Home_Page_Advt
Home_Page_Advt
Home_Page_Advt

3ನೇ ಟಿ-2೦: ಭಾರತಕ್ಕೆ ಭರ್ಜರಿ ಜಯ

  • *ಕೊಹ್ಲಿಿ-ರಾಹುಲ್ ಭರ್ಜರಿ ಜೊತೆಯಾಟ
  • *ಸರಣಿ 2-1 ರಿಂದ ಭಾರತದ ಪಾಲು
    3ನೇ ಟಿ-2೦: ಭಾರತಕ್ಕೆ ಭರ್ಜರಿ ಜಯ
    ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ದ.11ರಂದು ನಡೆದ ಭಾರತ ಮತ್ತು ವೆಸ್ಟ್ ಇಂಡೀಸ್ ತಂಡಗಳ ಕೊನೆಯ ಟಿ-೨೦ ಮತ್ತು ನಿರ್ಣಾಯಕ ಪಂದ್ಯದಲ್ಲಿ ಭಾರತ ಭರ್ಜರಿ 67 ರನ್‌ಗಳಿಂದ ಜಯ ಗಳಿಸಿದೆ. ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿದ ಭಾರತ ಭರ್ಜರಿ ಆರಂಭ ಪಡೆಯಿತು. ರೋಹಿತ್ 71(34), ರಾಹುಲ್ 91(56), ಕೊಹ್ಲಿ 70(29) ರನ್ ಭಾರಿಸಿ ತಂಡಕ್ಕೆ 20 ಓವರ್‌ನಲ್ಲಿ ೨೪೦ ರನ್ ಸೇರಿಸಿದರು. ಕ್ವಾಟ್ರೆಲ್, ವಿಲಯಮ್ಸ್, ಪೊಲಾರ್ಡ್ ತಲಾ ೧ ವಿಕೆಟ್ ಪಡೆದರು. ಕೊಹ್ಲಿ ಟಿ-2೦ಯಲ್ಲಿ 1000 ರನ್ ಪೂರೈಸಿದ ಪ್ರಥಮ ಭಾರತೀಯ ಎಂದೆನಿಸಿಕೊಂಡರು. ಟಿ-2೦ಯಲ್ಲಿ ಭಾರತಕ್ಕೆ ಇದು ಮೂರನೇ ಅತೀ ಹೆಚ್ಚಿನ ಮೊತ್ತವಾಗಿದೆ. ಟಾರ್ಗೆಟ್ ಬೆನ್ನಟ್ಟಿದ ಇಂಡೀಸ್ 20 ಓವರ್‌ನಲ್ಲಿ 8 ವಿಕೆಟ್ ನಷ್ಟಕ್ಕೆ 173 ರನ್ ಮಾಡಿ ಸೋಲೊಪ್ಪಿಕೊಂಡಿತು. ಪೊಲ್ಲಾರ್ಡ್ 68(39), ಹೆಟ್ಮೆಯರ್ 41(24) ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದರೆ ಉಳಿದ ಯಾರೂ ಜೊತೆಯಾಟ ನೀಡಲಿಲ್ಲ. ಕುಲ್‌ದೀಪ್, ಶಮ್ಮಿ, ಭುವಿ, ಚಾಹರ್ ತಲಾ 2 ವಿಕೆಟ್ ಪಡೆದರು. ಭಾರತ 2-1 ಅಂತರದಿಂದ ಸರಣಿಯನ್ನು ವಶಪಡಿಸಿಕೊಂಡಿತು.
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.