Home_Page_Advt
Home_Page_Advt
Home_Page_Advt
Breaking News

ಪರಣೆಯಲ್ಲಿ ನೂತನ ಮದರಸ ಕಟ್ಟಡದ ಉದ್ಘಾಟನಾ ಸಮಾರಂಭ

ಚಿತ್ರ/ವರದಿ: ಉಮಾಪ್ರಸಾದ್ ರೈ ನಡುಬೈಲು

  • ಮದರಸ ಶಿಕ್ಷಣದಿಂದ ಮಕ್ಕಳಿಗೆ ಉತ್ತಮ ಸಂಸ್ಕಾರ- ಅಬ್ಬುಲ್ ಖಾದರ್ ಅಲ್‌ಖಾಸಿಮಿ

ಪುತ್ತೂರು: ಕುದ್ಮಾರು ಗ್ರಾಮದ ಪರಣೆ ಮಿಹ್‌ರಾಜ್ ಜುಮಾ ಮಸ್ಜಿದ್ ವಠಾರದಲ್ಲಿ ನಿರ್ಮಾಣಗೊಂಡ ನೂತನ ಮದರಸ ಕಟ್ಟಡದ ಉದ್ಘಾಟನಾ ಸಮಾರಣಭವು ಜ.13 ರಂದು ಜರಗಿತು.

ಪರಣೆ ಮಿಹ್‌ರಾಜ್ ಜುಮಾ ಮಸ್ಜಿದ್‌ಯ ಗೌರವಾಧ್ಯಕ್ಷ ಶೈಖುನಾ ಎನ್‌ಪಿಎಂ ಝೈನುಲ್ ಅಬಿಧೀನ್ ತಂಙಲ್ ದುಗಲಡ್ಕ(ಕುನ್ನಂಗೈ-ಕೇರಳ)ರವರ ನೇತ್ರತ್ವದಲ್ಲಿ ಜರಗಿದ ಸಮಾರಂಭದಲ್ಲಿ ಪರಣೆ ಮಿಹ್‌ರಾಜ್ ಜುಮಾ ಮಸ್ಜಿದ್‌ಯ ಅಧ್ಯಕ್ಷ ಬಿ.ಕೆ.ಇಬ್ರಾಹಿಂ ಕುಂಬಮೂಲೆರವರು ಧ್ವಜಾರೋಹಣಗೈದರು. ಹಾಜಿ ಅಬ್ಬಾಸ್ ಕೆಳಂಬೀರಿ(ಸವಣೂರು)ರವರು ಮದರಸ ಕಟ್ಟಡವನ್ನು ಸಮರ್ಪಣೆ ಮಾಡಿದರು.

ಪರಣೆ ಮಿಹ್‌ರಾಜ್ ಜುಮಾ ಮಸ್ಜಿದ್‌ಯ ಗೌರವಾಧ್ಯಕ್ಷ ಶೈಖುನಾ ಎನ್‌ಪಿಎಂ ಝೈನುಲ್ ಅಬಿಧೀನ್ ತಂಙಲ್ ದುಗಲಡ್ಕ(ಕುನ್ನಂಗೈ-ಕೇರಳ)ರವರು ಮದರಸ ಕಟ್ಟಡದ ಉದ್ಘಾಟನೆ ಮತ್ತು ದುವಾ ನಡೆಸಿಕೊಟ್ಟರು. ನಿವೃತ್ತ ತಹಶೀಲ್ದಾರ್ ಇಸ್ಮಾಯಿಲ್ ಹಾಜಿ ಸಾಮೆತಡ್ಕರವರು ಅಧ್ಯಕ್ಷತೆ ವಹಿಸಿದ್ದರು. ಪರಣೆ ಎಚ್‌ಐಎಂ ಅಧ್ಯಾಪಕ ಮುಹಮ್ಮದ್ ಹನೀಫಿರವರು ಕಿರಾಹತ್ ಓದಿದರು. ಸಮಸ್ತ ಕೇರಳ ಜಂಇಯ್ಯತುಲ್ ಉಲಾಮ ಕೇಂದ್ರ ಮುಶವಾರದ ಬಿ.ಕೆ.ಅಬ್ದುಲ್ ಖಾದರ್ ಅಲ್‌ಖಾಸಿಮಿ ಬಂಬ್ರಾಣರವರು ಸಭಾ ಕಾರ್‍ಯಕ್ರಮದ ಉದ್ಘಾಟನೆಗೈದು ಮಾತನಾಡಿ ಪರಣೆಯಲ್ಲಿ ಸುಂದರವಾದ ಮದರಸ ಕಟ್ಟಡ ನಿರ್ಮಾಣವಾಗಿರುವುದು ತುಂಬಾ ಸಂತೋಷದ ವಿಷಯವಾಗಿದ್ದು, ಮದರಸ ಶಿಕ್ಷಣದಿಂದ ಮಕ್ಕಳಿಗೆ ಉತ್ತಮ ಸಂಸ್ಕಾರ ದೊರೆಯುತ್ತದೆ ಎಂದು ಹೇಳಿ, ಧಾರ್ಮಿಕ ಶಿಕ್ಷಣದಿಂದ ನಮ್ಮ ಜ್ಞಾನವೃದ್ಧಿಯಾಗುತ್ತದೆ ಎಂದು ಹೇಳಿದರು.

ಸನ್ಮಾನ:
ಸಮಸ್ತ ಕೇರಳ ಜಂಇಯ್ಯತುಲ್ ಉಲಾಮ ಕೇಂದ್ರ ಮುಶವಾರದ ಬಿ.ಕೆ.ಅಬ್ದುಲ್ ಖಾದರ್ ಅಲ್‌ಖಾಸಿಮಿ ಬಂಬ್ರಾಣರವರನ್ನು ಪರಣೆ ಮಿಹ್‌ರಾಜ್ ಜುಮಾ ಮಸ್ಜಿದ್‌ಯ ಅಧ್ಯಕ್ಷ ಬಿ.ಕೆ.ಇಬ್ರಾಹಿಂ ಕುಂಬಮೂಲೆರವರು ಸನ್ಮಾನಿಸಿ, ಗೌರವಿಸಿದರು. ಚಾಪಲ್ಲ ಮುದರ್ರೀಸ್ ಮುಹಮ್ಮದ್ ಅಶ್ರಫ್ ಫಾಝಿಲ್ ಬಾಖವಿರವರು ಉಪನ್ಯಾಸ ನೀಡಿದರು.

ಚೇಲಾರಿ ಎಸ್‌ಕೆಐಎಂವೈ ಬೋರ್ಡ್‌ನ ಮುಪತ್ತಿಸ್ ಉಮ್ಮರ್ ಫಾರೂಕ್ ದಾರಿಮಿ ತೆಕ್ಕಾರು, ಜಂಇಯ್ಯತುಲ್ ಮುಅಲ್ಲಿಮೀರ್ ಕೂರ್ನಡ್ಕ ರೇಂಜ್‌ನ ಬಿ.ಎಚ್. ಮುಹಮ್ಮದ್ ಶಾಫಿ ದಾರಿಮಿ, ಬೈತಡ್ಕ ಜೆ.ಎಂ ಮಾಜಿ ಅಧ್ಯಕ್ಷ ಸಾಬು ಹಾಜಿ ಕೆಳಂಬೀರಿ, ಚಾಪಲ್ಲ ಬಿ.ಜೆ.ಎಂ ಮಾಜಿ ಅಧ್ಯಕ್ಷ ಮುಹಮ್ಮದ್ ಹಾಜಿ ಕಣಿಮಜಲು, ಅಬ್ದುಲ್ ಹಾಜಿ ಕೇಳಂಬೀರಿ, ಚೆನ್ನಾರ್ ಜುಮಾ ಮಸೀದಿ ಅಧ್ಯಕ್ಷ ಅಬ್ದುಲ್ ಕರೀಂ ಹಾಜಿ ಚೆನ್ನಾರ್, ಚಾಪಲ್ಲ ಬಿ,ಜೆ,ಎಂ ಅಧ್ಯಕ್ಷ ಉಮ್ಮರ್ ಹಾಜಿ ಕೆನರ, ಬೆಳಂದೂರು ಎಂ,ಜೆ.ಎಂ ಅಧ್ಯಕ್ಷ ಇಬ್ರಾಹಿಂ ಹಾಜಿ ಕೊಡಂಕೀರಿ, ಬೈತಡ್ಕ ಜುಮಾ ಮಸೀದಿ ಅಧ್ಯಕ್ಷ ಅಬ್ದುಲ್ ಕರೀಂ ಹಾಜಿ ಎಟಿಸಿ, ಕೂರತ್ ಜುಮಾ ಮಸೀದಿ ಅಧ್ಯಕ್ಷ ಅಬೂಬಕ್ಕರ್ ಕೂರತ್, ಪಣೆಮಜಲು ಆರ್.ಜೆ.ಎಂ ಅಧ್ಯಕ್ಷ ಮೂಸಾ ಹಾಜಿ, ಪಣೆಮಜಲು ಆರ್.ಜೆ.ಎಂ, ಖತೀಬರಾದ ಹಾಜಿ ಅಬ್ಬಾಸ್ ಮದನಿ, ಅಂಕತಡ್ಕ ಹನಫೀ ಜುಮಾ ಮಸೀದಿ ಅಧ್ಯಕ್ಷ ಶೇಕ್ ಇಬ್ರಾಹಿಂ ಸಾಬ್‌ಮ ಮಾಡಾವು ಬಿ.ಜೆ.ಎಂ ಅಧ್ಯಕ್ಷ ಅಬ್ದುಲ್ ಹಮೀದ್ ಹಾಜಿ ಫ್ಯಾಮಿಲಿ, ಕೂರ್ನಡ್ಕ ರೇಂಜ್ ಮದ್ರಸ ಮೇನೇಜ್‌ಮೆಂಟ್‌ನ ಅಧ್ಯಕ್ಷ ಅಬೂಬಕ್ಕರ್ ಮುಲಾರ್, ಬೆಳ್ಳಾರೆ ಪ್ರಗತಿ ಎಂಟರ್ ಪ್ರೈಸಸ್‌ನ ಅಬೂಬಕ್ಕರ್ ಹಾಜಿ ಮತ್ತು ಅಬ್ದುಲ್ ಖಾದರ್ ಹಾಜಿ ಬಾಯಂಬಾಡಿರವರುಗಳು ಗೌರವ ಉಪಸ್ಥುತರಿದ್ದರು. ಮುಹಮ್ಮದ್ ಸಹದಿ ಪುಚ್ಚೆತ್ತೋಡಿ, ಪರಣೆ ಮಿಹ್‌ರಾಜ್ ಜುಮಾ ಮಸ್ಜಿದ್‌ನ ಮಾಜಿ ಅಧ್ಯಕ್ಷ ಎಚ್.ಎಂ, ಹಸೈನಾರ್ ಹಾಜಿ, ಪ್ರಧಾನ ಕಾರ್‍ಯದರ್ಶಿ ಕೆ.ಎಚ್. ಮುಹಮ್ಮದ್, ಕಾರ್‍ಯದರ್ಶಿ ಸುಲೈಮಾನ್ ಪರಣೆ ಎಸ್‌ಕೆಎಸ್‌ಎಸ್‌ಎಫ್ ಪರಣೆ ಶಾಖೆಯ ಅಧ್ಯಕ್ಷ ಮುಹಮ್ಮದ್ ಅಬಾಬಿಲ್, ಕಾರ್‍ಯದರ್ಶಿ ಜಮಾಲುದ್ದೀನ್ ಆಝ್‌ಹರಿ ಕೊಳಿರವರುಗಳು ಉಪಸ್ಥಿತರಿದ್ದರು. ಪರಣೆ ಮಿಹ್‌ರಾಜ್ ಜುಮಾ ಮಸ್ಜಿದ್‌ನ ಖತೀಬ್ ಪಿ.ಎಂ.ಅಬ್ದುಲ್ ಬಶೀರ್ ದಾರಿಮಿರವರು ಸ್ವಾಗತಿಸಿ, ಹನೀಫ್ ಸವಣೂರು ಮತ್ತು ಕೆ.ಎಚ್. ಇಕ್ಬಲ್‌ರವರುಗಳು ಕಾರ್‍ಯಕ್ರಮ ನಿರೂಪಿಸಿದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.