Home_Page_Advt
Home_Page_Advt
Home_Page_Advt
Breaking News

ಮೊರಾರ್ಜಿ ದೇಸಾಯಿ ವಸತಿ ಶಾಲೆಯ ವಾರ್ಷಿಕೋತ್ಸವ

ಪುತ್ತೂರು: ಆತ್ಮವಿಶ್ವಾಸ, ಆತ್ಮ ನಂಬಿಕೆ ಮತ್ತು ದೃಢಸಂಕಲ್ಪ ಇದು ಜೀವನದಲ್ಲಿ ರೂಢಿಸಿಕೊಮಡರೆ ಯಾವುದೇ ಸಾಧನೆ ಮಾಡಲು ಸಾಧ್ಯ. ಸಂಸ್ಕಾರಯುತ ಜೀವನ ನಡೆಸಲು ಪೂರಕವಾಗಿರುವಂತಹ ಶಿಕ್ಷಣ ನಮ್ಮದಾಗಬೇಕೆಂದು ಪುತ್ತೂರು ಪಂಚಾಯತ್ ಅದ್ಯಕ್ಷ ರಾಧಾಕೃಷ್ಣ ಬೋರ್ಕರ್ ಹೇಳಿದರು. ಅವರು ಪುತ್ತೂರು ಬಲ್ನಾಡು ಮೊರಾರ್ಜಿ ದೇಸಾಯಿ ವಸತಿ ಶಾಲೆಯ ವಾರ್ಷಿಕೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ಬಂಟ್ವಾಳ ಎಸ್‌ವಿಎಸ್ ಕಾಲೇಜಿನ ಕನ್ನಡ ಉಪನ್ಯಾಸಕ ಚೇತನ್ ಮುಂಡಾಜೆ ಮಾತನಾಡಿ ಶಿಕ್ಷಣ ಎಂಬುದು ಕೇವಲ ಪುಸ್ತಕದ ಬದನೆ ಕಾಯಿಯಾಗಿರದೆ ಮನುಷ್ಯನ ಯಶಸ್ಸಿಗೆ ಮೆಟ್ಟಿಲು ಆಗಿರಬೇಕು. ಸಮಾಜ ಮತ್ತು ಸಾಹಿತ್ಯ ಮನುಷ್ಯನ ಅಭಿವೃದ್ಧಿಗೆ ಬಹಳ ಮುಖ್ಯವಾಗಿರುತ್ತದೆ ಎಂದರು. ಪುತ್ತೂರು ನಗರಸಭೆ ಸದಸ್ಯೆ ಪೂರ್ಣಿಮಾ ಮಾತನಾಡಿ ಬಾಲ್ಯದಲ್ಲಿ ಉತ್ತಮ ಪ್ರತಿಭೆಯನ್ನು ಪ್ರದರ್ಶಿಸುವುದರ ಮೂಲಕ ಭವಿಷ್ಯದಲ್ಲಿ ಉತ್ತಮ ಜೀವನ ನಡೆಸಿರಿ. ಒಳ್ಳೆಯ ಶಿಕ್ಷಣ ಪಡೆದು ಉತ್ತಮ ಭವಿಷ್ಯ ಪಡೆಯಿರಿ ಎಂದು ಹೇಳಿದರು. ಹಾರಾಡಿ ಸಿಆರ್‌ಪಿ ನಾರಾಯಣ ಡಿ., ಉಪ್ಪಿನಂಗಡಿ ಡಾ.ಬಿ.ಆರ್.ಅಂಬೇಡ್ಕರ್ ವಸತಿ ಶಾಲೆಯ ಪ್ರಾಂಶುಪಾಲ ಕೃಷ್ಣ ಕುಮಾರ್ ಮಾತನಾಡಿ ಶುಭಹಾರೈಸಿದರು. ಪೋಷಕ ಪ್ರತಿನಿಧಿ ತಿಮ್ಮಪ್ಪ ಗೌಡ, ರೇವತಿ, ವಿದ್ಯಾರ್ಥಿ ನಾಯಕ ರೋಹಿತ್, ಉಪನಾಯಕಿ ಅನನ್ಯ ಬಿ.ಡಿ., ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪ್ರಾಂಶುಪಾಲರಾದ ಸುಬ್ರಹ್ಮಣ್ಯ ನಾಯಕ್ ಸ್ವಾಗತಿಸಿದರು. ಶಿಕ್ಷಕಿ ದೇವಕಿ ವರದಿ ವಾಚಿಸಿದರು. ನಿಲಯಪಾಲ ಮೋಹನ್ ಕುಮಾರ್ ವಂದಿಸಿದರು. ಶಿಕ್ಷಕ ಐತ್ತಪ್ಪ ನಾಯ್ಕ, ಎಂ.ಆಶಾ, ಪ್ರಮೀಳಾ, ಪ್ರತಿಮಾ, ಜ್ಯೋತಿ, ಮೈನಾ ವಿವಿಧ ಕಾರ್ಯಕ್ರಮ ನಿರೂಪಿಸಿದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.