Home_Page_Advt
Home_Page_Advt
Home_Page_Advt
Breaking News

ಕೆಎಸ್‌ಆರ್‌ಟಿಸಿ ಅಪಘಾತ ರಹಿತ ಚಾಲನೆಗೆ 9 ಮಂದಿಗೆ ಬೆಳ್ಳಿಪದಕ: ಜ.21ರಂದು ಪದಕ ಪ್ರದಾನ


ಪುತ್ತೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಪುತ್ತೂರು ವಿಭಾಗದ ವ್ಯಾಪ್ತಿಯಲ್ಲಿರುವ 4 ಘಟಕಗಳಲ್ಲಿ ಅಪಘಾತ ರಹಿತ ಚಾಲನೆಗಾಗಿ 9 ಮಂದಿ ಚಾಲಕರು ಬೆಳ್ಳಿ ಪದಕ ಪುರಸ್ಕಾರಕ್ಕೆ ಪಾತ್ರರಾಗಿದ್ದಾರೆ.

ಚಾಲಕ ಮತ್ತು ಚಾಲಕ ಕಂ ನಿರ್ವಾಹಕರ 5 ವರ್ಷಗಳ ಸೇವೆಯನ್ನು ಪರಿಗಣಿಸಿ ಬೆಳ್ಳಿಪದಕ ನೀಡಲಾಗುತ್ತಿದೆ. 2018ನೇ ಸಾಲಿನಲ್ಲಿ ನೀಡಲಾಗುವ ಪುರಸ್ಕಾರಕ್ಕೆ ಪುತ್ತೂರು ಘಟಕದ ಚಾಲಕ ತೆಂಕಿಲ ನಿವಾಸಿ ಕೃಷ್ಣಪ್ಪ ಪೂಜಾರಿ, ಚಾಲಕ ಕಂ ನಿರ್ವಾಹಕ ಮೊಟ್ಟೆತ್ತಡ್ಕ ನಿವಾಸಿ ಸುರೇಶ ಮಮದಾಪುರ, ಬಿ.ಸಿ ರೋಡ್ ಘಟಕದ ಚಾಲಕ ಬಂಟ್ವಾಳ ತಾಲೂಕು ಅನಂತಾಡಿ ಗೋಳಿಕಟ್ಟೆ ನಿವಾಸಿ ದಯಾನಂದ ಟಿ., ಮಡಿಕೇರಿ ಘಟಕದ ಚಾಲಕರಾದ ಸೋಮವಾರಪೇಟೆ ಹತ್ತೂರು ಗುಡ್ಡೆಹೋಸುರು ಹೆಚ್.ಆರ್ ಧರ್ಣಪ್ಪ, ಸೋಮವಾರಪೇಟೆ ಚಿಕ್ಕತ್ತೂರು ಗ್ರಾಮದ ಕೂಡು ಮಂಗಳೂರು ನಿವಾಸಿ ಡಿ.ಎ ವೆಂಕಟೇಶ, ಮಡಿಕೇರಿಯ ಮದೆ ನಿವಾಸಿ ರಾಮಕೃಷ್ಣ ಹೆಚ್.ಎಲ್, ಮಡಿಕೇರಿ ನರಿಯಂದಡ ಚೆಯಾಂಡಣೆ ನಿವಾಸಿ ಜಯರಾಮ್ ಬಿ.ಟಿ, ಧರ್ಮಸ್ಥಳ ಘಟಕದ ಚಾಲಕ ಸಕಲೇಶಪುರ ನೀಡಿಗೆರೆ ನಿವಾಸಿ ಹೆಚ್.ಎಲ್ ಜಯಪ್ಪ ಹಾಗೂ ಪುತ್ತೂರು ವಿಭಾಗೀಯ ಕಾರ್ಯಾಗಾರದ ಚಾಲಕ ಬಂಟ್ವಾಳ ತಾಲೂಕು ಪಾಣೆಮಂಗಳೂರು ಮೆಲ್ಕಾರ್ ನಿವಾಸಿ ಎಂ.ರವಿಕುಮಾರ್ ಬೆಳ್ಳಿ ಪದಕ ಪುರಸ್ಕಾರವನ್ನು ಪಡೆದುಕೊಳ್ಳಲಿದ್ದಾರೆ.

ಜ.21ರಂದು ಪದಕ ಪ್ರದಾನ:
ಅಘಾತ ರಹಿತ ಚಾಲಕರಿಗೆ ಬೆಳ್ಳಿ ಪದಕ ಪುರಸ್ಕಾರವು ಜ.21ರಂದು ಅಪರಾಹ್ನ ಮುಕ್ರಂಪಾಡಿಯಲ್ಲಿರುವ ವಿಭಾಗೀಯ ಕಾರ್ಯಾಗಾರದ ಆವರಣದಲ್ಲಿ ನಡೆಯಲಿದೆ. ವಿಭಾಗದ ಸಿಬಂದಿಗಳ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಹಾಗೂ ವಿಭಾಗದ ಅಧಿಕಾರಿಗಳು ಮತ್ತು ಸಿಬಂದಿಗಳಿಗೆ ಕ್ರೀಡೆ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಣೆ ಈ ಸಂದರ್ಭದಲ್ಲಿ ನಡೆಯಲಿದೆ. ಶಾಸಕ ಸಂಜೀವ ಮಠಂದೂರು, ಉಪ ಪೊಲೀಸ್ ಅಧೀಕ್ಷಕ ದಿನಕರ ಶೆಟ್ಟಿ ಹಾಗೂ ಪ್ರಾದೇಶಿಕ ಸಾರಿಗೆ ಅಧಿಕಾರಿ ಅನಂದ ಗೌಡ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ ಎಂದು ವಿಭಾಗೀಯ ನಿಯಂತ್ರಣಾಧಿಕಾರಿಗಳ ಪ್ರಕಟಣೆ ತಿಳಿಸಿದೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.