Home_Page_Advt
Home_Page_Advt
Home_Page_Advt
Breaking News

ಮಠಂತಬೆಟ್ಟು ಮಹಿಷಮರ್ದಿನಿ ದೇವಸ್ಥಾನಕ್ಕೆ ಡಿ.ವಿ.ಎಸ್. ಭೇಟಿ

  • ಮಠಂತಬೆಟ್ಟು ಶ್ರೀ ಮಹಿಷಮರ್ದಿನಿ ದೇವಳದಲ್ಲಿ ಸಮಾಲೋಚನಾ ಸಭೆ
  • ಕೇಂದ್ರ ಸಚಿವ ಡಿವಿಎಸ್ ಭಾಗಿ
  • ನಿಮ್ಮ ನಿರ್ದೇಶನದಂತೆ ನನ್ನ ಜವಾಬ್ದಾರಿ – ಡಿವಿಎಸ್


ಪುತ್ತೂರು: ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡರವರು ಜ.24ರಂದು ಕೋಡಿಂಬಾಡಿ ಮಠಂತಬೆಟ್ಟು ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ. ಮಠಂತಬೆಟ್ಟು ಕ್ಷೇತ್ರದಲ್ಲಿ ಏಪ್ರಿಲ್ 21ರಿಂದ 26ರ ತನಕ ನಡೆಯಲಿರುವ ಅಷ್ಟಬಂಧ ಬ್ರಹ್ಮಕಲಶೋತ್ಸವದ ಪ್ರಯುಕ್ತ ಮಧ್ಯಾಹ್ನ ದೇವಳದ ಚಿನ್ಮಯಿ ಸಭಾಂಗಣದಲ್ಲಿ ಜೀರ್ಣೋದ್ಧಾರ ಸಮಿತಿಯ ಗೌರವಾಧ್ಯಕ್ಷರೂ, ಬ್ರಹ್ಮಕಲಶೋತ್ಸವ ಸಮಿತಿಯ ಗೌರವಾಧ್ಯಕ್ಷರೂ ಆಗಿರುವ ಡಿ.ವಿ.ಯವರ ನೇತೃತ್ವದಲ್ಲಿ, ಜೀರ್ಣೋದ್ಧಾರ ಮತ್ತು ಬ್ರಹ್ಮಕಲಶ ಕಾರ್ಯದ ಕುರಿತು ಅವಲೋಕನ ಸಭೆ ನಡೆಯಿತು. ಬ್ರಹ್ಮಕಲಶ ಸಮಿತಿಯ ಅಧ್ಯಕ್ಷ ಅಶೋಕ್ ಕುಮಾರ್ ರೈ ಪ್ರಾಸ್ತಾವಿಕವಾಗಿ ಮಾತನಾಡಿದರು.‌

ವ್ಯವಸ್ಥಾಪನಾ ಸಮಿತಿಯ ನಿಕಟಪೂರ್ವ ಅಧ್ಯಕ್ಷ ನಿರಂಜನ ರೈ ಮಠಂತಬೆಟ್ಟು ಸ್ವಾಗತಿಸಿದರು. ಬ್ರಹ್ಮಕಲಶ ಸಮಿತಿಯ ಪ್ರಧಾನ‌ ಕಾರ್ಯದರ್ಶಿ ಕೆ.ಜಯಾನಂದ ಮತ್ತು ಕಾರ್ಯಾಧ್ಯಕ್ಷ ಸೀತಾರಾಮ ಶೆಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪತ್ರಕರ್ತ ಸಂತೋಷ್ ಕುಮಾರ್ ಶಾಂತಿನಗರರವರು ಕಾರ್ಯಕ್ರಮ ನಿರೂಪಿಸಿದರು. ನೂರಾರು ಮಂದಿ ಸಭೆಯಲ್ಲಿ ಉಪಸ್ಥಿತರಿದ್ದರು.

ನಿಮ್ಮ ನಿರ್ದೇಶನದಂತೆ ನನ್ನ ಜವಾಬ್ದಾರಿ – ಡಿವಿಎಸ್
ಬ್ರಹ್ಮಕಲಶೋತ್ಸವ ಅತ್ಯಂತ ವಿನೂತನವಾಗಿ ಹೊಸತನದಿಂದ ಕೂಡಿರಬೇಕೆಂದು ನಮ್ಮ ಆಶಯ. ಅದಕ್ಕೆ ಬೇಕು ಬೇಕಾದ ಯೋಜನೆ ರೂಪಿಸಿಕೊಳ್ಳಿ. ಅದಕ್ಕೆ ನಮ್ಮಿಂದ ಆಗಬೇಕಾದ ಸಹಕಾರ ನೀಡಲು‌ ಖಂಡಿತಾ ಬದ್ಧರಾಗಿದ್ದೇವೆ. ನೀವು ನಿರ್ದೇಶನ ನೀಡಿ. ಅದನ್ನು ಜವಾಬ್ದಾರಿಯಿಂದ ನಿರ್ವಹಿಸುತ್ತೇನೆ ಎಂದು ಡಿವಿಎಸ್ ಹೇಳಿದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.