Home_Page_Advt
Home_Page_Advt
Home_Page_Advt
Breaking News

ಜ.25-31: ಇಚ್ಲಂಪಾಡಿ ಬರೆಮೇಲು ಮಠ ಅನ್ನಪೂರ್ಣೇಶ್ವರಿ ದೇವಸ್ಥಾನದಲ್ಲಿ ನವೀಕರಣ, ಪುನ: ಪ್ರತಿಷ್ಠಾ ಬ್ರಹ್ಮಕಲಶೋತ್ಸವ

ನೆಲ್ಯಾಡಿ: ಇಚ್ಲಂಪಾಡಿ ಗ್ರಾಮದ ಇಚ್ಲಂಪಾಡಿ ಬರೆಮೇಲು ಮಠ ಎಂಬಲ್ಲಿರುವ ಶ್ರೀ ಅನ್ನಪೂರ್ಣೇಶ್ವರಿ ದೇವಸ್ಥಾನದ ನವೀಕರಣ ಪುನ: ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಜ.25ರಿಂದ 31ರ ತನಕ ವಳಾಲು ಮುದ್ಯ ವೇದಮೂರ್ತಿ ಅನಂತಕೃಷ್ಣ ಉಡುಪ ಇವರ ನೇತೃತ್ವದಲ್ಲಿ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ ಎಂದು ಆಡಳಿತ ಮೊಕ್ತೇಸರ ಧರ್ಣಪ್ಪ ದಾಸ್, ಆಡಳಿತ ಮಂಡಳಿ ಅಧ್ಯಕ್ಷ ವೀರಪ್ಪ ದಾಸ್ ಪಾಣಿಗ, ಕಾರ್ಯದರ್ಶಿ ವೆಂಕಟೇಶ್ ದಾಸ್, ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಶ್ರೀನಿವಾಸ ಪೂಜಾರಿ ನಿಡ್ಯಡ್ಕ, ಕಾರ್ಯದರ್ಶಿ ಬಾಲಕೃಷ್ಣ ಯಸ್.ಕೆ.ಕುಡಾಲ ಹಾಗೂ ಪದಾಧಿಕಾರಿಗಳು ತಿಳಿಸಿದ್ದಾರೆ.

ಜ.25ರಂದು ಬೆಳಿಗ್ಗೆ ಗೊನೆಮುಹೂರ್ತದೊಂದಿಗೆ ಕಾರ್ಯಕ್ರಮ ಆರಂಭಗೊಳ್ಳಲಿದೆ. ಜ.27ರಂದು ಬೆಳಿಗ್ಗೆ ಉಗ್ರಾಣ ಮುಹೂರ್ತ, ಹೊರಕಾಣಿಕೆ ಸಮರ್ಪಣೆ ನಡೆಯಲಿದೆ. ಜ.28ರಂದು ಬೆಳಿಗ್ಗೆ ತಂತ್ರಿಗಳಿಗೆ ಪೂರ್ಣಕುಂಭ ಸ್ವಾಗತ, ಬಳಿಕ ಪ್ರಾರ್ಥನೆ, ಸ್ಥಳ ಶುದ್ಧಿ, ಗಣಹವನ, ಪಂಚಕಲಶ ಪೂಜೆ, ಬಿಂಬ ಶುದ್ಧಿ, ವೆಂಕಟರಮಣ ದೇವರ ಪ್ರತಿಷ್ಠೆ ಕಲಾಶಾಭಿಷೇಕ, ಮಹಾಪೂಜೆ, ಗುಳಿಗೆ ಪ್ರತಿಷ್ಠೆ, ತಂಬಿಲಸೇವೆ, ಮಧ್ಯಾಹ್ನ ಅನ್ನಸಂತರ್ಪಣೆ ನಡೆಯಲಿದೆ. ಸಂಜೆ ವಾಸ್ತುಬಲಿ, ಪ್ರಾಕರ ಬಲಿ, ತೀರ್ಥ ಪ್ರಸಾದ, ರಾತ್ರಿ ಅನ್ನಸಂತರ್ಪಣೆ ನಡೆಯಲಿದೆ. ಸಂಜೆ ಇಚ್ಲಂಪಾಡಿ ಬೀಡು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಆಡಳಿತ ಮೊಕ್ತೇಸರ ಶುಭಕರ ಹೆಗ್ಗಡೆಯವರ ಅಧ್ಯಕ್ಷತೆಯಲ್ಲಿ ಧಾರ್ಮಿಕ ಸಭೆ ನಡೆಯಲಿದ್ದು ಉಜಿರೆ ಎಸ್‌ಡಿಎಂಸಿ ಕಾಲೇಜಿನ ಉಪನ್ಯಾಸಕ ಮಹಾವೀರ ಜೈನ್‌ರವರು ಧಾರ್ಮಿಕ ಉಪನ್ಯಾಸ ನೀಡಲಿದ್ದಾರೆ. ಸುಳ್ಯ ಶಾಸಕ ಎಸ್.ಅಂಗಾರ, ಪುತ್ತೂರು ಶಾಸಕ ಸಂಜೀವ ಮಠಂದೂರು, ಜಿ.ಪಂ.ಸದಸ್ಯ ಸರ್ವೋತ್ತಮ ಗೌಡ, ಪಿಎಲ್‌ಡಿ ಬ್ಯಾಂಕ್ ಕೋಶಾಧಿಕಾರಿ ಭಾಸ್ಕರ ಯಸ್ ಗೌಡ, ಇಚ್ಲಂಪಾಡಿ ಶ್ರೀ ಗಂಗಾಧರೇಶ್ವರ ದೇವಸ್ಥಾನದ ಆಡಳಿತ ಸಮಿತಿ ಅಧ್ಯಕ್ಷ ಉಣ್ಣಿ ಕೃಷ್ಣನ್ ನಾಯರ್, ಪ್ರಗತಿಬಂಧು ಸ್ವಸಹಾಯ ಸಂಘಗಳ ಇಚ್ಲಂಪಾಡಿ ಒಕ್ಕೂಟದ ಅಧ್ಯಕ್ಷ ಅನಿಲ್‌ಕುಮಾರ್, ಕೌಕ್ರಾಡಿ ಗ್ರಾ.ಪಂ.ಉಪಾಧ್ಯಕ್ಷೆ ವಾಣಿ ಎನ್. ಬಿಜೇರು, ಸದಸ್ಯೆ ಮೋಹಿನಿ ಮಾನಡ್ಕ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

ಜ.29ರಂದು ಬೆಳಿಗ್ಗೆ ತೋರಣ ಮುಹೂರ್ತ, ಗಣಯಾಗ, ಸರ್ಪ ಮಂಗಳಯಾಗ, ನವಕಲಶ, ಬಿಂಬ ಶುದ್ಧಿ, ನಾಗಪ್ರತಿಷ್ಠೆ ಆಶ್ಲೇಷ ಬಲಿ, ಮಹಾಪೂಜೆ, ತೀರ್ಥ ಪ್ರಸಾದ, ಮಧ್ಯಾಹ್ನ ಅನ್ನಸಂತರ್ಪಣೆ ನಡೆಯಲಿದೆ. ಸಂಜೆ ಶ್ರೀ ಸತ್ಯನಾರಾಯಣ ಪೂಜೆ, ರಾತ್ರಿ ದುರ್ಗಾ ನಮಸ್ಕಾರ ಪೂಜೆ, ತೀರ್ಥ ಪ್ರಸಾದ, ಅನ್ನಸಂತರ್ಪಣೆ ನಡೆಯಲಿದೆ. ಜ.30ರಂದು ಬೆಳಿಗ್ಗೆ ಗಣಯಾಗ, ಚಂಡಿಕಯಾಗ, ಅಂಕುರ ಪೂಜೆ, ಶಿಖರ ಪೂಜೆ, ನಿಧಿ ಕುಂಭ ಸ್ಥಾಪನೆ, ತೀರ್ಥಪ್ರಸಾದ, ಮಧ್ಯಾಹ್ನ ಅನ್ನಸಂತರ್ಪಣೆ ನಡೆಯಲಿದೆ. ಸಂಜೆ ಗಣಯಾಗ, ಚಂಡಿಕಯಾಗ, ಅಂಕುರ ಪೂಜೆ, ಶಿಖರ ಪೂಜೆ, ನಿಧಿ ಕುಂಭ ಸ್ಥಾಪನೆ, ತೀರ್ಥಪ್ರಸಾದ, ರಾತ್ರಿ ಅನ್ನಸಂತರ್ಪಣೆ. ಸಂಜೆ ನಡೆಯುವ ಧಾರ್ಮಿಕ ಸಭೆಯಲ್ಲಿ ಗುರುಪುರ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿಯವರು ಆಶೀರ್ವಚನ ನೀಡಲಿದ್ದಾರೆ. ಹಿಂಜಾವೇ ದಕ್ಷಿಣ ಕರ್ನಾಟಕ ಪ್ರಾಂತ ಕಾರ್ಯದರ್ಶಿ ರಾಧಾಕೃಷ್ಣ ಅಡ್ಯಂತಾಯ ಧಾರ್ಮಿಕ ಉಪನ್ಯಾಸ ನೀಡಲಿದ್ದಾರೆ. ಅರುಣ್ ಕುಮಾರ್ ಪುತ್ತಿಲ, ಉದ್ಯಮಿ ಸೀತಾರಾಮ ರೈ ತಿಂಗಳಾಡಿ, ಹಿಂಜಾವೇ ಪುತ್ತೂರು ಜಿಲ್ಲೆ ಪ್ರಧಾನ ಕಾರ್ಯದರ್ಶಿ, ನ್ಯಾಯವಾದಿ ಚಿನ್ಮಯ ರೈ, ಜಿಲ್ಲಾ ಕಾರ್ಯದರ್ಶಿ ಅಜಿತ್ ರೈ, ಇಚ್ಲಂಪಾಡಿ ಬೀಡು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ರಾಧಾಕೃಷ್ಣ ಗೌಡ ಕೆರ್ನಡ್ಕ, ಕೌಕ್ರಾಡಿ ಗ್ರಾ.ಪಂ.ಸದಸ್ಯರಾದ ದಿನೇಶ್ ಗೌಡ ಕಲ್ಯ ಹಾಗೂ ಮಾಧವ ಕೆಡಂಬೇಲು ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ಜ.31: ಮೀನಲಗ್ನದಲ್ಲಿ ಪ್ರತಿಷ್ಠೆ
ಜ.31ರಂದು ಬೆಳಿಗ್ಗೆ ಗಣಯಾಗ, ಪ್ರತಿಷ್ಠಾ ಹವನ, ದ್ವಾರ ಪೂಜೆ, ದಿಕ್ಪಾಲಿಕ ಬಲಿ ನಡೆದು ಮಲ್ಲ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಆಡಳಿತ ಮೊಕ್ತೇಸರ ವಿಷ್ಣುಭಟ್ ಇವರ ಮುಂದಾಳ್ವತದಲ್ಲಿ ಬೆಳಿಗ್ಗೆ ಗಂಟೆ 9.50ರ ಮೀನ ಲಗ್ನದ ಶುಭಮೂಹೂರ್ತದಲ್ಲಿ ಶ್ರೀ ಅನ್ನಪೂಣೇಶ್ವರಿ ದೇವಿ ಪ್ರತಿಷ್ಠೆ, ಬ್ರಹ್ಮಕುಂಭ ಪೂಜೆ, ಕಲಶಾಭಿಷೇಕ, ಪಂಚಾಮೃತ ಅಭಿಷೇಕ, ಬ್ರಹ್ಮಕಲಶಾಭಿಷೇಕ, ಮಹಾಪೂಜೆ ನಡೆಯಲಿದೆ. ಮಧ್ಯಾಹ್ನ ಅನ್ನಸಂತರ್ಪಣೆ., ರಾತ್ರಿ ರಂಗಪೂಜೆ ನಡೆಯಲಿದೆ.

ಸಾಂಸ್ಕೃತಿಕ ಕಾರ್ಯಕ್ರಮ:
ಜ.28ರಿಂದ 31ರ ತನಕ ಪ್ರತಿದಿನ ಸಂಜೆ ಸಾಂಸ್ಕ್ರತಿಕ ಕಾರ್ಯಕ್ರಮ ನಡೆಯಲಿದೆ. ಜ.೨೮ರಂದು ರಾತ್ರಿ ಶ್ರೀ ಕ್ಷೇ.ಧ.ಗ್ರಾಮಾಭಿವೃದ್ಧಿ ಯೋಜನೆ ಇಚ್ಲಂಪಾಡಿ ಒಕ್ಕೂಟದ ಸದಸ್ಯರಿಂದ ಸಾಂಸ್ಕೃತಿಕ ಕಾರ್ಯಕ್ರಮ, ಜ.೨೯ರಂದು ರಾತ್ರಿ ವಿವಿಧ ಭಜನಾ ತಂಡಗಳಿಂದ ಸಾಮೂಹಿಕ ನೃತ್ಯ ಭಜನಾ ಕಾರ್ಯಕ್ರಮ, ವೆಂಕಟೇಶ್ ಹಾಗೂ ಸ್ವರ್ಣ ಜೋತ್ಸ್ನಾ ಇವರಿಂದ ‘ಮಹಿಷಮರ್ಧಿನಿ ನೃತ್ಯ’, ಜ.30ರಂದು ರಾತ್ರಿ ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂಡಳಿ ಪದವಿನಂಗಡಿ ಇವರಿಂದ ಭಜನಾ ಕಾರ್ಯಕ್ರಮ, ಸ್ವರ್ಣಜೋತ್ಸ್ನಾ ಮಾಣಿ ಇವರಿಂದ ಭರತನಾಟ್ಯ ಹಾಗೂ ದೀಕ್ಷಿತ್ ಪದವು, ಆಲಂಕಾರು ಇವರಿಂದ ಮಿಮಿಕ್ರಿ ಕಾರ್ಯಕ್ರಮ ನಡೆಯಲಿದೆ. ಜ.೩೧ರಂದು ಸಂಜೆ ವಿಠಲ್ ನಾಯಕ್ ಕಲ್ಲಡ್ಕ ಇವರಿಂದ ‘ಗೀತಾ ಸಾಹಿತ್ಯ ಸಂಭ್ರಮ’ ರಾತ್ರಿ ಶ್ರೀ ದುರ್ಗಾಪರಮೇಶ್ವರಿ ಕೃಪಾಪೋಷಿತ ಯಕ್ಷಗಾನ ಮಂಡಳಿ, ಮಲ್ಲ-ಕಾಸರಗೋಡು ಇವರಿಂದ ‘ಸಂಪೂರ್ಣ ಶ್ರೀ ದೇವಿ ಮಹಾತ್ಮೆ’ಯಕ್ಷಗಾನ ಬಯಲಾಟ ನಡೆಯಲಿದೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.