Home_Page_Advt
Home_Page_Advt
Home_Page_Advt
Breaking News

ಹಿರೇಬಂಡಾಡಿ: ರಾಜ್ಯಮಟ್ಟದ ಯುವ ಸಂಸತ್ತು ಸ್ಪರ್ಧೆಯಲ್ಲಿ ಪ್ರಶಸ್ತಿ ಪಡೆದ ಚಿತ್ರಾರಿಗೆ ಅಭಿನಂದನಾ ಕಾರ್ಯಕ್ರಮ


ಹಿರೇಬಂಡಾಡಿ: ಕೆ.ಜಿ.ಎಸ್.ಕ್ಲಬ್ ವಿಧಾನಸೌಧ ಬೆಂಗಳೂರು ಇಲ್ಲಿನ ಚೆನ್ನಬಸಪ್ಪ ಸಭಾಂಗಣದಲ್ಲಿ ನಡೆದ ರಾಜ್ಯಮಟ್ಟದ ಯುವ ಸಂಸತ್ತು ಸ್ಪರ್ಧೆಯಲ್ಲಿ ತೃತೀಯ ಸ್ಥಾನಗಳಿಸಿದ ಹಿರೇಬಂಡಾಡಿ ಪ್ರೌಢಶಾಲೆಯ ೧೦ನೇ ತರಗತಿ ವಿದ್ಯಾರ್ಥಿನಿ ಚಿತ್ರಾ ಹಾಗೂ ಮಾರ್ಗದರ್ಶಿ ಶಿಕ್ಷಕಿ ಲಲಿತಾ ಕೆ., ಇವರಿಗೆ ಅಭಿನಂದನಾ ಕಾರ್ಯಕ್ರಮ ಹಿರೇಬಂಡಾಡಿ ಪ್ರೌಢಶಾಲಾ ಸಭಾಂಗಣದಲ್ಲಿ ನಡೆಯಿತು.

ಸಭೆಯ ಅಧ್ಯಕ್ಷತೆ ವಹಿಸಿದ್ದ ಹಿರೇಬಂಡಾಡಿ ಗ್ರಾ.ಪಂ. ಅಧ್ಯಕ್ಷ ಹಮ್ಮಬ್ಬ ಶೌಕತ್ ಆಲಿಯವರು ಮಾತನಾಡಿ, ಸಭಾಪತಿಯಾಗಿ ಉತ್ತಮವಾಗಿ ನಿರ್ವಹಣೆ ಮಾಡಿ ಬಹುಮಾನಗಳಿಸಿದ ಚಿತ್ರಾರವರು ಹಿರೇಬಂಡಾಡಿ ಗ್ರಾಮಕ್ಕೆ ಕೀರ್ತಿಯನ್ನು ತಂದಿರುವುದು ನಮಗೆಲ್ಲರಿಗೂ ಹೆಮ್ಮೆಯಾಗಿದೆ. ಹಿರೇಬಂಡಾಡಿ ಪ್ರೌಢಶಾಲೆಯ ವಿದ್ಯಾರ್ಥಿಗಳ ಸಾಧನೆಗೆ ಶಿಕ್ಷಕರ ಶ್ರಮವು ಕಾರಣವಾಗಿದ್ದು ಮುಂದಿನ ದಿನಗಳಲ್ಲಿಯೂ ಇಂತಹ ಸಾಧನೆಗಳು ವಿದ್ಯಾರ್ಥಿಗಳಿಂದ ಆಗಲಿ ಎಂದು ಶುಭ ಹಾರೈಸಿದರು. ಸಭೆಯ ಅಧ್ಯಕ್ಷತೆ ವಹಿಸಿದ್ದರು. ಸನ್ಮಾನ ಸ್ವೀಕರಿಸಿದ ಮಾರ್ಗದರ್ಶಿ ಶಿಕ್ಷಕಿ, ಶಾಲಾ ಸಮಾಜ ವಿಜ್ಞಾನ ಶಿಕ್ಷಕಿಯಾದ ಲಲಿತಾ ಕೆ., ಮತ್ತು ತೃತೀಯ ಸ್ಥಾನ ಪಡೆದುಕೊಂಡ ವಿದ್ಯಾರ್ಥಿನಿ ಚಿತ್ರಾರವರು ಅನುಭವ ಹಂಚಿಕೊಂಡು ಸಹಕರಿಸಿದವರೆಲ್ಲರಿಗೂ ಕೃತಜ್ಞತೆಗಳನ್ನು ಸಲ್ಲಿಸಿದರು. ಎಸ್.ಡಿ.ಎಂ.ಸಿ. ಕಾರ್ಯಧ್ಯಕ್ಷ ಶ್ರೀಧರ ಮಠಂದೂರುರವರು ಮಾತನಾಡಿ, ಸರಕಾರಿ ಶಾಲೆಯ ವಿದ್ಯಾರ್ಥಿನಿಯ ಈ ಸಾಧನೆ ಉಳಿದ ವಿದ್ಯಾರ್ಥಿಗಳಿಗೂ ಪ್ರೇರಣೆಯಾಗಲಿ ಎಂದರು. ಮುಖ್ಯ ಶಿಕ್ಷಕಿ ವೇದಾವತಿಯವರು ಮಾತನಾಡಿ, ಬಹುಮುಖ ಪ್ರತಿಭಾವಂತೆಯಾದ ಚಿತ್ರಾಳ ಸಾಧನೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಎಸ್.ಡಿ.ಎಂ.ಸಿ ಸದಸ್ಯೆ ಲಲಿತಾ, ಚಿತ್ರಾಕಲಾ ಶಿಕ್ಷಕ ಅನಿಲ್ ಕುಮಾರ್ ಹೆಚ್.ಪಿ, ಇಂಗ್ಲೀಷ್ ಶಿಕ್ಷಕ ವಸಂತ ಕುಮಾರ.ಪಿ., ಹಾಗೂ ವಿಜ್ಞಾನ ಶಿಕ್ಷಕ ಮನೋಹರ ಎಂ.,ರವರು ಉಪಸ್ಥಿತರಿದ್ದರು. ಗಣತ ಶಿಕ್ಷಕ ಹರಿಕಿರಣ ಕೆ.,ರವರು ಕಾರ್‍ಯಕ್ರಮ ನಿರೂಪಿಸಿದರು. ಕನ್ನಡ ಶಿಕ್ಷಕ ಫಿರೋಜ್ ನಾಯ್ಕ ಕೆ., ಸ್ವಾಗತಿಸಿದರು. ದೈಹಿಕ ಶಿಕ್ಷಣ ಶಿಕ್ಷಕ ಸೀತಾರಾಮ ಗೌಡ ಬಿ., ವಂದಿಸಿದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.