Home_Page_Advt
Home_Page_Advt
Home_Page_Advt
Breaking News

ಸಿ.ಎ.ಎ, ಎನ್.ಆರ್.ಸಿ ವಿರುದ್ಧ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಪ್ರತಿಭಟನೆ

  • ಬ್ರಿಟಿಷರಂತೆ ಸಂಘಿಗಳನ್ನು ದೇಶದಿಂದ ಹೊರ ಹಾಕಿ -ಸವಾದ ಕಲ್ಲರ್ಪೆ
  • ಭಾರತವನ್ನು ಯುದ್ಧರಂಗವನ್ನಾಗಿ ಮಾಡದಿರಿ – ಅಬ್ದುಲ ರಜಾಕ್
  • ಬ್ರಿಟಿಷರ ಆಳ್ವಿಕೆ ಮರುಕಳಿಸುತ್ತಿದೆ – ರಿಯಾಜ್

ಪುತ್ತೂರು: ಕೇಂದ್ರ ಸರಕಾರ ಜಾರಿಗೆ ತಂದಿರುವ ಸಿ.ಎ.ಎ ಮತ್ತು ಎನ್.ಆರ್.ಸಿ ಕಾನೂನು ಅಸಂವಿಧಾನಕವಾಗಿದೆ ಎಂದು ಆರೋಪಿಸಿ ಪುತ್ತೂರು ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾದ ವತಿಯಿಂದ ಪುತ್ತೂರು ಗಾಂಧಿಕಟ್ಟೆಯಲ್ಲಿ ಪ್ರತಿಭಟನೆ ನಡೆಯಿತು.

ಬ್ರಿಟಿಷರಂತೆ ಸಂಘಿಗಳನ್ನು ದೇಶದಿಂದ ಹೊರ ಹಾಕಿ:
ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾದ ಜಿಲ್ಲಾ ಸಮಿತಿ ಸದಸ್ಯ ಸವಾದ್ ಕಲ್ಲರ್ಪೆ ಅವರು ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿ ಈ ದೇಶದ ಪೌರರಿಗೆ ಕೇಂದ್ರ ಸರಕಾರದ ಹೊಸ ಕಾಯ್ದೆಯಿಂದ ತೊಂದರೆ ಇದೆ. ಕಾಯ್ದೆಯ ಮೂಲಕ ಇವತ್ತು ದೇಶದಲ್ಲೆಲ್ಲಾ ಜಾತಿ ಧರ್ಮವನ್ನು ತರಲು ಕೇಂದ್ರ ಸರಕಾರ ಮುಂದಾಗಿದೆ. ಇಂತಹ ಸಂದರ್ಭದಲ್ಲಿ ಅದರ ವಿರುದ್ಧ ನಾವು ಪ್ರತಿಭಟನೆ ಮಾಡಿದರೆ ಗೋಲಿಬಾರ್ ಮಾಡುತ್ತಾರೆ ಅದೇ ಸಂಘಿಗಳು ಪ್ರತಿಭಟನೆ ಮಾಡಿದರೆ ನಗುಮೊಗದಿಂದ ಪೊಲೀಸರು ಎತ್ತಿಕೊಂಡು ಹೋಗುತ್ತಾರೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿ ಹೋರಾಟ ಆರಂಭಗೊಂಡಿದೆ. ಪೊಲೀಸರೆ ನೀವು ನಮ್ಮ ಪಾಲಿಗೆ ಬ್ರಿಟೇಷರಾಗಬೇಡಿ. ನಾವು ಶಾಂತ ರೀತಿಯಲ್ಲಿ ಪ್ರತಿಭಟನೆ ಮಾಡುತ್ತೇವೆ. ನಿಮ್ಮ ಗೋಲಿಬಾರ್‌ಗೆ ಜಗ್ಗುವುದಿಲ್ಲ ಎಂದ ಅವರು ಬಿಜೆಪಿ ಇವತ್ತು ಈ ಹೋರಾಟವನ್ನು ಹಿಂದು ಮುಸಲ್ಮಾನರ ಹೋರಾಟ ಬಿಂಬಿಸತ್ತಿದೆ. ಆದರೆ ಇದು ಹಿಂದು ಮುಸಲ್ಮಾನರ ಹೋರಾಟ ಅಲ್ಲ. ಜ್ಯಾತೀತರಾಗಿ ನಾವು ಒಗ್ಗಟ್ಟಾಗಿದ್ದೇವೆ. ಬ್ರಿಟೇಷರನ್ನು ಹೊರಗೆ ಹಾಕಿದ ಹಾಗೆ ಸಂಘಿಗಳ್ನು ಈ ದೇಶದಿಂದ ಹೊರಗೋಡಿಸಿದಾಗ ಸ್ವಾತಂತ್ರ್ಯ ಸಿಗಲಿದೆ ಎಂದರು.

ಬೆಂಕಿಯೊಂದಿಗೆ ಆಟ ಆಡಬೇಡಿ:
ದೇಶದ ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರು ಬೆಂಕಿಯೊಂದಿಗೆ ಅಟ ಆಡುತ್ತಿದ್ದಾರೆ. ಆದರೆ ಕ್ಯಾಂಪಸ್ ಫ್ರಂಟ್ ಆಫ ಇಂಡಿಯಾ ಈ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದು, ನಿಮ್ಮ ಆಟವನ್ನು ಕೊನೆ ಮಾಡುತ್ತೇವೆ. ಈ ನಿಟ್ಟಿನಲ್ಲಿ ದ.ಕ.ಜಿಲ್ಲೆಯಲ್ಲಿ ಕ್ಯಾಂಪಸ್‌ಫ್ರಂಟ್ ಆಫ್ ಇಂಡಿಯಾ ಮುಂಚೂಣಿಯಲಿದೆ ಎಂದು ಸವಾದ್ ಕಲ್ಲರ್ಪೆ ಹೇಳಿದರು.

ಭಾರತವನ್ನು ಯುದ್ಧರಂಗವನ್ನಾಗಿ ಮಾಡದಿರಿ:
ಸರ್ವಕಾಲೇಜು ಒಕ್ಕೂಟದ ಕಾರ್ಯದರ್ಶಿ ಅಬ್ದುಲ್ ರಜಾಕ್ ಮರ್ದಾಳ ಅವರು ಮಾತನಾಡಿ ಪೌರತ್ವ ಕಾಯ್ದೆಯ ಕುರಿತು ರಾಜಕೀಯ ಪಕ್ಷದ ಒತ್ತಾಸೆಯಿಂದ ಮಾತನಾಡದೆ ಕುಳಿತು ಕೊಳ್ಳಬೇಡಿ. ರಾಜಕೀಯಿಂದ ಹೊರ ಬಂದು ನೋಡಿದಾಗ ಕಾಯ್ದೆಯ ತೊಂದರೆ ತಿಳಿಯುತ್ತದೆ ಎಂದ ಅವರು ಸರ್ವಜನಾಂಗದ ಶಾಂತಿಯ ತೋಟವಾದ ಭಾರತವನ್ನು ಯುದ್ಧರಂಗವನ್ನಾಗಿ ಮಾಡಬೇಡಿ ಎಂದರು. ಇದೆ ಸಂದರ್ಭದಲ್ಲಿ ಪುತ್ತೂರಿನಲ್ಲಿ ಪ್ರತಿಭಟನಗೆ ಅವಕಾಶ ನೀಡಿದ ಪೊಲೀಸರಿಗೆ ಕೃತಜ್ಞತೆ ಸಲ್ಲಿಸಿದರು.

ಬ್ರಿಟೀಷರ ಆಳ್ವಿಕೆ ಮರುಕಳಿಸುತ್ತಿದೆ:
ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾದ ಕಾರ್ಯದರ್ಶಿ ರಿಯಾಜ್ ಅವರು ಮಾತನಾಡಿ ಬ್ರಿಟೀಷರ ಆಳ್ವಿಕೆ ಮರುಕಳಿಸುತ್ತಿದೆ. ಸಿ.ಎ.ಎ ಎಂಬ ಕರಳಾ ಕಾನೂನನ್ನು ತಂದು ಅಮಾಯಕರನ್ನು ಗುಂಡಿಕ್ಕಿ ಕೊಂದ ಸಂಘ ಪರಿವಾರವನ್ನು ಓಡಿಸಬೇಕೆಂದು ಆಗ್ರಹಿಸಿದರು. ಸರ್ವಕಾಲೇಜು ಒಕ್ಕೂಟದ ಅಧ್ಯಕ್ಷ ಇಲ್ಯಾಸ್, ಒಕ್ಕೂಟದ ಮನ್ಸೂರ್, ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾದ ತಾಲೂಕು ಅಧ್ಯಕ್ಷ ರಿಯಾಜ್ ಅಂಕತಡ್ಕ, ಕಾರ್ಯದರ್ಶಿ ಅನ್ಸಾರ್, ಸಮಾಸ್ ಬನ್ನೂರು, ಅಫ್ರೀದ್ ಕೂರ್ನಡ್ಕ, ಶಬೀರ್ ಕಲ್ಲರ್ಪೆ, ಪಾರೂಕ್ ಕಬಕ ಮತ್ತಿತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ಪ್ರತಿಭಟನೆಯಲ್ಲಿ ಪೌರತ್ವ ಕಾಯ್ದೆ ಕುರಿತು ದಾಖಲೆ ನೀಡಲ್ಲ, ಪ್ರತಿಭಟನೆಯಲ್ಲಿ ಅಂತಿಮ ವಿಜಯ ನಮಗೆ, ನಾವು ಸೋಲಲ್ಲ, ಆಜಾದಿ ಘೋಷಣೆಗಳನ್ನು ಹಾಕಲಾಯಿತು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.