Home_Page_Advt
Home_Page_Advt
Home_Page_Advt
Breaking News

ರಾಷ್ಟ್ರಮಟ್ಟದ ಗೇರು ಕೃಷಿಕರ ಸಂಘಟನೆಗಾಗಿ ಅಖಿಲ ಭಾರತ ಗೇರು ಬೆಳೆಗಾರರ ಸಂಘದ ನೊಂದಣಿ

ಪುತ್ತೂರು: ಗೇರು ಕೃಷಿಕರ ಸಮಸ್ಯೆ, ಬೇಡಿಕೆ ಮತ್ತು ಯಾವ ರೀತಿಯ ಕೃಷಿಯಿಂದ ಹೆಚ್ಚು ಬೆಳೆ ಪಡೆಯಲು ಸಾಧ್ಯ ಎಂಬ ಕುರಿತು ಅರಿವು ಹಾಗೂ ಮಧ್ಯವರ್ಗಳ ಹಾವಳಿ ತಪ್ಪಿಸಲು ರಾಷ್ಟ್ರಮಟ್ಟದಲ್ಲಿ ಗೇರು ಕೃಷಿಕರ ಸಂಘಟನೆ ಆಗಬೇಕೆಂಬ ಹಲವು ವರ್ಷಗಳ ಕನಸಿನಂತೆ ರಾಷ್ಟ್ರೀಯ ಗೇರು ಸಂಶೋಧನಾ ಕೇಂದ್ರದ ಪ್ರೋತ್ಸಾಹದೊಂದಿಗೆ ಅಖಿಲ ಭಾರತ ಗೇರು ಬೆಳೆಗಾರರ ಸಂಘದ ನೊಂದಣಿಯನ್ನು ಜ.22ರಂದು ಪುತ್ತೂರು ಸಬ್‌ರಿಜಿಸ್ಟರ್ ಕಚೇರಿಯಲ್ಲಿ ಮಾಡಲಾಗಿದೆ ಎಂದು ಅಖಿಲ ಭಾರತ ಗೇರು ಬೆಳೆಗಾರರ ಸಂಘದ ಅಧ್ಯಕ್ಷ ನನ್ಯ ಅಚ್ಚುತ ಮೂಡೆತ್ತಾಯ ಅವರು ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ಗೇರು ಕೃಷಿ ಅತ್ಯಂತ ನಿರ್ಲಕ್ಷಕ್ಕೆ ಒಳಗಾದ ಕೃಷಿಯಾದರೂ ಅತ್ಯಂತ ಮಹತ್ವ ಪೂರ್ಣವಾದ ಬೆಳೆ. ಆರೋಗ್ಯದ ದೃಷ್ಟಿಯಲ್ಲಿ ಎಲ್ಲದಕ್ಕೂ ಅವಶ್ಯಕತೆ ಇರುವ ಆಹಾರ. ಇದಕ್ಕೆ ಯಾವುದೇ ಸಂಘಟನೆಗಳು ಈ ತನಕ ಇರಲಿಲ್ಲ. ಈ ನಿಟ್ಟಿನಲ್ಲಿ ಗೇರು ಬೆಳೆಗಾರರ ಏನೆಲ್ಲಾ ಸಮಸ್ಯೆ ಇದೆ. ಏನೆಲ್ಲಾ ಬೇಡಿಕೆ ಇದೆ ಅದನೆಲ್ಲಾ ಸರಕಾರಕ್ಕೆ ತಿಳಿಸುವ ಮತ್ತು ಕೃಷಿಗಳ ಕುರಿತು ಸಂವಾಹನ ಮಾಡಲು ಒಳ್ಳೆಯ ಕೃಷಿ ಹೇಗೆ ಮಾಡಬೇಕು. ಹೇಗೆ ಹೆಚ್ಚು ಬೆಳೆ ಪಡೆಯಬಹುದು ಮತ್ತು ವೈಜ್ಞಾನಿಕವಾಗಿ ಹೇಗೆ ಬೆಳೆಸಬಹುದು ಎಂಬ ಒಂದು ರೀತಿಯ ಅರಿವು ಮೂಡಿಸುವ ನಿಟ್ಟಿನಲ್ಲಿ ಅಖಿಲ ಭಾರತ ಗೇರು ಬೆಳೆಗಾರರ ಅನೇಕ ವರ್ಷಗಳಿಂದ ಆಗಬೇಕೆಂಬ ಚಿಂತನೆಯಂತೆ ಅದಕ್ಕೆ ಸಮಯ ಕೂಡಿ ಬಂದಿದೆ ಎಂದ ಅವರು ಗೇರು ಕೃಷಿ ರಾಷ್ಟ್ರಮಟ್ಟದಲ್ಲಿ ಬೇರೆ ಬೇರೆ ದೇಶದಲ್ಲಿ ಆಗುತ್ತಿದೆ. ಯಾವುದೇ ಬಂಜರು ಭೂಮಿಯಲ್ಲಿ ಬೆಳೆಯುವ ಬೆಳೆಯಾದ್ದರಿಂದ ಇದನ್ನು ಯಾವುದೇ ಶ್ರಮ ಇಲ್ಲದೆ ಹೆಚ್ಚು ಬೆಳೆ ಪಡೆಯಬಹುದು ಎಂದರು. ಇವತ್ತು ಗೇರು ಬೀಜಕ್ಕೆ ಬೇಡಿಕೆ ಇದ್ದರೂ ಉತ್ಪಾದನೆ ಆಗುತ್ತಿಲ್ಲ. ಈ ನಡುವೆ ವಿದೇಶದಿಂದ ಕಳಪೆ ಗುಣಮಟ್ಟದ ಬೀಜಗಳು ಬರುತ್ತಿರುವುದರಿಂದ ಮಾರುಕಟ್ಟೆಯಲ್ಲಿ ಕೃಷಿಕರಿಗೆ ಸರಿಯಾದ ಬೆಲೆ ಸಿಗುತ್ತಿಲ್ಲ. ಈ ನಿಟ್ಟಿನಲ್ಲಿ ಗೇರು ಬೀಜ ಆಮದನ್ನು ತಡೆಯುವುದು ಅಥವಾ ಹೆಚ್ಚಿನ ಸುಂಕ ಹೇರುವ ಕುರಿತು ಸರಕಾರದ ಮಟ್ಟದಲ್ಲಿ ಮಾತನಾಡಬೇಕಾಗಿದೆ. ನಮ್ಮ ಸಂಘದ ವ್ಯಾಪ್ತಿ ಅಖಿಲ ಭಾರತ ಮಟ್ಟದಲ್ಲಿ ಇರುವ ನಿಟ್ಟಿನಲ್ಲಿ ಸಂಘದ ಜಂಟಿ ಕಾರ್ಯದರ್ಶಿಯಾಗಿ ಮಹಾಷ್ಟ್ರದ ವಿಲಾಸ ಅನಂತರಾವ್ ಠಾಕೂರ್, ಟ್ರಸ್ಟಿಗಳಾಗಿ ಗೇರು ಬೆಳೆಗಾರರ ಸಂಘದ ಕೇರಳದ ವಾಸವನ್, ಆಂದ್ರಪ್ರದೇಶದ ಸೋಮೇಶ್ವರ ರಾವ್, ಗದಗದ ಸಿದ್ದಪ್ಪ, ಪುತ್ತೂರಿನ ಕಾಶ್ಮೀರ್ ಕುಟಿನೋ, ಉಡುಪಿಯ ಚಂದ್ರಶೇಖರ ಉಡುಪ, ಈಶ್ವರಮಂಗಲದ ನಟೇಶ್ ಮೂಡಾಯೂರುವರು ಕಾರ್ಯನಿರ್ವಹಿಸಲಿದ್ದಾರೆ ಎಂದು ಅವರು ಹೇಳಿದರು.

ಗೇರು ಉತ್ಪನ್ನಗಳ ಸಂಸ್ಕಾರಣೆ:
ಇವತ್ತಿನ ಕಾಲದಲ್ಲಿ ಅಡಿಕೆ ಗಿಡ ಇಡುವುದಾದರೆ ಲಕ್ಷಾಂತರ ರೂಪಾಯಿ ಖರ್ಚು ಇದೆ. ಅದೇ ಗೇರು ಕೃಷಿ ಮಾಡಲು ಕಡಿಮೆ ವೆಚ್ಚ ಸಾಕು. ಕ್ಯಾಂಪ್ಕೋ ಚಾಕಲೇಟು ಕಾರ್ಖಾನೆಯ ಮೂಲಕ ಕೋಕೊಗೆ ಹೇಗೆ ಧಾರಣೆ ಬಂತೋ ಅದೇ ರೀತಿ ಗೇರು ಹಣ್ಣಿನ ಉತ್ಪನ್ನಗಳನ್ನು ಬೇರೆ ಬೇರೆ ರೀತಿಯಲ್ಲಿ ಸಂಸ್ಕರಣೆ ಮಾಡುವ ವ್ಯವಸ್ಥೆಗೆ ಕೈ ಚಿಂತನೆ ನಡೆಸಲಾಗುವುದು ಎಂದು ನನ್ಯ ಅಚ್ಚುತ ಮೂಡೆತ್ತಾಯ ಹೇಳಿದರು.

ಕ್ಯಾಂಪ್ಕೋದಿಂದ ಗೇರು ಬೀಜವೂ ಖರೀದಿ:
ಕ್ಯಾಂಪ್ಕೋ ಉಪಾಧ್ಯಕ್ಷರಾದ ಕಾಸರಗೋಡು ಗೇರು ಬೆಳೆಗಾರರ ಸಂಘದ ಉಪಾಧ್ಯಕ್ಷ ಶಂಕರನಾರಾಯಣ ಭಟ್ ಖಂಡಿಗೆ ಅವರು ಮಾತನಾಡಿ ಕ್ಯಾಂಪ್ಕೊ ಬೈಲಾದಲ್ಲೂ ತೆಂಗು ಮತ್ತು ಗೇರು ಖರೀದಿ ಮಾಡಿ ಸಂಸ್ಕರಣೆ ಮಾಡುವ ಕುರಿತು ಚರ್ಚಿಸಲಾಗಿದೆ. ಅಡಿಕೆ, ಗೇರು ಮತ್ತು ತೆಂಗು ಕೃಷಿಗೆ ಒಂದೇ ಸೂರಿನಡಿಯಲ್ಲಿ ಕ್ಯಾಂಪ್ಕೋ ಖರೀದಿಗೆ ಮುಂದೆ ಬಂದಿದೆ ಎಂದು ಅವರು ಹೇಳಿದರು.

ಮಧ್ಯವರ್ತಿಗಳ ಹಾವಳಿ ತಪ್ಪಿಸುವ ಉದ್ದೇಶ:
ಅಖಿಲ ಭಾರತ ಗೇರು ಬೆಳೆಗಾರರ ಸಂಘದ ಖಜಾಂಚಿಯಾಗಿರುವ ಪ್ರಗತಿಪರ ಕೃಷಿಕ ಸುಭಾಸ್ ರೈ ಕಡಮಜಲು ಅವರು ಮಾತನಾಡಿ ಮಧ್ಯವರ್ತಿಗಳ ಹಾವಳಿ ತಪ್ಪಿಸ ಸಹಕಾರ ಸಂಘಗಳ ಮೂಲಕ ರೈತರಿಗೆ ಸರಿಯಾದ ಬೆಲೆ ಸಿಗಬೇಕೆಂಬುದು ನಮ್ಮ ಉದ್ದೇಶ ಎಂದರು.

ಪ್ರಧಾನಿಯವರಿಗೆ ಟ್ವಿಟ್ಟರ್ ಮೂಲಕ ಬೇಡಿಕೆ:
ಅಖಿಲ ಭಾರತ ಗೇರು ಬೇಳೆಗಾರರ ಸಂಘದ ಕಾರ್ಯದರ್ಶಿ ದೇವಿಪ್ರಸಾದ್ ಕಲ್ಲಾಜೆ ಅವರು ಮಾತನಾಡಿ ಸಂಘಟನೆ ಈಗಾಗಲೇ ಕಾರ್ಯಪ್ರವೃತ್ತವಾಗಿದ್ದು, ಪ್ರಧಾನಿಯವರ ಕಾರ್ಯಾಲಯಕೆಕ್ಕೆ ಟ್ವಟ್ ಮೂಲಕ ಮೂರು ಬೇಡಿಕೆಗಳನ್ನು ರವಾನಿಸಿದೆ. ೧ ಕೆ.ಜಿ. ಕಚ್ಚಾ ಗೇರು ಬೀಜಕ್ಕೆ ಕನಿಷ್ಠ ರೂ. ೧೫೦ ಬೆಂಬಲ ಬೆಲೆ ಘೋಷಿಸಬೇಕು. ಆಫ್ರಿಕಾ ವಿಯಟ್ನಾಮ್ ಮತ್ತಿತರ ದೇಶಗಳಿಂದ ಆಮದಾಗುತ್ತಿರುವ ಕಚ್ಚಾ ಗೇರು ಬೀಜೆ ಮೇಲೆ ಶೇ.೮ ಆಮದು ಸುಂಕ ವಿಧಿಸಬೇಕು. ಭಾರತೀಯ ಗೇರು ಬೀಜಕ್ಕಿಂತ ಕಳಪೆ ಗುಣಮಟ್ಟ ಹೊಂದಿರುವ ಸಂಸ್ಕರಿತ ಗೇರು ಬೀಜವನ್ನು ವಿಯಟ್ನಾಂ ಮತ್ತಿತರ ದೇಶಗಳಿಂದ ತರಿಸುವುದನ್ನು ನಿಲ್ಲಿಸಬೇಕು. ಇದನ್ನು ಸರಕಾರ ಕಾರ್ಯರೂಪಕ್ಕೆ ತಂದರೆ ಗೇರು ಬೆಳೆಗಾರರಿಗೆ ಅನುಕೂಲವಾಗಲಿದೆ ಎಂದರು. ಪತ್ರಿಕಾಗೋಷ್ಠಿಯಲ್ಲಿ ಬೆಳ್ತಂಗಡಿಯ ಸುಕನ್ಯಾ ಉಪಸ್ಥಿತರಿದ್ದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.