Home_Page_Advt
Home_Page_Advt
Home_Page_Advt
Breaking News

ನರಿಮೊಗರು ಅಂಗನವಾಡಿಯಲ್ಲಿ ಬಾಲಮೇಳ- ಸಿಟೌಟ್ ಉದ್ಘಾಟನೆ

 

ಪುತ್ತೂರು: ನರಿಮೊಗರು ಅಂಗನವಾಡಿ ಕೇಂದ್ರದಲ್ಲಿ ಬಾಲಮೇಳ ಮತ್ತು ನೂತವವಾಗಿ ನಿರ್ಮಿಸಿದ ಸಿಟೌಟ್ ಉದ್ಘಾಟನಾ ಕಾರ್ಯಕ್ರಮ ಜ.18ರಂದು ನಡೆಯಿತು.

ನರಿಮೊಗರು ಗ್ರಾಮ ಪಂಚಾಯತ್ ಅಧ್ಯಕ್ಷೆ ಚಂದ್ರಕಲಾ ಮುಕ್ವೆ ಅವರು ಸಿಟೌಟ್ ಮತ್ತು ಗ್ರಿಲ್ಸ್ ಉದ್ಘಾಟಿಸಿ, ಸಭಾಧ್ಯಕ್ಷತೆ ವಹಿಸಿ ಮಾತನಾಡಿ, ಸರಕಾರಿ ಶಿಕ್ಷಣ ಸಂಸ್ಥೆಗಳ ಜೊತೆ ದಾನಿಗಳು, ಊರಿನವರು ಕೈಜೋಡಿಸಿದರೆ ಮಾತ್ರ ಅಭಿವೃದ್ಧಿ ಹೊಂದಲು ಸಾಧ್ಯ. ಈ ನಿಟ್ಟಿನಲ್ಲಿ ಅಂಗನವಾಡಿಗೆ ಈ ವ್ಯವಸ್ಥೆಯನ್ನು ಮಾಡಲು ಸಹಕರಿಸಿದ ದಾನಿಗಳ ಸೇವೆ ಅತ್ಯಮೂಲ್ಯ ಎಂದರು.

ಸನ್ಮಾನ: ಸಿಟೌಟ್‌ಗೆ ರೂ. 35 ಸಾವಿರ ವೆಚ್ಚದಲ್ಲಿ ಗ್ರಿಲ್ಸ್ ಅಳವಡಿಸಿಕೊಟ್ಟ ಸುಳ್ಯ ವಲಯ ಅಬಕಾರಿ ಇನ್ಸ್‌ಪೆಕ್ಟರ್ ಮಹಾಲಿಂಗ ನಾಯ್ಕ ನರಿಮೊಗರು ಮತ್ತು ಫ್ಯಾನ್ ಕೊಡುಗೆ ನೀಡಿದ ಹಾಗೂ ಸಿಟೌಟ್ ರಚನೆಗೆ ದೇಣಿಗೆ ಸಂಗ್ರಹಿಸಿ ಕೊಟ್ಟ ನರಿಮೊಗರು ಬೀಟ್ ಪೊಲೀಸ್ ಹರೀಶ್‌ರವರನ್ನು ಸನ್ಮಾನಿಸಲಾಯಿತು. 

ಬಹುಮಾನ ವಿತರಣೆ: ಬಾಲ ಮೇಳದ ಪ್ರಯುಕ್ತ ಮಕ್ಕಳಿಗೆ ಮತ್ತು ಮಹಿಳೆಯರಿಗೆ ವಿವಿಧ ಸ್ಪರ್ಧೆಗಳನ್ನು ನಡೆಸಿ ಬಹುಮಾನ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ತಾ.ಪಂ.ಸದಸ್ಯ ಪರಮೇಶ್ವರ ಭಂಡಾರಿ, ಪುತ್ತೂರು ನಗರ ಠಾಣಾ ಪೊಲೀಸ್ ನಿರೀಕ್ಷಕ ತಿಮ್ಮಪ್ಪ ನಾಯ್ಕ್, ನರಿಮೊಗರು ಗ್ರಾ.ಪಂ.ಸದಸ್ಯೆ ಮೋಹಿನಿ, ಜಯರಾಮ ಪೂಜಾರಿ ಒತ್ತೆಮುಂಡೂರು, ವೇದನಾಥ ಸುವರ್ಣ ನರಿಮೊಗರು, ನರಿಮೊಗರು ಗ್ರಾ.ಪಂ. ಮಾಜಿ ಸದಸ್ಯ ನಾಗೇಶ್ ನಾಕ್, ಅಂಗನವಾಡಿ ಮೇಲ್ವಿಚಾರಕಿ ಆರತಿ, ನರಿಮೊಗರು ಶಾಲಾ ಪ್ರಭಾರ ಮುಖ್ಯೋಪಾಧ್ಯಾಯಿನಿ ಜುಸ್ತಿನಾ ಡಿ’ಸೋಜಾ ಉಪಸ್ಥಿತರಿದ್ದರು.

ಸರಿತಾ ಸ್ವಾಗತಿಸಿದರು. ನರಿಮೊಗರು ಅಂಗನವಾಡಿ ಕಾರ್ಯಕರ್ತೆ ಮಮತಾ ವರದಿ ವಾಚಿಸಿದರು. ನಮಿತಾ ವಂದಿಸಿದರು. ಭಕ್ತಕೋಡಿ ಹಿ.ಪ್ರಾ.ಶಾಲಾ ದೈಹಿಕ ಶಿಕ್ಷಣ ಶಿಕ್ಷಕಿ ಪುಷ್ಪಾವತಿ ಕಾರ್ಯಕ್ರಮ ನಿರೂಪಿಸಿದರು. ಅಂಗನವಾಡಿ ಸಹಾಯಕಿ ಲೋಕಮ್ಮ ಸಹಕರಿಸಿದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.