Home_Page_Advt
Home_Page_Advt
Home_Page_Advt

ಕಡಬ ಕೇಂದ್ರ ಮಸೀದಿಯಲ್ಲಿ ತಾಜುಲ್ ಉಲಾಮ ಅನುಸ್ಮರಣೆ

ಕಡಬ: ತಾಜುಲ್ ಉಲಾಮ ಉಳ್ಳಾಲ ಕುಂಞಕೋಯ ತಂಗಳ್ ರವರ ಆರನೇ ವಾರ್ಷಿಕ ಅನುಸ್ಮರಣೆ ಕಡಬ ಕೇಂದ್ರ ಜುಮ್ಮಾ ಮಸೀದಿಯಲ್ಲಿ ಡಿ.6ರಂದು ಜುಮಾ ತರುವಾಯ ನಡೆಯಿತು.

ಸುಳ್ಯ ತಾಲೂಕು ಸುನ್ನಿ ಜಮಿಯತ್ತಲ್ ಉಲಾಮ ಅಧ್ಯಕ್ಷರಾದ ಬಹು| ಕುಂಞಕೋಯ ಸಹದಿ ತಂಗಳ್ ರವರು ತಾಜುಲ್ ಉಲಾಮ ರವರ ಅನುಸ್ಮರಣಾ ಭಾಷಣ ಗೈದು ಅಗಲಿದ ನೇತಾರರ ಮದ್ಹ್ ಹಾಗೂ ಅವರನ್ನು ಹಿಂಬಾಲಿಸಿ ಅನುಸರಿಸಿಕೊಂಡು ಹೋಗುವುದು ನಮ್ಮ ದ್ಯೇಯವಾಗಿರಬೇಕೆಂದರು.

ಮರ್ದಾಳ ಶಾಹುಲ್ ಹಮೀದ್ ತಂಗಳ್ ದುಃವಾ ಆಶೀರ್ವಚನಾ ನೀಡಿದರು. ತಾ.ಪಂ. ಸದಸ್ಯ ಫಝಲ್ ಕೋಡಿಂಬಾಳ, ಕೇಂದ್ರ ಜುಮಾ ಮಸೀದಿ ಅಧ್ಯಕ್ಷ ಮಹಮ್ಮದ್ ಶರೀಪ್, ಕರ್ನಾಟಕ ರಾಜ್ಯ ಮುಸ್ಲಿಂ ಜಮಾಅತ್ ಕಡಬ ತಾಲೂಕು ಅಧ್ಯಕ್ಷ ಹಾಜಿ ಸಯ್ಯದ್ ಮೀರಾ ಸಾಹೇಬ್, ಕಡಬ ಸೆಂಟರ್ ಎಸ್.ವೈ.ಎಸ್. ಅಧ್ಯಕ್ಷ ಉಮ್ಮರ್ ಮುಸ್ಲಿಯಾರ್, ಮಾಜಿ ಅಧ್ಯಕ್ಷ ಇಲ್ಯಾಸ್ ಮದನಿ ಕೋಡಿಂಬಾಳ, ಕಡಬ ಎಸ್.ಜೆ.ಎಂ. ಅಧ್ಯಕ್ಷ ಸಂಶುದ್ದೀನ್ ಸಹದಿ ಕೋಡಿಂಬಾಳ, ಹಾಜಿ ಸಿದ್ದೀಕ್ ಸಖಾಫಿ ಮರ್ದಾಳ, ಕೇಂದ್ರ ಜುಮಾ ಮಸೀದಿ ಉಪಾಧ್ಯಕ್ಷ ಆದಂ ಕುಂಡೋಳಿ, ಗೌರವ ಸಲಹೆಗಾರ ಹಾಜಿ ಚೋಟಾ ಇಸ್ಮಾಯಿಲ್ ಸಾಹೇಬ್, ಹನೀಫ್ ಸಖಾಫಿ ಕುಂಡೋಳಿ, ಅಬ್ಧುಲ್ ರಝಾಕ್ ಬಾಖವಿ, ಇಸ್ಮಾಯಿಲ್ ಎಂ., ಹಕೀಂ ಮದನಿ ಕಲ್ಲಾಜೆ, ಮಹಮ್ಮದ್ ಮುಸ್ಲಿಯಾರ್ ಸುಂಕದಕಟ್ಟೆ, ಮುಸ್ತಫಾ ಸಅ‌ದಿ ಕೋಡಿಂಬಾಳ, ಕಡಬ ಎಸ್.ಎಸ್.ಎಫ್. ಅಧ್ಯಕ್ಷ ಅಶ್ಪಕ್ ಅಡ್ಡಗದ್ದೆ, ಇಸಾಬ ಅಮೀರ್, ಶುಕುರು ಅಡ್ಡಗದ್ದೆ, ಮೊಯಿದಿನ್ ಮದರ್ ಇಂಡಿಯಾ, ಪುತ್ತು ಮೋನು ಬಾಜಿನಡಿ, ಅಕ್ಬರ್ ಸಾಹೇಬ್ ಕೇಪು, ಹಾಜಿ ಶಾಬು ಸಾಹೇಬ್ ಕೇಪು, ಅಬ್ದುಲ್ ಖಾದರ್ ಎಸ್.ಇ.ಎಸ್.ಮೊದಲಾದವರು ಭಾಗವಹಿಸಿದ್ದರು. ಎಸ್.ವೈ.ಎಸ್. ಕಾರ್ಯದರ್ಶಿ ಬಶೀರ್ ಚೆನ್ನಾರ್ ಕಾರ್ಯಕ್ರಮ ನಿರೂಪಿಸಿದರು. ಕೇಂದ್ರ ಜುಮಾ ಮಸೀದಿ ಪ್ರ. ಕಾರ್ಯದರ್ಶಿ ಫೈಝಲ್ ಎಸ್.ಇ.ಎಸ್., ಹಾಗೂ ಜತೆ ಕಾರ್ಯದರ್ಶಿ ಇಬ್ರಾಹಿಂ ಕೋಡಿಬೈಲ್ ಸಹಕರಿಸಿದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.