Home_Page_Advt
Home_Page_Advt
Home_Page_Advt

ಮಠಂತಬೆಟ್ಟು ಮಹಿಷಮರ್ದಿನಿ ದೇವಳದ‌ ಬ್ರಹ್ಮಕಲಶದ ಹಿನ್ನೆಲೆ: ಡಿ.8 – ಗದ್ದೆಕೋರಿ‌ ಕಾರ್ಯಕ್ರಮ

ಪುತ್ತೂರು: ಮುಂಬರುವ ಏಪ್ರಿಲ್ ನಲ್ಲಿ ಅಷ್ಟಬಂಧ ಬ್ರಹ್ಮಕಲಶ ನಡೆಯಲಿರುವ ಕೋಡಿಂಬಾಡಿ ಗ್ರಾಮದ ಮಠಂತಬೆಟ್ಟು ಶ್ರೀ ಮಹಿಷಮರ್ದಿನಿ ದೇವಿಗೆ ಸಮರ್ಪಣೆಯಾಗಲಿರುವ ಅಕ್ಕಿಯನ್ನು ನಮ್ಮ ನಡಿಗೆ ಗದ್ದೆ ಕಡೆಗೆ ಎಂಬ ಶೀರ್ಷಿಕೆಯಡಿ ನಮ್ಮ ಮನದ ದೇವಿಗೆ ನಮ್ಮ ಮನೆಯ ಅಕ್ಕಿ ಎಂಬ

ಧ್ಯೇಯದೊಂದಿಗೆ ಭಗವದ್ಭಕ್ತರೇ ಸೇರಿ ಭತ್ತ ನಾಟಿ ಮಾಡುವ ಭಕ್ತಿ ಕಾರ್ಯಕ್ರಮದ ಪ್ರಯುಕ್ತ ಡಿ.8ರಂದು ಗದ್ದೆ ಕೋರಿ ಕಾರ್ಯಕ್ರಮ ನಡೆಯಲಿದೆ.
ನ.3ರಂದು ಶ್ರೀ ದೇವಿಗೆ ಪೂಜೆ ಸಲ್ಲಿಸಿ, ಬೇಸಾಯದ ಭತ್ತವನ್ನು ಚೆಂಡೆ, ವಾದ್ಯದ ನಾದದೊಂದಿಗೆ ಮೆರವಣಿಗೆಯ ಮೂಲಕ ಕೋಡಿಂಬಾಡಿಯ ಬರಮೇಲು, ಪಲ್ಲತ್ತಾರು ಬಾಕಿಮಾರು ಗದ್ದೆಗೆ ತೆಗೆದುಕೊಂಡು ಹೋಗಿ ಈ ಮಹತ್ಕಾರ್ಯದ ಉದ್ಘಾಟನಾ ಕಾರ್ಯಕ್ರಮ ಧಾರ್ಮಿಕ ವಿಧಿ ವಿಧಾನದೊಂದಿಗೆ ನಡೆಸಿ, ಶ್ರಮದಾನದ ಮೂಲಕ ಗದ್ದೆಯನ್ನು ಬಿತ್ತನೆಗೆ ತಯಾರು ಮಾಡಿ ಭತ್ತದ ಬಿತ್ತನೆ ಕಾರ್ಯವನ್ನು ನಡೆಸಲಾಗಿತ್ತು.ಇದೀಗ, ಬಿತ್ತಿದ ಆ ಬೀಜವು ಮೊಳಕೆಯೊಡೆದು ಬೆಳೆದು ನಾಟಿ ಮಾಡಲು ತಯಾರಾಗಿ ನಿಂತಿದ್ದು ದ.8ರಂದು ಬೆಳಿಗ್ಗೆ ಗಂಟೆ 9ಕ್ಕೆ ನೇಜಿಯನ್ನು ನಾಟಿ ಮಾಡುವ ಗದ್ದೆಕೋರಿ (ಕಂಡದಕೋರಿ)ಕಾರ್ಯಕ್ರಮವು ತುಳುನಾಡಿನ ಬೇಸಾಯದ ಪರಂಪರೆಯನ್ನು ನೆನಪಿಸುವಂತೆ ಬರಮೇಲು, ಪಲ್ಲತ್ತಾರು ಬಾಕಿಮಾರು ಗದ್ದೆಯಲ್ಲಿ ಶಾಸ್ತ್ರಬಧ್ಧವಾಗಿ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.