Home_Page_Advt
Home_Page_Advt
Home_Page_Advt
Breaking News

ಮಾಸ್ಟರ್ ಆಥ್ಲೆಟಿಕ್ ಕ್ರೀಡಾಕೂಟದಲ್ಲಿ ಕಾಣಿಯೂರಿನ ಸುಶೀಲ ಅಂತರಾಷ್ಟ್ರೀಯ ಮಟ್ಟಕ್ಕೆ

  • 5 ಚಿನ್ನದ ಪದಕ 
  • 1 ಬೆಳ್ಳಿಯ ಪದಕ

ಕಾಣಿಯೂರು: ಕೇರಳದ ಕೋಯಿಕ್ಕೋಡ್ ಕ್ರೀಡಾಂಗಣದಲ್ಲಿ ಜ.10ರಿಂದ ಜ.12ರ ತನಕ ನಡೆದ ರಾಷ್ಟ್ರ ಮಟ್ಟದ 40ನೇ ನ್ಯಾಷನಲ್ ಮಾಸ್ಟರ್ ಅಥ್ಲೆಟಿಕ್ -2020ರ ಕ್ರೀಡಾಕೂಟದಲ್ಲಿ ಕಾಣಿಯೂರು ಗ್ರಾಮದ ಪೆರ್ಲೋಡಿ ಸುಶೀಲರವರು ಫೆಬ್ರವರಿಯಲ್ಲಿ ಥೈಲ್ಯಾಂಡ್‌ನಲ್ಲಿ ನಡೆಯಲಿರುವ ಅಂತರಾಷ್ಟ್ರೀಯ ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾರೆ.

65ರ ವಯೋಮಾನದ ವಿಭಾಗದಲ್ಲಿ ಸುಶೀಲರವರು ಭಾಗವಹಿಸಿದ 3ಸಾವಿರ ವೇಗ ನಡಿಗೆ, 200ಮೀ ಓಟ, 400ಮೀ ಓಟ, 800ಮೀ ಓಟ, 400×4 ರಿಲೆಯಲ್ಲಿ ಪ್ರಥಮ ಸ್ಥಾನವನ್ನು ಪಡೆದುಕೊಂಡಿದ್ದಾರೆ.ಅಲ್ಲದೇ 60ರ ವಯೋಮಾನ ವಿಭಾಗದಲ್ಲಿಯೂ 400×4 ರಿಲೆ ಸ್ಪರ್ಧೆಯಲ್ಲಿ ಭಾಗವಹಿಸಿ ದ್ವಿತೀಯ ಸ್ಥಾನವನ್ನು ಪಡೆದುಕೊಂಡು ಒಟ್ಟು 5 ಚಿನ್ನದ ಪದಕ ಹಾಗೂ 1 ಬೆಳ್ಳಿಯ ಪದಕವನ್ನು ತನ್ನದಾಗಿಸಿಕೊಂಡಿದ್ದಾರೆ. ಕಳೆದ ಹಲವು ವರ್ಷಗಳಿಂದ ಹಿರಿಯರ ಕ್ರೀಡಾಕೂಟದಲ್ಲಿ ಭಾಗವಹಿಸಿಕೊಂಡು ಬರುತ್ತಿರುವ ಸುಶೀಲರವರು ಹಲವಾರು ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.