Home_Page_Advt
Home_Page_Advt
Home_Page_Advt
Breaking News

ಕಣಚೂರು ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ಕ್ರಾನಿಯೋಫೇಸಿಯಲ್ ಸರ್ಜರಿ ಕಾರ್ಯಾಗಾರ

 ವಿಟ್ಲ: ಕಣಚೂರು ಮೆಡುಕಲ್ ಕಾಲೇಜು ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ವತಿಯಿಂದ ನಡೆದ ಕ್ರಾನಿಯೋಫೇಸಿಯಲ್ ಸರ್ಜರಿ ಕಾರ್ಯಾಗಾರವನ್ನು ಕಣಚೂರು ಮೆಡಿಕಲ್ ಕಾಲೇಜು ಆಸ್ಪತ್ರೆಯ ಅಧ್ಯಕ್ಷರಾದ ಹಾಜಿ ಯು.ಕೆ ಮೋನುರವರು ಉದ್ಘಾಟಿಸಿದರು.


ಬಳಿಕ ಮಾತನಾಡಿದ ಅವರು ಶಸ್ತ್ರಚಿಕಿತ್ಸೆಗಳ ಪ್ರಕಾರಗಳಲ್ಲಿ ವಿವಿಧ ಅಧ್ಯಯನ ಮಾಡುವುದು ಒಳ್ಳೆಯ ವಿಚಾರ.  ಇಂತಹ ಶಸ್ತ್ರಚಿಕಿತ್ಸಾ ಕಾರ್ಯಾಗಾರದಿಂದಾಗಿ ವಿವಿಧ ಪ್ರಕರಣಗಳನ್ನು ಭೇಧಿಸಲು ಸಾಧ್ಯವಾಗುತ್ತೆ. ಇದಕ್ಕೆ ಕಣಚೂರು ಸಂಸ್ಥೆ ನೀಡುವಂತ ಬೆಂಬಲ ನಿಜಕ್ಕೂ ಅವಿಸ್ಮರಣೀಯ ಎಂದು ಅವರು ಹೇಳಿದರು.


ಇನ್ನು ಕಾರ್ಯಕ್ರಮದಲ್ಲಿ ಶಸ್ತ್ರಚಿಕಿತ್ಸೆಗೆ ಸಂಬಂಧಪಟ್ಟ ಸುಮಾರು 21 ಪ್ರಕರಣಗಳನ್ನು ಕಾರ್ಯಾಗಾರದಲ್ಲಿ ಮಾಡಲಾಗಿದೆ. ಡಾ.ಮುಸ್ತಫಾ (ಚೀಫ್ ಕ್ರಾನಿಯೋಫೇಸಿಯಲ್ ಮತ್ತು ಆರ್ಥೋಗ್ನಾಥಿಕ್ ಸರ್ಜನ್) ಮತ್ತು ಅವರ ತಂಡದ ಪ್ರಖ್ಯಾತ ಶಸ್ತ್ರ ಚಿಕಿತ್ಸಕರಾದ ಡಾ. ವೀರಬಾಹು ಅವರೊಂದಿಗೆ (ಕ್ರಾನಿಯೋಫೇಸಿಯಲ್ ಸರ್ಜನ್ ಮತ್ತು ಅಧ್ಯಕ್ಷ-ಎಒಎಂಎಸ್‌ಐ), ಡಾ. ಜಿಯೋವರ್ ಲೋಬೋ (ನರಶಸ್ತ್ರ ಚಿಕಿತ್ಸಕ), ಡಾ.ಪರಿತ್ ಲಡಾನಿ (ಸೀಳು ಮತ್ತು ಕಿವಿ ಪುನರ್‌ನಿರ್ಮಾಣ ಶಸ್ತ್ರಚಿಕಿತ್ಸಕ), ಡಾ.ಮನುಪ್ರಸಾದ್, ಡಾ.ಶ್ರೇಯಸ್ ಸೊರಕೆ, ಡಾ.ಕೃಷ್ಣಮೂರ್ತಿ ಕಾರ್ಯಾಗಾರದಲ್ಲಿ ಭಾಗವಹಿಸಿ ವಿವಿಧ ಅನುಭವಗಳನ್ನು ಹಂಚಿಕೊಂಡರು. ಕಾರ್ಯಕ್ರಮದಲ್ಲಿ ಕಣಚೂರು ಮೆಡಿಕಲ್ ಕಾಲೇಜು ಆಸ್ಪತ್ರೆಯ ನಿರ್ದೇಶಕ ಅಬ್ದುಲ್ ರಹಿಮಾನ್, ಡಾ. ಮಂಜುನಾಥ್ ರೈ ಮಾದಲಾದವರು ಉಪಸ್ಥಿತರಿದ್ದರು.

 

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.