರಸ್ಟ್‌ನ ಅಧ್ಯಕ್ಷ , ಉದಯವಾಣಿ ಪತ್ರಿಕೆ ಕಡಬ ವರದಿಗಾರ ನಾಗರಾಜ್ ಎನ್.ಕೆ. ಮಾತನಾಡಿ, ರಾಮಕುಂಜದ ವಿದ್ಯಾಸಂಸ್ಥೆ ಅಂಕಗಳಿಕೆಗೆ ಮಾತ್ರ ಒತ್ತು ನೀಡದೇ ವಿದ್ಯಾರ್ಥಿಗಳಿಗೆ ಮೌಲ್ಯಾಧರಿತ, ಸಂಸ್ಕಾರಯುತ ಶಿಕ್ಷಣ ನೀಡುತ್ತಿದೆ. ಆಧುನಿಕ ತಂತ್ರಜ್ಞಾನದಿಂದಾಗಿ ವಿದ್ಯಾರ್ಥಿಗಳು ಸಾಕಷ್ಟು ಅನುಭವ ಪಡೆದುಕೊಳ್ಳುತ್ತಿದ್ದಾರೆ. ಸಾಕಷ್ಟು ಪ್ರಯತ್ನ, ಸೋಲುಗಳೇ ಮುಂದಿನ ಯಶಸ್ವಿಗೆ ಕಾರಣವಾಗುತ್ತದೆ. ವಿದ್ಯಾರ್ಥಿಗಳಿಗೆ ಸಾಧಕರ ಸಾಧನೆಗಳು ದಾರಿದೀಪವಾಗಬೇಕೆಂದು ಹೇಳಿದರು.

ತಾ.ಪಂ.ಸದಸ್ಯೆಯರಾದ ತೇಜಸ್ವಿನಿಶೇಖರ ಗೌಡ, ಜಯಂತಿ ಆರ್.ಗೌಡ, ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷ ಕೃಷ್ಣಪ್ರಸಾದ್, ಶ್ರೀ ರಾಮಕುಂಜೇಶ್ವರ ವಿದ್ಯಾವರ್ಧಕ ಸಭಾದ ಕಾರ್ಯದರ್ಶಿ ರಾಧಾಕೃಷ್ಣ ಕೆ.ಎಸ್., ಸಂಚಾಲಕ ಟಿ.ನಾರಾಯಣ ಭಟ್, ಕೋಶಾಧಿಕಾರಿ ಕೆ.ಸೇಸಪ್ಪ ರೈ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಬಹುಮಾನ ವಿತರಣೆ:
ಪ್ರಸ್ತುತ ಶೈಕ್ಷಣಿಕ ಸಾಲಿನಲ್ಲಿ ಕಲಿಕೆ, ಸಾಂಸ್ಕೃತಿಕ, ಕ್ರೀಡಾ ಸ್ಪರ್ಧೆ ಹಾಗೂ ಇತರೇ ಚಟುವಟಿಕೆಗಳಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ಮಾಡಲಾಯಿತು. ದತ್ತಿನಿಧಿ ಬಹುಮಾನ, ಹಳೆವಿದ್ಯಾರ್ಥಿ ಸಂಘದಿಂದ ಕೊಡಮಾಡಿದ ವಿದ್ಯಾರ್ಥಿ ವೇತನವೂ ವಿತರಣೆ ಮಾಡಲಾಯಿತು. ಉಪನ್ಯಾಸಕರಾದ ಗಣರಾಜ್ ಕುಂಬ್ಳೆ, ಚಂದ್ರಶೇಖರ್, ದೈಹಿಕ ಶಿಕ್ಷಣ ನಿರ್ದೇಶಕ ರಾಧಾಕೃಷ್ಣ, ಶಿಕ್ಷಕರಾದ ಪ್ರವೀಣ್‌ಕುಮಾರ್, ದಿನೇಶ್, ಪುಷ್ಪಾವತಿ, ನಿಶ್ಮಿತ, ಭವ್ಯ, ವಿದ್ಯಾರ್ಥಿನಿ ಜಯಶ್ರೀ, ದೈಹಿಕ ಶಿಕ್ಷಣ ಶಿಕ್ಷಕಿ ಪ್ರಫುಲ್ಲ ಮತ್ತಿತರರು ವಿವಿಧ ಕಾರ್ಯಕ್ರಮ ನಿರ್ವಹಿಸಿದರು.

ಗೌರವಾರ್ಪಣೆ:
ಶೈಕ್ಷಣಿಕ ಮಾರ್ಗದರ್ಶನ ನೀಡಿದ ನಿವೃತ್ತ ಮುಖ್ಯಶಿಕ್ಷಕ ಬಿ.ವಿ.ಶಗ್ರಿತ್ತಾಯ, ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ತಾ.ಪಂ.ಅಧ್ಯಕ್ಷ ರಾಧಾಕೃಷ್ಣ ಬೋರ್ಕರ್, ಮುಖ್ಯ ಅತಿಥಿ ನಾಗರಾಜ್ ಎನ್.ಕೆ., ತಾ.ಪಂ.ಸದಸ್ಯೆ ತೇಜಸ್ವಿನಿ ಶೇಖರ ಗೌಡರವರವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಿ ಗೌರವಿಸಲಾಯಿತು. ಪ.ಪೂ.ಕಾಲೇಜು ವಿದ್ಯಾರ್ಥಿ ನಾಯಕಿ ಜ್ಯೋತಿಕ ಹಾಗೂ ಪ್ರೌಢಶಾಲಾ ವಿದ್ಯಾರ್ಥಿ ನಾಯಕ ತಿಲಕ್‌ರಾಜ್ ವರದಿ ಮಂಡಿಸಿದರು. ಶ್ರೀ ರಾಮಕುಂಜೇಶ್ವರ ಕನ್ನಡ ಮಾಧ್ಯಮ ಪ್ರೌಢಶಾಲಾ ಮುಖ್ಯಶಿಕ್ಷಕ ಸತೀಶ್ ಭಟ್ ಸ್ವಾಗತಿಸಿದರು. ಶ್ರೀ ರಾಮಕುಂಜೇಶ್ವರ ಪ.ಪೂ.ಕಾಲೇಜಿನ ಪ್ರಾಂಶುಪಾಲ ಸತೀಶ್ ಭಟ್ ವಂದಿಸಿದರು. ಶಿಕ್ಷಕ ಬಾಲಕೃಷ್ಣ ಮುಂಚಿತ್ತಾಯ ಕಾರ್ಯಕ್ರಮ ನಿರೂಪಿಸಿದರು.

ಎಸ್‌ಎಸ್‌ಎಲ್‌ಸಿ ಫಲಿತಾಂಶ ಹೆಚ್ಚಿಸುವ ನಿಟ್ಟಿನಲ್ಲಿ ಶಾಲೆಗಳಿಗೆ ಭೇಟಿ:
ಎಸ್‌ಎಸ್‌ಎಲ್‌ಸಿ ಪರೀಕ್ಷಾ ಫಲಿತಾಂಶ ಹೆಚ್ಚಿಸುವ ನಿಟ್ಟಿನಲ್ಲಿ ಕಳೆದ ವರ್ಷ ಎಲ್ಲಾ ಶಾಲೆಗಳ ಮುಖ್ಯಶಿಕ್ಷಕರ ಸಭೆ ಕರೆದು ಚರ್ಚೆ ನಡೆಸಲಾಗಿದೆ. ಈ ಭಾರಿ ಕೆಲವೇ ದಿನಗಳಲ್ಲಿ ತಾ.ಪಂ.ನ ತಂಡ ಪ್ರತಿ ಶಾಲೆಗಳಿಗೆ ಭೇಟಿ ನೀಡಿ ಪ್ರೋತ್ಸಾಹ ನೀಡಲಿದೆ. ತಾಲೂಕಿನಲ್ಲಿ ೯೫+ ಫಲಿತಾಂಶ ಪಡೆಯುವ ನಿಟ್ಟಿನಲ್ಲಿ ಪ್ರಯತ್ನಿಸುತ್ತೇವೆ ಎಂದು ತಾ.ಪಂ.ಅಧ್ಯಕ್ಷ ರಾಧಾಕೃಷ್ಣ ಬೋರ್ಕರ್ ಹೇಳಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.