Home_Page_Advt
Home_Page_Advt
Home_Page_Advt

ದ.ಕ ಕಾರ್ಯಕರ್ತರು ಮನಸ್ಸು ಮಾಡಿದರೆ ದೇಶದ ಚಿತ್ರಣ ಬದಲಾಯಿಸಬಲ್ಲರು: ಬಿಜೆಪಿ ಕಚೇರಿಯಲ್ಲಿ ಕಾರ್ಯಕರ್ತರೊಂದಿಗೆ ಸಚಿವ ಜೆ.ಸಿ ಮಾಧುಸ್ವಾಮಿ

ಪುತ್ತೂರು: ದ.ಕ ಜಿಲ್ಲೆಯ ಕಾರ್ಯಕರ್ತರು ಮನಸ್ಸು ಮಾಡಿದರೆ ದೇಶದ ಚಿತ್ರಣ ಬದಲಾಯಿಸಬಲ್ಲರು ಅಂತಹ ಕಾರ್ಯಕರ್ತರು ಇಲ್ಲಿದ್ದಾರೆ ಎಂದು ಕಾನೂನು, ಸಂಸದೀಯ ವ್ಯಹಾರ ಮತ್ತು ಸಣ್ಣ ನೀರಾವರಿ ಸಚಿವ ಜೆ.ಸಿ ಮಾಧುಸ್ವಾಮಿ ಹೇಳಿದರು.

ಪುತ್ತೂರು ಬಿಜೆಪಿ ಕಚೇರಿಗೆ ಡಿ.7ರಂದು ಭೇಟಿ ನೀಡಿದ ಅವರು ಕಾರ್ಯಕರ್ತರೊಂದಿಗೆ ಮಾತನಾಡಿದರು. ಕಾರ್ಯಕರ್ತರ ಋಣ ಬಹಳ ದೊಡ್ಡದು, ಕಾರ್ಯಕರ್ತರಿಲ್ಲದೆ ನಾವಿಲ್ಲ. ನಮ್ಮ ಸರಕಾರ ಟೇಕ್‌ಅಫ್ ಅಗುವ ಸಮಯ ಪ್ರಾಕೃತಿಕ ವಿಕೋಪದಿಂದ ಸ್ವಲ್ಪ ಸಮಯ ಪರಿಹಾರ ಕಾರ್ಯವೇ ನಡೆಸಬೇಕಾಯಿತು. ಇದೀಗ ಒಂದು ಹಂತದಲ್ಲಿ ಅಭಿವೃದ್ಧಿ ಕಾರ್ಯ ಮುನ್ನಡೆಯುತ್ತಿದೆ. ಈ ನಿಟ್ಟಿನಲ್ಲಿ ಜನರು ನಮ್ಮನ್ನು ನಂಬುವಂತಹ ಕೆಲಸ ಕಾರ್ಯಕರ್ತರು ಮಾಡಬೇಕು. ನಿಮ್ಮ ಮಧ್ಯೆ ನಾನು ಇರುತ್ತೇನೆ ಎಂದು ಹೇಳಿದರು.

ಪುತ್ತೂರು ಸಂಘಟನಾತ್ಮಕ ವಿಚಾರಕ್ಕೆ ಉದಾಹರಣೆ:
ಟಿಪಟೂರು ಶಾಸಕ ನಾಗೇಶ್ ಅವರು ಮಾತನಾಡಿ ಬಿಜೆಪಿ ಕಾರ್ಯಕರ್ತರೆಂದರೆ ಪೂರ್ಣಾವಧಿ ಕಾರ್ಯಕರ್ತರೆಂದು ತೋರಿಸಿಕೊಟ್ಟವರು ಪುತ್ತೂರಿನವರು. ಸಂಘಟನಾತ್ಮಕ ವಿಚಾರಕ್ಕೆ ಸಂಬಂಧಿಸಿ ವಿವಿಧ ಸಭೆಗಳಲ್ಲಿ ಪುತ್ತೂರನ್ನು ಉದಾಹರಣೆಯಾಗಿ ನಾನೆ ಭಾಷಣ ಮಾಡುತ್ತೇನೆ. ಇಲ್ಲಿನ ಬೂತ್ ವೈಸ್ ಕಾರ್ಯಕರ್ತರು ಮಾಡುವ ಕೆಲಸಕ್ಕೆ ಉತ್ತಮ ಅಭಿಪ್ರಾಯವಿದೆ ಎಂದರು.


ಕಾರ್ಯಕರ್ತರ ಭಾವನೆಗಳಿಗೆ ಸ್ಪಂದನೆ:
ಶಾಸಕ ಸಂಜೀವ ಮಠಂದೂರು ಅವರು ಮಾತನಾಡಿ ಅಭಿವೃದ್ಧಿ ಮತ್ತು ಸಂಘಟನೆ ಜೊತೆಯಾಗಿ ಸಾಗುತ್ತಿದೆ. ಈ ನಿಟ್ಟಿನಲ್ಲಿ ಪಕ್ಷವೂ ಕಾರ್ಯಕರ್ತರ ಭಾವನೆಗಳಿಗೆ ಸ್ಪಂದನೆ ನೀಡುತ್ತದೆ. ರಾಮ್ ಭಟ್, ಡಿ.ವಿ.ಸದಾನಂದ ಗೌಡ, ಮಲ್ಲಿಕಾಪ್ರಸಾದ್ ರಂತವರಿಗೆ ಶಾಸಕ ಸ್ಥಾನ ದೊರಕಿಸಿಕೊಟ್ಟ ಪುತ್ತೂರು ಒಂದು ಮಾದರಿಯಾಗಿದೆ ಎಂದರು.

ವೇದಿಕೆಯಲ್ಲಿ ಬಿಜೆಪಿ ಮಂಡಲದ ಅಧ್ಯಕ್ಷ ಚನಿಲ ತಿಮ್ಮಪ್ಪ ಶೆಟ್ಟಿ, ನಗರ ಮಂಡಲದ ಅಧ್ಯಕ್ಷ ಜೀವಂಧರ್ ಜೈನ್ ಉಪಸ್ಥಿತರಿದ್ದರು. ಬಿಜೆಪಿ ಮಂಡಲದ ಪ್ರಧಾನ ಕಾರ್ಯದರ್ಶಿ ಶಂಭು ಭಟ್ ಸ್ವಾಗತಿಸಿ, ನಗರ ಮಂಡಲದ ಪ್ರಧಾನ ಕಾರ್ಯದರ್ಶಿ ರಾಮ್‌ದಾಸ್ ಹಾರಾಡಿ ವಂದಿಸಿದರು. ಬಿಜೆಪಿ ಮಂಡಲದ ನಿಯೋಜಿತ ಅಧ್ಯಕ್ಷ ಸಾಜ ರಾಧಾಕೃಷ್ಣ ಅಳ್ವ, ನಗರ ಮಂಡಲದ ನಿಯೋಜಿತ ಅಧ್ಯಕ್ಷ ಪಿ.ಜಿ.ಜಗನ್ನಿವಾಸ ರಾವ್, ಮಾಜಿ ಶಾಸಕಿ ಮಲ್ಲಿಕಾ ಪ್ರಸಾದ್, ತಾ.ಪಂ ಉಪಾಧ್ಯಕ್ಷೆ ಲಲಿತಾ ಈಶ್ವರ್ ಸೇರಿದಂತೆ ನಗರಸಭಾ ಬಿಜೆಪಿ ಸದಸ್ಯರು, ಕಾರ್ಯಕರ್ತರು ಸಭೆಯಲ್ಲಿ ಉಪಸ್ಥಿತರಿದ್ದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.