Home_Page_Advt
Home_Page_Advt
Home_Page_Advt
Breaking News

ಕುಂಬ್ರ ವರ್ತಕರ ಸಂಘದಿಂದ ಮಾಡಾವು 110 ಕೆವಿ, ಕಾವು 33ಕೆವಿ ವಿದ್ಯುತ್ ಸಬ್‌ಸ್ಟೇಷನ್‌ಗೆ ಭೇಟಿ

ಪುತ್ತೂರು: ಮಾಡಾವು ಬೊಳಿಕ್ಕಲದಲ್ಲಿ ನಿರ್ಮಾಣಗೊಳ್ಳುತ್ತಿರುವ 110 ಕೆವಿ ವಿದ್ಯುತ್ ಸಬ್‌ಸ್ಟೇಷನ್‌ಗೆ ಕುಂಬ್ರ ವರ್ತಕ ಸಂಘದ ಪದಾಧಿಕಾರಿಗಳು ಭೇಟಿ ನೀಡಿ ಕಾಮಗಾರಿ ವೀಕ್ಷಿಸಿದರು. ವಿದ್ಯುತ್ ಸಬ್‌ಸ್ಟೇಷನ್‌ನ ಸೇವೆ ಆರಂಭಿಸುವ ಬಗ್ಗೆ ಕೆಪಿಟಿಸಿಎಲ್ ಇ.ಇ ಗಂಗಾಧರರವರನ್ನು ದೂರವಾಣಿ ಮೂಲಕ ಸಂಪರ್ಕಿಸಿ ವಿವರ ಪಡೆದರು. ಸಬ್‌ಸ್ಟೇಷನ್‌ಗೆ ಎಲ್ಲಾ ಪರಿವರ್ತಕ ಸಾಮಗ್ರಿಗಳು ಬಂದಿದ್ದು ಕೆಲಸಗಳು ಪೂರ್ತಿಯಾಗಿವೆ. ಟವರ್ ನ ಕೆಲಸ ಬಾಕಿಯಿದ್ದು ಟೆಂಡರ್ ದಾರರು ಭೂಸ್ವಾಧೀನದ 2.5 ಕೋಟಿ ರೂಪಾಯಿ ಪರಿಹಾರ ನೀಡಲು ಬಾಕಿಯಿದ್ದು ಇದು ಪಾವತಿಯಾದ ಬಳಿಕದ 15 -20 ದಿನದೊಳಗೆ ನಮ್ಮ ಕಾಮಗಾರಿ ಮುಗಿಸಿ ಸೇವೆ ಆರಂಭಿಸಬಹುದೆಂದು ಮಾಹಿತಿ ನೀಡಿದ್ದಾರೆ ಎಂದು ವರ್ತಕರ ಸಂಘದ ಅಧ್ಯಕ್ಷರು ಪತ್ರಿಕೆಗೆ ತಿಳಿಸಿದ್ದಾರೆ. ಇಲೆಕ್ಟ್ರಿಇಂಜಿನಿಯರ್ ವಿಜೇಯೇಂದ್ರ ಸ್ಥಳದಲ್ಲಿನ ಮಾಹಿತಿ ನೀಡಿದರು.

ಕಾವು 33ಕೆವಿ ಕಾಮಗಾರಿ 90% ಪೂರ್ಣಗೊಂಡಿದ್ದು ಮಹಾರಾಷ್ಟ್ರದಿಂದ 2 ಬ್ರೇಕರ್ ಗಳು ಬರಲು ಬಾಕಿಯಿದ್ದು ಫೆಬ್ರವರಿ ಪ್ರಥಮ ವಾರದಲ್ಲಿ ಸೇವೆಗೆ ಲಭ್ಯವಾಗುವ ಬಗ್ಗೆ ಮಾಹಿತಿ ನೀಡಿದ ಕುಂಬ್ರ ಜೆ.ಇ ತೆಂಡೂಲ್ಕರ್ ರವರು ಇದು ಉದ್ಘಾಟನೆಯಾದರೆ ಕುಂಬ್ರದಿಂದ ಜಾಲ್ಸೂರ್, ಈಶ್ವರಮಂಗಲಕ್ಕೆ ಹೋಗುವ ಪವರ್ ಕಡಿತಗೊಳ್ಳಲಿದ್ದು ಲೋಡ್ ಕಮ್ಮಿಯಾಗುವ ಬಗ್ಗೆ ತಿಳಿಸಿದರು. ಮಾಡಾವು ಭೂಮಾಲೀಕರಿಗೆ ಆದಷ್ಟು ಬೇಗ ಪರಿಹಾರ ಕೊಡುವ ಬಗ್ಗೆ ಒತ್ತಡ ತಂದು 110ಕೆವಿ ಕೇಂದ್ರ ಲೋಕಾರ್ಪಣೆಗೊಳ್ಳಲು ಪ್ರಯತ್ನಿಸುವುದಾಗಿ ವರ್ತಕರ ಸಂಘದ ಅಧ್ಯಕ್ಷ ಮಾಧವ ರೈ ಕುಂಬ್ರ ತಿಳಿಸಿದರು. ಸಂಘದ ಪ್ರಧಾನ ಕಾರ್ಯದರ್ಶಿ ಅಝರ್ ಷಾ ಕುಂಬ್ರ, ಸ್ಥಾಪಕ ಅಧ್ಯಕ್ಷ ಶ್ಯಾಮ್ ಸುಂದರ ರೈ ಕೊಪ್ಪಳ, ಮಾಜಿ ಅಧ್ಯಕ್ಷರುಗಳಾದ ದಿವಾಕರ ಶೆಟ್ಟಿ,ಮೇಲ್ವಿನ್ ಮೊಂತೇರೋ. ಪದ್ಮನಾಭ ಆಚಾರ್ಯ, ಶಂಸುದ್ದೀನ್ ಎ.ಆರ್ ಉಪಸ್ಥಿತರಿದ್ದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.