Home_Page_Advt
Home_Page_Advt
Home_Page_Advt

ಕಡಬದಲ್ಲಿ ಎಸ್ ಬಿ ಎಸ್ ಮದ್ರಸ್ ವಿದ್ಯಾರ್ಥಿಗಳಿಂದ ಜಾಥಾ


ಕಡಬ: ಜಾಮಿಯ ಸಅದಿಯಾ, ಅರೀಬಿಯಾ ಗೋಲ್ದನ್ ಜೂಬಿಲಿ ಪ್ರಚಾರಾರ್ಥವಾಗಿ ಕಡಬ ರೇಂಜ್ ಎಸ್.ಜೆ.ಎಂ ವತಿಯಿಂದ ಡಿ. 8ರಂದು ಎಸ್.ಬಿ ಎಸ್ ಮದ್ರಸ ವಿದ್ಯಾರ್ಥಿಗಳಿಂದ ಕಡಬ ಬಾಜಿನಡಿ ದರ್ಗಾ ಶರೀಪ್ ನಿಂದ ಕಡಬ ಪೇಟೆಯಾದ್ಯಂತ ಬೃಹತ್ ಕಾಲ್ಗಡಿಗೆ ಜಾಥ ನಡೆಯಿತು. ಬಳಿಕ ಕಡಬ ಗ್ರಾ.ಪಂ ವಾಣಿಜ್ಯ ಸಂಕೀರ್ಣದ ಎದುರು ಕಾರ್ಕಳ ಬಂಗ್ಲಗುಡ್ಡೆ ತ್ವ್ಬಬಾ ಗಾರ್ಡನ್ ಪ್ರಾಂಶುಪಾಲರಾದ ಅಹ್ಮದ್ ಶರೀಫ್ ಸಅದಿ ಸಂದೇಶ ಭಾಷಣ ಗೈದು ಪವಿತ್ರವಾದ ಭಾರತ ದೇಶವೆಂಬ ಬ್ರಂದಾವನ ಹೂತೋಟದಲ್ಲಿ ಎಲ್ಲಾ ಜಾತಿ ಜನಾಂಗದ ಹೂಗಳಾದ ನಾವು ಸರ್ವರ ಅಬಿವ್ರದ್ದಿಯಲ್ಲಿ ತೊಡಗಿಸಿಕೊಂಡು ಪರಸ್ಪರ ಸೌಹಾರ್ದತೆಯಲ್ಲಿ ಜೀವಿಸುವುದೇ ಇತಿಹಾಸವೆಂದ ಅವರು ಬಸ್ಸಿನಲ್ಲಿ ಪ್ರಯಾಣಿಸುವಾಗ ಜಾತಿ ನೋಡದೆ ಪ್ರೀತಿ ಸೌಹಾರ್ದತೆಯಿಂದ ಪ್ರಯಾಣಿಸಿದಂತೆ ವಿವಿಧತೆಯಲ್ಲಿ ಏಕತೆಯನ್ನು ಸಾರುವುದೇ ನಮ್ಮ ಧರ್ಮವಾಗಿದೆ ಜಾಮಿಯ ಸಅದಿಯಾ, ಅರೀಬಿಯಾ ಗೋಲ್ದನ್ ಜೂಬಿಲಿ ಡಿ.೨೭, ೨೮, ೨೯ ರಂದು ಸಅದಿಯಾ ಕಾಲೇಜಿನಲ್ಲಿ ನಡೆಯಲಿದ್ದು ಎಸ್.ಬಿ.ಎಸ್ ವಿದ್ಯಾರ್ಥಿಗಳಿಗೆ ಜೀವನದ ಅರಿವು ಮೂದಿಸುವುದೇ ಜಾಥದ ಮುಖ್ಯ ಉದ್ದೇಶವಾಗಿದೆ ಎಂದು ಹೆಳಿದರು.

ಕರ್ನಾಟಕ ಸುನ್ನೀ ಜಂಇಯ್ಯತ್ತುಲ್ ಉಲಮಾ ಉಪಾಧ್ಯಕ್ಷ ಯು.ಕೆ ಮಹಮ್ಮದ್ ಸಅದಿ ವಳವೂರ್ ಉಧ್ಘಾಟಿಸಿದರು. ಮರ್ದಾಳ ಸಯ್ಯದ್ ಶಾಹುಲ್ ಹಮೀದ್ ತಂಗಳ್ ದುವಾ ಪ್ರಾರ್ಥನೆ ಮಾಡಿದರು.

ಕಡಬ ಎಸ್. ಎಮ್ ಎ ರೀಜನಲ್ ಅಧ್ಯಕ್ಷ ಖಾದರ್ ಸಾಹೇಬ್ , ಕಡಬ ಎಸ್.ಜೆ.ಎಮ್ ಕಾರ್ಯದರ್ಶಿ ಇರ್ಶಾದ್ ಸಅದಿ ಮರ್ದಾಳ, ಕೇಪು ರಝ್ವಿಯಾ ಮಸೀದಿಯ ಅಝ್ರತ್ ರಿಝ್ವಾನ್ ರಝ್ವಿ, ಕಡಬ ಕೇಂದ್ರ ಜುಮ್ಮಾ ಮಸೀದಿ ಉಪಾಧ್ಯಕ್ಷ ಆದಂ ಕೊಂಡೋಳಿ, ಕಡಬ ಸೆಕ್ಟರ್ ಎಸ್.ಎಸ್.ಎಫ಼್ ಅಧ್ಯಕ್ಷ ಮಹಮ್ಮದ್ ಮಿಸ್ಬಾಹಿ, ಕೋಡಿಂಬಾಳ ಮಸೀದಿ ಅಧ್ಯಕ್ಷ ಅಬೂಬಕರ್ ಮುಸ್ಲೀಯಾರ್, ಕಲ್ಲಾಜೆ ಮಸೀದಿ ಅಧ್ಯಕ್ಷ ಉಬೇದುಲ್ಲಾ ಸಖಾಫಿ, ಕಡಬ ತಾಲೂಕು ಮುಸ್ಲಿಂ ಜಮಾತ್ ಕಾರ್ಯದರ್ಶಿ ನವಾಝ್ ಪನ್ಯ, ಕೊಡೆಂಕೆರಿ ಮದರಸ ಅಧ್ಯಕ್ಷ ಶೇಖ್ ಅಹ್ಮದ್, ಪಾಲೆತಡ್ಕ ಮದರಸ ಅಧ್ಯಕ್ಷ ಮಹಮ್ಮದ್ ಶರೀಫ್, ಕೇಪು ರಝ್ವಿಯಾ ಮದರಸ ಅಧ್ಯಕ್ಷ ಮಹಮ್ಮದ್ ಆಫಿಕ್, ಹಕೀಂ ಮದನಿ, ಅಬ್ದುಲ್ ರಝಾಖ್ ಬಾಖವಿ, ಮುಸ್ತಫಾ ಸಅದಿ, ರಪೀಖ್ ಮುಸ್ಲಿಯಾರ್ ಕಡಬ, ಅಬ್ದುಲ್ ರವೂಫ್ ಲತೀಫ್, ಹಂಸ ಕುಂಡೋಳಿ, ನಿಝಾರ್ ಮರ್ದಾಳ ಸೇರಿದಂತೆ ಕಡಬ ಎಸ್.ಎಮ್.ಎ,ಎಸ್.ಜೆ.ಎಮ್, ಎಸ್.ವೈ.ಎಸ್, ಎಸ್.ಎಸ್.ಎಫ಼್ನ ಪದಾಧಿಕಾರಿಗಳು, ಸದಸ್ಯರು ಉಪಸ್ತಿತರಿದ್ದರು. ಕಡಬ ಸೆಂಟರ್ ವ್ಯಾಪ್ತಿಯ ಎಲ್ಲಾ ಮದರಸಗಳ ಎಸ್.ಬಿ.ಎಸ್ ವಿದ್ಯಾರ್ಥಿಗಳು ಬಾಗವಹಿಸಿದ್ದರು. ರಾಲಿಯುದ್ದಕ್ಕೂ ಎಸ್.ಬಿ.ಎಸ್ ವಿದ್ಯಾರ್ಥಿಗಳಿಂದ ಸ್ಕೌಟ್ ಹಾಗೂ ಧಫ್ ಪ್ರದರ್ಶನ ನಡೆಯಿತು. ಕಡಬ ತಾಲೂಕು ಸಅದೀಸ್ ಅಧ್ಯಕ್ಷ ಅಬ್ದುಲ್ ನಾಸಿರ್ ಸಅದಿ ಸ್ವಾಗತಿಸಿ ಮುಬಾರಕ್ ಮುಸ್ಲಿಯಾರ್ ವಂದಿಸಿದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.