Home_Page_Advt
Home_Page_Advt
Home_Page_Advt
Breaking News

ಪಟ್ಟೆ ವಿದ್ಯಾಸಂಸ್ಥೆಯ ಪ್ರತಿಭಾ ಪುರಸ್ಕಾರ, ಬೀಳ್ಕೊಡುಗೆ ಸಮಾರಂಭ

ಪುತ್ತೂರು: ಬಡಗನ್ನೂರು ಗ್ರಾಮದ ಪಟ್ಟೆ ಶ್ರೀಕೃಷ್ಣ ಪದವಿಪೂರ್ವ ಕಾಲೇಜು ,ಪ್ರತಿಭಾ ಪ್ರೌಢ ಶಾಲೆ ಹಾಗೂ  ಶ್ರೀಕೃಷ್ಣ ಹಿರಿಯ ಪ್ರಾಥಮಿಕ ಶಾಲೆ ಇದರ ಆಶ್ರಯದಲ್ಲಿ ಪ್ರತಿಭಾ ಪುರಸ್ಕಾರ ಮತ್ತು ನಿವೃತ್ತಿಗೊಳ್ಳಲಿರುವ ಸಹ ಶಿಕ್ಷಕ ಎನ್. ಗೋಪಾಲಕೃಷ್ಣ ಭಟ್‌ರವರಿಗೆ ಬೀಳ್ಕೊಡುಗೆ ಸಮಾರಂಭ ಜ. ೨೬ರಂದು ಪಟ್ಟೆ ಶ್ರೀಕೃಷ್ಣ ಪದವಿ ಪೂರ್ವ ಕಾಲೇಜ್‌ನಲ್ಲಿ ನಡೆಯಿತು. ಬೆಳಿಗ್ಗೆ ಧ್ವಜಾರೋಹಣ ನಡೆದ ಬಳಿಕ ಪಟ್ಟೆ ವಿದ್ಯಾಸಂಸ್ಥೆಯ ಅಧ್ಯಕ್ಷ ಪಿ.ವೇಣುಗೋಪಾಲ್‌ರವರ ಅಧ್ಯಕ್ಷತೆಯಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅಭ್ಯಾಗತರಾಗಿ ಜಿಪಂ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷೆ ಅನಿತಾ ಹೇಮನಾಥ ಶೆಟ್ಟಿ ಮಾತನಾಡಿ, ಶಿಕ್ಷಕ ವೃತ್ತಿಯು ಶ್ರೇಷ್ಠ ವೃತ್ತಿಯಾಗಿದೆ. ಮಕ್ಕಳು ತಪ್ಪು ದಾರಿಯಲ್ಲಿ ನಡೆಯದಂತೆ ಅವರ ತಪ್ಪುಗಳನ್ನು ತಿದ್ದಿ ಒಳ್ಳೆಯ ದಾರಿಯಲ್ಲಿ ನಡೆಸುವವರು ಶಿಕ್ಷಕರಾಗಿದ್ದಾರೆ. ವಿದ್ಯಾಸಂಸ್ಥೆ ಎಂಬುದು ತಮ್ಮ ಸ್ವಂತ ಮನೆ ಎಂಬ ರೀತಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು ಒಳ್ಳೆಯ ಸಂಸ್ಕಾರಯುತ ಶಿಕ್ಷಣವನ್ನು ನೀಡುತ್ತಿದ್ದಾರೆ. ಶಿಕ್ಷಕರು ಆಡಳಿತ ಮಂಡಳಿ ಹಾಗೂ ಪೋಷಕರ ಸಹಕಾರದಿಂದ ವಿದ್ಯಾರ್ಥಿಗಳಿಗೆ ಪಟ್ಟೆ ಶಾಲೆಯಲ್ಲಿ ಅತ್ಯುತ್ತಮ ಶಿಕ್ಷಣ ದೊರೆಯುತ್ತಿದೆ ಎಂದು ಹೇಳಿ ಶುಭ ಹಾರೈಸಿದರು.

ಸುಳ್ಯಪದವು ಸರ್ವೋದಯ ಪ್ರೌಢ ಶಾಲೆಯ ನಿವೃತ್ತ ಶಿಕ್ಷಕ ಯು.ಎಸ್, ರಾಮಕೃಷ್ಣ ಭಟ್ ಮಾತನಾಡಿ , ಪ್ರತಿಯೊಬ್ಬರಲ್ಲೂ ಒಂದಲ್ಲ ಒಂದು ಪ್ರತಿಭೆ ಇದೆ. ಯಾರೂ ಕೂಡ ಹೆಡ್ಡರಲ್ಲ, ಪ್ರತಿಭೆ ಎಂಬುದು ಎಲ್ಲರಲ್ಲೂ ಇದೆ. ಆದ್ದರಿಂದ ವಿದ್ಯಾರ್ಥಿಗಳಿಗೆ ಶಿಕ್ಷಕರ ಪ್ರೋತ್ಸಾಹ ಕೊಡಬೇಕು. ಒಳ್ಳೆಯ ಪರಿಸರ ಹಾಗೂ ಒಳ್ಳೆಯ ಶಿಕ್ಷಕರನ್ನು ಹೊಂದಿರುವ ಶಾಲೆ ಒಬ್ಬ ವಿದ್ಯಾರ್ಥಿ ಜೀವನದಲ್ಲಿ ಉನ್ನತ ಸ್ಥಾನಕ್ಕೆ ಹೋಗಲು ಸಹಕಾರಿಯಾಗಿದೆ ಎಂದರು. ವಿದ್ಯಾಸಂಸ್ಥೆಯ ಅಧ್ಯಕ್ಷ ಪಿ.ವೇಣುಗೋಪಾಲ್‌ರವರು ಮಾತನಾಡಿ, ವಿದ್ಯಾರ್ಥಿಗಳಿಗೆ ಜೀವನದಲ್ಲಿ ಉತ್ತಮ ಅಂಕ ಮುಖ್ಯವಲ್ಲ ಅದರ ಬದಲಿಗೆ ಗುಣಮಟ್ಟದ ಶಿಕ್ಷಣ ದೊರೆತಾಗ ಅವರ ಮುಂದಿನ ಜೀವನ ಒಳ್ಳೆಯ ರೀತಿಯಲ್ಲಿರಲು ಸಾಧ್ಯ. ಈ ನಿಟ್ಟಿನಲ್ಲಿ ಪಟ್ಟೆ ವಿದ್ಯಾಸಂಸ್ಥೆಯ ಶಿಕ್ಷಕರು ಒಳ್ಳೆಯ ರೀತಿಯಲ್ಲಿ ಕರ್ತವ್ಯ ಸಲ್ಲಿಸುತ್ತಿದ್ದಾರೆ. ಶಿಕ್ಷಕ ಎನ್.ಗೋಪಾಲಕೃಷ್ಣ ಭಟ್‌ರವರು ಬೆಳಿಗ್ಗೆ ಬೇಗನೆ ಶಾಲೆಗೆ ಬರುತ್ತಿದ್ದರು ಹಾಗೂ ಸಂಜೆ ತಡವಾಗಿ ಮನೆಗೆ ಹೋಗುತ್ತಿದ್ದರು. ಮಕ್ಕಳೊಂದಿಗೆ ಮಕ್ಕಳಾಗಿ ಪಾಠ ಪ್ರವಚನ ಮಾಡುತ್ತಿದ್ದರು. ಅವರ ಮುಂದಿನ ಜೀವನ ಸುಖ ಸಂತೋಷದಿಂದ ಕೂಡಿರಲಿ ಎಂದು ಹೇಳಿ ಶುಭ ಹಾರೈಸಿದರು.

ಶ್ರೀ ಕೃಷ್ಣ ಪದವಿ ಪೂರ್ವ ಕಾಲೇಜಿನ ಸಂಚಾಲಕ ಪಿ. ಬಿ. ಶಿರೀಷ, ಪಟ್ಟೆ ವಿದ್ಯಾಸಂಸ್ಥೆಯ ಸಂಚಾಲಕ ಪಿ. ನಾರಾಯಣ ಭಟ್, ಆಡಳಿತ ಮಂಡಳಿ ನಿರ್ದೇಶಕರುಗಳಾದ ಶಿವಪ್ರಸಾದ್, ನಹುಷ ಪಿ.ವಿ, ಕಾಲೇಜು ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ಹರಿಕೃಷ್ಣ ಕಾಮತ್, ಪ್ರತಿಭಾ ಪ್ರೌಢ ಶಾಲೆಯ ಎಸ್.ಡಿಎಂಸಿ ಅಧ್ಯಕ್ಷ ಮಹಾಲಿಂಗ ನಾಯ್ಕ, ಶ್ರೀ ಕೃಷ್ಣ ಹಿರಿಯ ಪ್ರಾಥಮಿಕ ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷ ವಿಶ್ವೇಶ ಭಟ್ ಪಾದೆಕರ್ಯ, ಹಳೆ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಯಶುಭ ರೈ,ಕುಂಬ್ರ ಕ್ಲಸ್ಟರ್ ನ ಶಶಿಕಲಾ ಉಪಸ್ಥಿತರಿದ್ದರು.

ನಿವೃತ್ತ ಶಿಕ್ಷಕ ಎನ್.ಗೋಪಾಲಕೃಷ್ಣ ಭಟ್‌ರವರಿಗೆ ಬೀಳ್ಕೊಡುಗೆ
ಪಟ್ಟೆ ಪ್ರಾಥಮಿಕ ಶಾಲೆಯ ಶಿಕ್ಷಕ ಎನ್.ಗೋಪಾಲಕೃಷ್ಣ ಭಟ್‌ರವರಿಗೆ ಬೀಳ್ಕೊಡುಗೆ ಸಮಾರಂಭ ನಡೆಯಿತು. ಆಡಳಿತ ಮಂಡಳಿ, ಶಿಕ್ಷಕ ವೃಂದ, ವಿದ್ಯಾರ್ಥಿ ವೃಂದ, ಅಕ್ಷರ ದಾಸೋಹ ವೃಂದ, ಎಸ್‌ಡಿಎಂಸಿ ಹಾಗೂ ವಿದ್ಯಾರ್ಥಿಗಳ ಪೋಷಕರಿಂದ,ಹಳೆ ವಿದ್ಯಾರ್ಥಿ ವೃಂದದಿಂದ ಹಾಗೂ ಗ್ರಾಮಸ್ಥರಿಂದ ಎನ್.ಗೋಪಾಲಕೃಷ್ಣ ಭಟ್‌ರವರಿಗೆ ಗೌರವಾರ್ಪಣೆಯೊಂದಿಗೆ ಬೀಳ್ಕೊಟ್ಟರು. ಹಿರಿಯ ವಿದ್ಯಾರ್ಥಿ ಪುತ್ತೂರು ಮಹಿಳಾ ಠಾಣೆಯ ಸಬ್‌ಇನ್ಸ್‌ಪೆಕ್ಟರ್ ಕುಸುಮಾಧರ್‌ರವರು ಶಾಲು ಹೊದಿಸಿ ಸ್ಮರಣಿಕೆ ನೀಡಿ ಗೌರವಿಸಿದರು. ನಿವೃತ್ತ ಶಿಕ್ಷಕಿ ಶಂಕರಿಯವರು ಪರಿಚಯ ಪತ್ರ ಓದಿದರು. ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿಯಲ್ಲಿ ಅತ್ಯಧಿಕ ಅಂಕ ಗಳಿಸಿದ ವಿದ್ಯಾರ್ಥಿಗಳಾದ ಪಿಯುಸಿಯ ಆಯಿಷತ್ ನೌಸಿರ, ಪ್ರದೀಪ್ ಬಿ, ಅನುಶ್ರೀ, ಮಾನ್ಯಶ್ರೀ, ಫಾತಿಮತ್ ರಝೀನಾ, ಎಸ್‌ಎಸ್‌ಎಲ್‌ಸಿಯ ಚಸ್ಮಿಕಾ, ಮಂಜುಳ, ಆಶಿಕ್ ಫರ್ಝಾನಾ, ದೀಕ್ಷಿತಾ, ಲಾವಣ್ಯ, ಸೌದತ್ ಸಾಹಿದ, ದೇವಿಕ, ಚೇತನ್ ಸಿ.ಎಚ್, ನಾಗಶ್ರೀ, ಆಯಿಷತ್ ರಸೀನಾ, ಮಧುಶ್ರೀ, ಅಶೋಕ, ಆಯಿಷತ್ ರಹೀಯಾನ, ದೇವಿಕಿರಣ್ ಎಂ, ಕಮರುನ್ನೀಸಾರವರುಗಳನ್ನು ಗೌರವಿಸಲಾಯಿತು.

ಶ್ರೀಕೃಷ್ಣ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯಗುರು ಯಮುನಾ ವಾರ್ಷಿಕ ವರದಿ ವಾಚಿಸಿದರು, ಶಿಕ್ಷಕಿ ಭವಿತಾ ಸ್ವಾಗತಿಸಿದರು. ಪದವಿ ಪೂರ್ವಕಾಲೇಜ್ ಪ್ರಾಶುಪಾಲೆ ನವ್ಯತಾ ರೈ ಕಾಲೇಜಿನ ವರದಿ ವಾಚಿಸಿದರು, ಪ್ರತಿಭಾ ಪ್ರೌಢ ಶಾಲೆಯ ಶಿಕ್ಷಕ ಜ್ಯೋತಿ, ಶಿಕ್ಷಕ ರಾಮಚಂದ್ರಪ್ಪ, ಶಿಕ್ಷಕಿ ಪ್ರೀತಿ ಮತ್ತು ಗೌರವ ಶಿಕ್ಷಕಿ ಸವಿತಾ ಬಹುಮಾನ ವಿಜೇತರ ಪಟ್ಟಿ ಓದಿದರು. ಪ್ರತಿಭಾ ಪ್ರೌಢಶಾಲೆಯ ಮುಖ್ಯಗುರು ಸುಮನಾ ಬಿ. ಪ್ರೌಢ ಶಾಲಾ ವರದಿ ವಾಚಿಸಿದರು. ಶಿಕ್ಷಕ ರಾಜಗೋಪಾಲ್ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕ ವಿಶ್ವನಾಥ ಗೌಡ ಬೊಳ್ಳಾಡಿ ವಂದಿಸಿದರು. ಸಭಾ ಕಾರ್ಯಕ್ರಮದ ಬಳಿಕ ಭೋಜನ, ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.