Home_Page_Advt
Home_Page_Advt
Home_Page_Advt

ಜಾಂಬಿಯಾದಲ್ಲಿ ಆಷ್ಕೋ ಡೈಮಂಡ್ ಕಛೇರಿ, ಜೆಮ್ ಟೆಸ್ಟಿಂಗ್ ಲ್ಯಾಬೋರೇಟರಿ ಶುಭಾರಂಭ

ಪುತ್ತೂರು: ಆಫ್ರಿಕಾ ಖಂಡದ ಜಾಂಬಿಯ ದೇಶದ ರಾಜಧಾನಿ ಲುಸಾಕದಲ್ಲಿ ಆಷ್ಕೋ ಡೈಮಂಡ್ ಕಛೇರಿ ಹಾಗೂ ಜೆಮ್ ಟೆಸ್ಟಿಂಗ್ ಲ್ಯಾಬೋರೇಟರಿಯು ಡಿ.10 ರಂದು ಶುಭಾರಂಭಗೊಂಡಿದೆ.

ಜಾಂಬಿಯದ ಎಮರಾಲ್ಡ್ ಮೈನಿಂಗ್ ಎಸೋಸಿಯೇಶನ್ ಇದರ ಅಧ್ಯಕ್ಷರಾದ ವಿಕ್ಟರ್ ಕಲೇಶರವರು ನೂತನ ಆಷ್ಕೋ ಡೈಮಂಡ್ ಕಛೇರಿಯನ್ನು ಉದ್ಘಾಟಿಸಿ ಮಾತನಾಡಿ, ಭಾರತ ದೇಶದವರಾದ ನಮ್ಮ ದೇಶದಲ್ಲಿ ಬಹಳ ಸುಂದರವಾದ ಒಂದು ಡೈಮಂಡ್ ವ್ಯವಹಾರದ ಸಂಸ್ಥೆಯನ್ನು ಸ್ಥಾಪನೆ ಮಾಡಿರುವುದು ಮತ್ತು ಇದರ ಲ್ಯಾಬ್ ಹಾಗೂ ಕಛೇರಿಯನ್ನು ಶುಭಾರಂಭಗೊಳಿಸಿದ ಸಂಸ್ಥೆಯ ಚೇಯರ್‌ಮ್ಯಾನ್ ಆಗಿರುವ ಡಾ|ಅಶ್ರಫ್ ಕಮ್ಮಾಡಿಯವರ ಪ್ರಯತ್ನವು ಶ್ಲಾಘನೀಯವಾಗಿದೆ. ಡಾ|ಅಶ್ರಫ್ ಕಮ್ಮಾಡಿಯವರ ನೂತನ ಡೈಮಂಡ್ ವ್ಯವಹಾರ ಮತ್ತಷ್ಟು ಉನ್ನತ ಹಂತಕ್ಕೇರಿ ಜಾಂಬಿಯಾ ದೇಶದಲ್ಲಿ ಒಳ್ಳೆಯ ಹೆಸರನ್ನು ಗಳಿಸುವಂತಾಗಲಿ ಎಂದು ಹೇಳಿ ಶುಭಹಾರೈಸಿದರು.

ಜೆಮ್ ಟೆಸ್ಟಿಂಗ್ ಲ್ಯಾಬ್ ಇದರ ಉದ್ಘಾಟನೆಯನ್ನು ಫೆಡರೇಶನ್ ಆಫ್ ಸ್ಮಾಲ್ ಸ್ಕೇಲ್ ಇಂಡಸ್ಟ್ರೀಸ್ ಇದರ ಅಧ್ಯಕ್ಷ ಜೋಸೆಫ್ ಮುವಾಂಝರವರು ನೆರವೇರಿಸಿದರು. ಮುಖ್ಯ ಅತಿಥಿಯಾಗಿ ಎಮಿಗ್ರೇಶನ್‌ನ ಇಮ್ಮಾನ್ಯುಯೆಲ್ ಬೂಝಿರವರು ಉಪಸ್ಥಿತರಿದ್ದರು. ಕಂಪೆನಿಯ ಕಾನೂನು ಸಲಹೆಗಾರ, ನ್ಯಾಯವಾದಿ ಮೂಸ ಮಹಮ್ಮದ್ ಕುಂಞ ಪೈಂಬಚ್ಚಲ್‌ರವರು ಶುಭ ಹಾರೈಸಿದರು. ಕಂಪೆನಿಯ ಕಾರ್ಯದರ್ಶಿ ಸಂಡೆ ಮಲಿಕೊ ಹಾಗೂ ಡೈರೆಕ್ಟರ್ ಗಾಡ್ ಫ್ರೇಶಬ್ಬರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಂಪೆನಿಯ ಸೇಲ್ಸ್ ಆಪರೇಶನ್ ಡೈರೆಕ್ಟರ್ ಯೋಗೀಶ್ ಟಿ.ಶೆಣೈ ಸ್ವಾಗತಿಸಿ, ವಂದಿಸಿದರು.

ಅಧ್ಯಕ್ಷತೆ ವಹಿಸಿದ ಆಷ್ಕೋ ಡೈಮಂಡ್ ಇದರ ಚೇಯರ್‌ಮ್ಯಾನ್ ಡಾ|ಅಶ್ರಫ್ ಎಸ್ ಕಮ್ಮಾಡಿಯವರು ಮಾತನಾಡಿ, ಡೈಮಂಡ್ ಎಮರಾಲ್ಡ್ ರೂಬಿ ಹಾಗೂ ಬೇಸ್‌ಮೆಟಲ್ ಗಣಿಗಾರಿಕೆಯ ಅನುಮತಿ ಪಡೆದ ಕಂಪೆನಿಯಾಗಿರುತ್ತದೆ. ಇದು ವರ್ಷಕ್ಕೆ ೮೦ ಮಿಲಿಯನ್ ಡಾಲರ್ ವ್ಯಾಪಾರ ನಡೆಸಲಾಗುತ್ತಿದೆ ಎಂದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.