Home_Page_Advt
Home_Page_Advt
Home_Page_Advt
Breaking News

ಉಪ್ಪಿನಂಗಡಿಯಲ್ಲಿ ರೈತ ಸಂಘದ ಪತ್ರಿಕಾಗೋಷ್ಠಿ

  • ಎಪಿಎಂಸಿಗಳು ರೈತರಿಗೆ ಪ್ರಯೋಜನಕಾರಿಯಾಗುವಂತೆ ಕಾರ್ಯನಿರ್ವಹಿಸಬೇಕು-ಸುರೇಶ್ ಭಟ್
  • ಅಂತರಾಷ್ಟ್ರೀಯ ಆರ್ಥಿಕ ಸಹಭಾಗಿತ್ವ ಒಪ್ಪಂದಕ್ಕೆ ಸಹಿ ಹಾಕಬಾರದು
  • ಅಕ್ರಮ ಸಕ್ರಮದಡಿ ಮಂಜೂರುಗೊಂಡ ಭೂಮಿಯನ್ನು ಪರಭಾರೆ ಮಾಡುವುದಕ್ಕೆ ಸರ್ಕಾರ ಅವಕಾಶ ನೀಡಬಾರದು
  • ಭೂ ಮಾಫಿಯಗಳು ಅಕ್ರಮ ಸಕ್ರಮ ದಂಧೆಯಲ್ಲಿ ಭಾಗಿಯಾಗಿದ್ದು, ಇದಕ್ಕೆ ಕಡಿವಾಣ ಹಾಕಬೇಕು
  • ಪಡಿತರ ಚೀಟಿಯ ಬೆರಳಚ್ಚಿಗಾಗಿ ಗ್ರಾಮ ಪಂಚಾಯತಗಳಲ್ಲಿ ಬೆರಳಚ್ಚು ನೀಡುವ ವ್ಯವಸ್ಥೆ ಜಾರಿಗೊಳಿಸಬೇಕು
  • ಎನ್.ಆರ್.ಸಿ., ಸಿ.ಎ.ಎ. ಕಾಯಿದೆಗಳ ಬಗ್ಗೆ ಜನರಲ್ಲಿ ಗೊಂದಲ ಇದ್ದು, ಸ್ಪಷ್ಠತೆಯನ್ನು ಜನತೆಗೆ ತಿಳಿಸಬೇಕು

ಉಪ್ಪಿನಂಗಡಿ: ಎಪಿಎಂಸಿಗಳು ರೈತರಿಗೆ ಪ್ರಯೋಜನಕಾರಿ ಆಗುವಂತೆ ಕಾರ್ಯನಿರ್ವಹಿಸಬೇಕು. ರೈತರ ಉತ್ಪನ್ನಗಳಿಗೆ ಸ್ಥಿರವಾದ ಬೆಲೆ ದೊರೆಯದೆ ರೈತರಿಗೆ ಜೀವನ ಭದ್ರತೆ ಇಲ್ಲವಾಗಿದೆ. ಎಲ್ಲಾ ಎಪಿಎಂಸಿಗಳಲ್ಲಿ ರೈತರ ಬೆಳೆಗಳಿಗೆ ಖರೀದಿ ಕೇಂದ್ರ ತೆರೆಯಲು ಈಗಾಗಲೇ ಸರ್ಕಾರವನ್ನು ಆಗ್ರಹಿಸಿದ್ದು, ರಾಷ್ಟ್ರದ ಬೆನ್ನೆಲುಬು ಆಗಿರುವ ರೈತರ ಹಿತಕಾಯಲು ಸರ್ಕಾರ ಸ್ಪಷ್ಠ ಯೋಜನೆಯನ್ನು ಜಾರಿಗೊಳಿಸಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ, ಹಸಿರು ಸೇನೆ ಜಿಲ್ಲಾ ಅಧ್ಯಕ್ಷ ಸುರೇಶ್ ಭಟ್ ಕೊಜಂಬೆ ಆಗ್ರಹಿಸಿದ್ದಾರೆ.

ಅವರು ಉಪ್ಪಿನಂಗಡಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಸದ್ಯದ ಮಟ್ಟಿಗೆ ಅಂತರಾಷ್ಟ್ರೀಯ ಆರ್ಥಿಕ ಸಹಭಾಗಿತ್ವ ಒಪ್ಪಂದದಿಂದ ಭಾರತ ಹಿಂದೆ ಸರಿದಿದಿರುವುದು

ಶ್ಲಾಘನೀಯವಾಗಿದ್ದರೂ, ಜಾಗತಿಕ ಒತ್ತಡಕ್ಕೆ ಮಣಿದು ಒಪ್ಪಂದಕ್ಕೆ ಯಾವ ಕಾರಣಕ್ಕೂ ಸಹಿ ಹಾಕಬಾರದು ಎಂದು ಆಗ್ರಹಿಸಿದ ಅವರು, ಭಾರತದಲ್ಲಿ ಕೃಷಿ ಇನ್ನೂ ಮಾನವ  ಶ್ರಮದಿಂದಲೇ ನಡೆಯುತ್ತಿದ್ದು, ಕೃಷಿಯನ್ನು ಉದ್ಯಮವಾಗಿ ರೂಪಿಸಲಾಗಿಲ್ಲ. ಕೃಷಿಯನ್ನು ಉದ್ಯಮವನ್ನಾಗಿಸಿದ ದೇಶಗಳಿಂದ ಅತೀ ಕಡಿಮೆ ಬೆಲೆಗೆ ಕೃಷಿ ಉತ್ಪನ್ನಗಳು ಭಾರತೀಯ ಮಾರುಕಟ್ಟೆಗೆ ಬಂದರೆ ದೇಶದ ಕೃಷಿಕರು ಸಂಕಷ್ಠಕ್ಕೆ ಈಡಾಗಲಿದ್ದಾರೆ ಎಂದು ಅವರ ಎಚ್ಚರಿಸಿದರು.

ಅಕ್ರಮ ಸಕ್ರಮಗೊಂಡ ಕೃಷಿ ಭೂಮಿಯನ್ನು ಯಾವ ಕಾರಣಕ್ಕೂ ಕೃಷಿಯೇತರ ಉದ್ದೇಶಕ್ಕೆ ಭೂ ಪರಿವರ್ತನೆ ಮಾಡಬಾರದೆಂದು ಆಗ್ರಹಿಸಿದ ಅವರು, ಅಕ್ರಮ ಸಕ್ರಮದಡಿ ಮಂಜೂರುಗೊಂಡ ಭೂಮಿಯನ್ನು ಪರಭಾರೆ ಮಾಡುವುದಕ್ಕೂ ಸರ್ಕಾರ ಅವಕಾಶ ನೀಡಬಾರದು. ಬಹುತೇಕ ಕಡೆ ಭೂ ಮಾಫಿಯಗಳು ಅಕ್ರಮ ಸಕ್ರಮ ದಂಧೆಯಲ್ಲಿ ಭಾಗಿಯಾಗಿದ್ದು, ಇದರಿಂದಾಗಿ ರೈತರಿಗೆ ಒದಗಿಸಲ್ಪಟ್ಟ ಕೃಷಿ ಭೂಮಿ ವಾಣಿಜ್ಯ ಉದ್ದೇಶದ ಭೂಮಿಗಳಾಗಿ ಬದಲಾಗುತ್ತಿದೆ ಎಂದು ಅವರು ಆರೋಪಿಸಿದರು.

೧೯೯೪ರಿಂದ ೨೦೦೦ ಇಸವಿಯ ವರೆಗೆ ೨ಲಕ್ಷ ಎಕ್ರೆ ಭೂಮಿ ಕೃಷಿಯೇತರ ಉದ್ದೇಶಕ್ಕೆ ಭೂ ಪರಿವರ್ತನೆಗೆ ಒಳಗಾಗಿದ್ದರೆ, ೨೦೦೨ರಿಂದ ೨೦೦೪ರ ವರೆಗಿನ ಕೇವಲ ೩ ವರ್ಷಗಳಲ್ಲಿ ೩.೫ ಲಕ್ಷ ಎಕ್ರೆ ಭೂಮಿ ಕೃಷಿಯೇತರ ಉದ್ದೇಶಕ್ಕೆ ಭೂ ಪರಿವರ್ತನೆಗೊಂಡಿದೆ. ಅವಿಭಜಿತ ದ.ಕ. ಜಿಲ್ಲೆಯಲ್ಲಿ ೨೦೦೨ರಲ್ಲಿ ೬.೫ ಲಕ್ಷ ಎಕ್ರೆ ಭೂಮಿಯಲ್ಲಿ ಭತ್ತ ಬೆಳೆಯಲಾಗುತ್ತಿದ್ದರೆ, ೨೦೧೬ರಲ್ಲಿ ಕೇವಲ ೪ ಸಾವಿರ ಎಕ್ರೆಯಲ್ಲಿ ಮಾತ್ರ ಭತ್ತ ಬೆಳೆಯಲಾಗುತ್ತಿದೆ. ಎಲ್ಲೆಡೆ ಭೂ ಮಾಫಿಯಕ್ಕೆ ಸಿಲುಕಿ ರೈತರು ಕೃಷಿ ಭೂಮಿ ಕಳೆದುಕೊಳ್ಳುತ್ತಿದ್ದಾರೆ. ಅಥವಾ ಆಹಾರ ಬೆಳೆ ಬೆಳೆಯುವುದರಿಂದ ವಿಮುಖರಾಗುತ್ತಿರುವುದು ಕಂಡು ಬರುತ್ತಿದೆ. ಸರ್ಕಾರಗು ಆಹಾರ ಬೆಳೆಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡಬೇಕಾಗಿರುವುದರಿಂದ ಕೇರಳ ಮಾದರಿಯಲ್ಲಿ ಭತ್ತದ ಕೃಷಿಗೆ ಬೆಂಬಲ ಬೆಲೆಯನ್ನು ನೀಡಬೇಕು ಎಂದು ಅವರು ಆಗ್ರಹಿಸಿದರು.

ಪಡಿತರ ಚೀಟಿಯ ಬೆರಳಚ್ಚಿಗಾಗಿ ದಿನಗಟ್ಟಲೆ ರೈತರನ್ನು, ಜನ ಸಾಮಾನ್ಯರನ್ನು ಸತಾಯಿಸಬಾರದೆಂದು ಆಗ್ರಹಿಸಿದ ಅವರು, ಪ್ರತಿ ಗ್ರಾಮ ಪಂಚಾಯತಗಳಲ್ಲಿ ಬೆರಳಚ್ಚು ನೀಡುವ ವ್ಯವಸ್ಥೆ ಜಾರಿಗೊಳ್ಸಬೇಕು. ಹಾಗೂ ದ.ಕ. ಜಿಲ್ಲೆಯಲ್ಲಿ ಬಹುತೇಕ ರೈತರು ಧೀರ್ಘಕಾಲಿಕ ಬೆಳೆಗಳನ್ನೇ ಬೆಳೆಯುತ್ತಿರುವುದರಿಂದ ಆರ್.ಟಿ.ಸಿ.ಗಳಲ್ಲಿ ತಲಾ ೩ ವರ್ಷಗಳಿಗೊಮ್ಮೆ ಬೆಳೆ ನಮೂದಿಸುವ ವ್ಯವಸ್ಥೆಯನ್ನು ಜಾರಿಗೊಳಿಸಬೇಕು ಎಂದು ಅವರು ಅಗ್ರಹಿಸಿದರು.

ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಎನ್.ಆರ್.ಸಿ. ಹಾಗೂ ಸಿ.ಎ.ಎ. ಕಾಯಿದೆಗಳ ಬಗ್ಗೆ ಜನರಲ್ಲಿ ಗೊಂದಲ ಮೂಡಿದ್ದು, ರಾಜಕಾರಣಿಗಳ ಸ್ಪಷ್ಠನೆಗಳು ಪರಿಣಾಮ ಬೀರುತ್ತಿಲ್ಲ.ಆದ ಕಾರಣ ಜಿಲ್ಲಾಡಳಿತವೇ ಕಾಯಿದೆಯ ಬಗ್ಗೆ ಸ್ಪಷ್ಠತೆಯನ್ನು ನಾಡಿನ ಜನತೆಗೆ ತಿಳಿಸಬೇಕೆಂದು ಈಗಾಗಲೇ ಜಿಲ್ಲಾಧಿಕಾರಿಗಳಿಗೆ ಲಿಖಿತ ಮನವಿ ಸಲ್ಲಿಸಲಾಗಿದೆ ಎಂದು ಅವರು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ರೈತ ಸಂಘದ ಜಿಲ್ಲಾ ಕಾರ್‍ಯದರ್ಶಿ ಇಬ್ರಾಹಿಂ ಖಲೀಲ್, ಸಂಚಾಲಕ ಅಲಿಮಾರ ರೂಪೇಶ್ ರೈ, ಪುತ್ತೂರು ತಾಲೂಕು ಅಧ್ಯಕ್ಷ ಬಾಲಸುಬ್ರಹ್ಮಣ್ಯ ಹೊಳ್ಳ, ಬೆಳ್ತಂಗಡಿ ತಾಲೂಕು ಅಧ್ಯಕ್ಷ ಸತ್ಯ ಶಂಕರ್ ಭಟ್ ಉಪಸ್ಥಿತರಿದ್ದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.