Home_Page_Advt
Home_Page_Advt
Home_Page_Advt

ಶಿಸ್ತು, ಸಮಯ ಪರಿಪಾಲನೆ ನಮ್ಮದಾದಾಗ ಯಶಸ್ಸು ಸಾಧ್ಯ: ಪ್ರಸಾದ್ ಶೆಟ್ಟಿ

 
ಉಪ್ಪಿನಂಗಡಿ: ಶಿಸ್ತು, ಸಮಯ ಪರಿಪಾಲನೆ ಹಾಗೂ ಸಮಯಕ್ಕೆ ಮಹತ್ವ ನೀಡುವ ಗುಣಗಳನ್ನು ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ಜೀವನದಲ್ಲಿ ಯಶಸ್ಸು ಗಳಿಸಲು ಸಾಧ್ಯ ಎಂದು ಭಾರತೀಯ ಚಲನಚಿತ್ರ ಇಂಡಸ್ಟ್ರಿಯ ಮ್ಯೂಸಿಕ್ ಕಂಪೋಸರ್ ಪ್ರಸಾದ್ ಕೆ. ಶೆಟ್ಟಿ ತಿಳಿಸಿದರು. ಇಲ್ಲಿನ ಎಚ್.ಎಂ. ಅಡಿಟೋರಿಯಂನಲ್ಲಿ ನಡೆದ ಉಪ್ಪಿನಂಗಡಿಯ ಇಂದ್ರಪ್ರಸ್ಥ ವಿದ್ಯಾಲಯದ `ಪೋಷಕರ ದಿನ’ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು.

ಪ್ರತಿಯೋರ್ವನಲ್ಲಿಯೂ ಅವನದ್ದೇ ಆದ ಪ್ರತಿಭೆ ಇರುತ್ತದೆ. ಅದನ್ನು ಎಳವೆಯಲ್ಲಿ ಗುರುತಿಸಿ ಮನೆ ಹಾಗೂ ಶಾಲೆಯಲ್ಲಿ ಅದಕ್ಕೆ ಪ್ರೋತ್ಸಾಹ ನೀಡಿ, ಉತ್ತಮ ಅಡಿಪಾಯ ಕಲ್ಪಿಸುವ ಕೆಲಸವಾಗಬೇಕು. ಆಗ ಉತ್ತಮ ಸಾಧನೆ ಮಾಡಲು ಸಾಧ್ಯವಿದೆ ಎಂದ ಅವರು, ತಾನು ಇಂದ್ರಪ್ರಸ್ಥ ವಿದ್ಯಾಲಯದ ವಿದ್ಯಾರ್ಥಿಯಾಗಿದ್ದಾಗಿನ ಆ ದಿನಗಳನ್ನು ಮೆಲುಕು ಹಾಕಿದರಲ್ಲದೆ, ಪೋಷಕರು, ಶಾಲೆ ಹಾಗೂ ಗುರುಗಳ ಪ್ರೋತ್ಸಾಹದಿಂದ ಇಂದು ನನಗೆ ಈ ಮಟ್ಟಕ್ಕೆ ಬೆಳೆಯಲು ಸಾಧ್ಯವಾಯಿತು ಎಂದರು.

ಮತ್ತೋರ್ವ ಮುಖ್ಯ ಅತಿಥಿ ಇಂದ್ರಪ್ರಸ್ಥ ವಿದ್ಯಾಲಯದ ಹಿರಿಯ ವಿದ್ಯಾರ್ಥಿ, ಚಾರ್ಟಡ್ ಅಕೌಂಟೆಟ್ ನಿಹಾಲ್ ರೈ ಬಿ.ಎಸ್. ಮಾತನಾಡಿ, ಜೀವನದಲ್ಲಿ ನಾವು ಮೌನಿಯಾಗಿರದೆ ಪರಸ್ಪರ ಸಂವಹನ ಕಲೆಯನ್ನು ಬೆಳೆಸಿಕೊಳ್ಳಬೇಕು. ನಮ್ಮ ಜೀವನ ಉನ್ನತ ಮಟ್ಟಕ್ಕೇರುವಲ್ಲಿ ಶಿಸ್ತು ಪ್ರಮುಖ ಪಾತ್ರ ವಹಿಸುತ್ತಿದ್ದು, ಶಿಸ್ತಿನ ಜೀವನ ನಮ್ಮದಾದಾಗ ಸಾಧಕ ಜೀವನವೂ ನಮ್ಮದಾಗಲು ಸಾಧ್ಯ ಎಂದರು.

ಅಧ್ಯಕ್ಷತೆ ವಹಿಸಿದ್ದ ಇಂದ್ರಪ್ರಸ್ಥ ವಿದ್ಯಾಲಯದ ಸಂಚಾಲಕ ಯು.ಎಸ್.ಎ. ನಾಯಕ್ ಮಾತನಾಡಿ, ನಾವು ಜೀವನದಲ್ಲಿ ಕನಸುಗಳನ್ನು ಕಟ್ಟಿಕೊಳ್ಳಬೇಕು. ಜಾಗೃತೆಯಿಂದ ಪ್ರತಿಯೊಂದು ಮೆಟ್ಟಿಲುಗಳನ್ನು ಏರುತ್ತಾ ಹೋದವ ಮಾತ್ರ ಉನ್ನತ ಮಟ್ಟದಲ್ಲಿ ಮಿಂಚಲು ಸಾಧ್ಯ. ಪೋಷಕರು ಮಕ್ಕಳನ್ನು ಅತೀ ಮೋಹದಿಂದ ಬೆಳೆಸಬಾರದು. ಶಿಸ್ತಿನ ಜೀವನವನ್ನು ಅವರಿಗೆ ಕಲಿಸಬೇಕು. ಮಕ್ಕಳು ಸರ್ಕಸ್‌ನ ಹುಲಿಗಳಾಗದಂತೆ ಜಾಗೃತೆ ವಹಿಸಬೇಕು ಎಂದರು.

ಈ ಸಂದರ್ಭ ಸಾಧಕ ವಿದ್ಯಾರ್ಥಿಗಳನ್ನು ಅವರ ಪೋಷಕರ ಉಪಸ್ಥಿತಿಯಲ್ಲಿ ಸನ್ಮಾನಿಸಲಾಯಿತು. ವಿವಿಧ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ವೇದಿಕೆಯಲ್ಲಿ ಇಂದ್ರಪ್ರಸ್ಥ ವಿದ್ಯಾಲಯದ ಪ್ರಾಂಶುಪಾಲ ಜೋಸ್ ಎಂ.ಜೆ., ಪಿಯು ಕಾಲೇಜು ವಿಭಾಗದ ಪ್ರಾಂಶುಪಾಲ ಎಚ್.ಕೆ. ಪ್ರಕಾಶ್ ಉಪಸ್ಥಿತರಿದ್ದರು. ಬೇಬಿ ದುಆ ಸಲಮ ಯು. ಸ್ವಾಗತಿಸಿದರು. ಶಾಲಾ ವಿದ್ಯಾರ್ಥಿ ನಾಯಕ ಮಾ. ನಿಹಾರ್ ಎಂ. ಶೆಟ್ಟಿ ವಂದಿಸಿದರು. ಶಿಕ್ಷಕಿಯರಾದ ಶೀಲಾವತಿ ಮತ್ತು ಪ್ರಜ್ಞಾ ಕಾರ್ಯಕ್ರಮ ನಿರೂಪಿಸಿದರು. ಬಳಿಕ ಶಾಲಾ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗಿತು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.