Home_Page_Advt
Home_Page_Advt
Home_Page_Advt
Breaking News

ಪುತ್ತೂರಿನಲ್ಲಿ ಭಜನಾ ಸತ್ಸಂಗ ಸಮಾವೇಶ: ಜ.23ಕ್ಕೆ ಸಮಾವೇಶದ ಕಚೇರಿ ಉದ್ಘಾಟನೆ

ಪುತ್ತೂರು: ಫೆ.8೮ರಂದು ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಳದ ಎದುರಿನ ದೇವರಮಾರು ಗದ್ದೆಯಲ್ಲಿ ಧರ್ಮಸ್ಥಳ ಭಜನಾ ಪರಿಷತ್ ಆಶ್ರಯದಲ್ಲಿ ನಾನಾ ಸಂಘಟನೆಗಳ ಸಹಕಾರದೊಂದಿಗೆ ನಡೆಯುವ ದಕ್ಷಿಣಕನ್ನಡ ಜಿಲ್ಲಾ ಮಟ್ಟದ ಭಜನಾ ಸತ್ಸಂಗ ಸಮಾವೇಶದ ಕಚೇರಿ ಉದ್ಘಾಟನೆ ಕಾರ್ಯಕ್ರಮ ಜನವರಿ 23ರಂದು ನಡೆಯಲಿದೆ.

ಪುತ್ತೂರು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನಾ ಕಚೇರಿಯ ನೆಲ ಮಾಳಿಗೆಯಲ್ಲಿ ನೂತನ ಭಜನಾ ಸತ್ಸಂಗ ಕಚೇರಿಯನ್ನು ಶ್ರೀಧಾಮ ಮಾಣಿಲದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಉದ್ಘಾಟಿಸಿ ಆಶೀರ್ವಚನ ನೀಡಲಿದ್ದಾರೆ. ದಾಸ ಸಾಹಿತ್ಯ ಪ್ರವರ್ತಕರಾದ ರಾಮಕೃಷ್ಣ ಕಾಟುಕುಕ್ಕೆ ಭಾಗವಹಿಸಲಿದ್ದಾರೆ. ಭಜನಾ ಸತ್ಸಂಗ ಸಮಾವೇಶ ಸಮಿತಿ ಅಧ್ಯಕ್ಷರು, ಪದಾಧಿಕಾರಿಗಳು, ಉಪ ಸಮಿತಿಗಳ ಮುಖಂಡರು, ನಾನಾ ಭಜನಾ ತಂಡಗಳ ಪ್ರಮುಖರು, ಗ್ರಾಮಾಭಿವೃದ್ಧಿ ಯೋಜನೆ, ಜನಜಾಗೃತಿ ವೇದಿಕೆ ಪ್ರಮುಖರು ಭಾಗವಹಿಸಲಿದ್ದಾರೆ ಕಚೇರಿ ನಿರ್ವಹಣಾ ಸಮಿತಿ ಅಧ್ಯಕ್ಷ ಪದ್ಮನಾಭ ಶೆಟ್ಟಿ ಅವರು ತಿಳಿಸಿದ್ದಾರೆ.

10ಸಾವಿರಕ್ಕೂ ಮಿಕ್ಕಿ ಭಜಕರು ಆಗಮಿಸುವ ನಿರೀಕ್ಷೆ
ಫೆ.೮ರಂದು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಗದ್ದೆಯಲ್ಲಿ ನಡೆಯುವ ಭಜನಾ ಸತ್ಸಂಗ ಸಮಾವೇಶದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು, ಬೆಳ್ತಂಗಡಿ, ಬಂಟ್ವಾಳ, ಕಾಸರಗೋಡು, ಕುಂಬ್ಳೆ, ಮಂಗಳೂರು, ಸುಳ್ಯ ತಾಲೂಕು ಒಳಗೊಂಡಂತೆ ಸಮಾವೇಶ ರೂಪಿಸಲಾಗಿದ್ದು, ಜಿಲ್ಲೆಯ ವಿವಿಧ ಭಾಗಗಳಿಂದ ೧,೫೦೦ಕ್ಕೂ ಮಿಕ್ಕಿದ ಭಜನಾ ಮಂಡಳಿಯ ಸುಮಾರು ೧೦ಸಾವಿರಕ್ಕೂ ಮಿಕ್ಕದ ಭಜಕರು ಆಗಮಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಪುತ್ತೂರು ತಾಲೂಕು ಒಕ್ಕೂಟದ ಪದಗ್ರಹಣ, ವಿವಿಧ ಗೋಷ್ಠಿಗಳು, ಬೃಹತ್ ಭಜನಾ ಸಂಕೀರ್ತನೆ ಯಾತ್ರೆ, ಭಜನಾ ಸತ್ಸಂಗ ಸಮಾವೇಶ ಕಾರ್ಯಕ್ರಮಗಳು ಜರುಗಲಿದ್ದು, ಸಂಜೆ ದೇವಳದ ಗದ್ದೆಯಲ್ಲಿ ಸುಮಾರು ೨೫ಸಾವಿರ ಭಕ್ತಾದಿಗಳಿಂದ ಸಾಮೂಹಿಕ ಕೋಟಿ ಶಿವಪಂಚಾಕ್ಷರಿ ಜಪಯಜ್ಞ ಜರುಗಲಿದೆ. ಭಾಗವಹಿಸುವ ಭಕ್ತರಿಗೆ ಶ್ರೀ ಮಠ ಹರಿಹರಪುರದಿಂದ ಪ್ರಸಾದ ರೂಪಾವಾಗಿ ರುದ್ರಾಕ್ಷಿಯನ್ನು ವಿತರಣೆ ಮಾಡಲಾಗುತ್ತದೆ ಎಂದು ಭಜನಾ ಸತ್ಸಂಗ ಸಮಾವೇಶ ಸಮಿತಿ ಪ್ರಕಟಣೆ ತಿಳಿಸಿದೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.