Home_Page_Advt
Home_Page_Advt
Home_Page_Advt
Breaking News

ನೂಜಿ ರೆಂಜಿಲಾಡಿ ಶಾಲಾ ಸುವರ್ಣ ಸಂಭ್ರಮಕ್ಕೆ ಚಾಲನೆ


ಕಡಬ: ರೆಂಜಿಲಾಡಿ ಗ್ರಾಮದ ನೂಜಿ ರೆಂಜಿಲಾಡಿ ಸ.ಕಿ.ಪ್ರಾ.ಶಾಲೆಯ ಸುವರ್ಣ ಸಂಭ್ರಮ ವರ್ಷಾಚರಣೆಯ ಆರಂಭೋತ್ಸವಕ್ಕೆ ಜ.೨೬ರಂದು ಚಾಲನೆ ನೀಡಲಾಯಿತು.

ನೂಜಿಬಾಳ್ತಿಲ ಗ್ರಾ.ಪಂ. ಅಧ್ಯಕ್ಷ ಸದಾನಂದ ಗೌಡ ಸಾಂತ್ಯಡ್ಕರವರು ಕಾರ್ಯಕ್ರಮ ಉದ್ಘಾಟಿಸಿದರು. ಬಳಿಕ ನಡೆದ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸರಕಾರಿ ಶಾಲೆಗಳು ಗುಣಮಟ್ಟದ ಶಿಕ್ಷಣ ನೀಡುತ್ತಿವೆ ಎಂಬುದಕ್ಕೆ ರೆಂಜಿಲಾಡಿ ಕಿ.ಪ್ರಾ.ಶಾಲೆಯಿಂದ ಜವಾಹರಲಾಲ್, ಮೋರಾರ್ಜಿ ದೇಸಾಯಿ ವಸತಿ ಶಾಲೆಗೆ ವಿದ್ಯಾರ್ಥಿಗಳು ಆಯ್ಕೆಯಾಗಿರುವುದೇ ಸಾಕ್ಷಿಯಾಗಿದೆ. ಇಂದು ಮೌಲ್ಯಾಧಾರಿತ ಶಿಕ್ಷಣದ ಅಗತ್ಯತೆ ಇದೆ. ಶಾಲೆಯ ಸಂಪರ್ಕ ರಸ್ತೆಯ ಅಭಿವೃದ್ಧಿಗೆ ೫ ಲಕ್ಷ ರೂ. ಅನುದಾನದ ವ್ಯವಸ್ಥೆ ಮಾಡುವುದಾಗಿ ಭರವಸೆ ನೀಡಿದರು. ಸುವರ್ಣ ಸಂಭ್ರಮದಲ್ಲಿರುವ ನೂಜಿ ರೆಂಜಿಲಾಡಿ ಶಾಲೆಯು ಗ್ರಾಮೀಣ ಭಾಗದ ಕೃಷಿಕ ರೈತಾಪಿ ವರ್ಗದ ಮಧ್ಯೆ ಹಾಗೂ ನೂಜಿ ಶ್ರೀ ಉಳ್ಳಾಲ್ತಿ ಕ್ಷೇತ್ರದ ಸಮೀಪವಿದೆ. ಈ ಶಾಲೆ ಮುಂದೆ ಉನ್ನತೀಕರಣಗೊಂಡು ಅಭಿವೃದ್ದಿಯಾಗುವಲ್ಲಿ ಎಲ್ಲರು ಸಹಕಾರ ನೀಡಬೇಕೆಂದು ಸದಾನಂದ ಗೌಡ ಹೇಳಿದರು.
ಜಿ.ಪಂ.ಸದಸ್ಯ ಪಿ.ಪಿ. ವರ್ಗೀಸ್‌ರವರು ಶಾಲಾ ಕಾಂಪೌಡ್‌ಗೆ ಶಂಕು ಸ್ಥಾಪನೆ ನೆರವೇರಿಸಿದರು. ಗ್ರಾ.ಪಂ.ಸದಸ್ಯೆ ರಜಿತಾ ಪದ್ಮನಾಭರವರು ಕುಡಿಯುವ ನೀರಿನ ವಾಟರ್ ಬೆಲ್‌ಗೆ ಚಾಲನೆ ನೀಡಿದರು. ರೆಂಜಿಲಾಡಿ ಬೀಡಿನ ಯಶೋಧರ ಯಾನೆ ತಮ್ಮಯ್ಯ ಬಳ್ಳಾಲ್‌ರವರು ಸುವರ್ಣ ಮಹೋತ್ಸವದ ಮನವಿ ಪತ್ರ ಬಿಡುಗಡೆಗೊಳಿಸಿ ಮಾತನಾಡಿ, ಸರಕಾರಿ ಶಾಲೆಗಳ ಉಳಿವಿಗೆ ಸರಕಾರ, ಜನರ ಸಹಭಾಗಿತ್ವ ಅಗತ್ಯವಿದೆ. ಗೊಂದಲಗಳಿಂದ ಹೊರಬಂದು ಸರಕಾರಿ ಶಾಲೆಗಳಿಗೆ ಮಕ್ಕಳನ್ನು ಕಳಿಸಲು ಹೆತ್ತವರು ಮುಂದಾಗಬೇಕಿದೆ ಎಂದರು. ತಾ.ಪಂ. ಸದಸ್ಯ ಗಣೇಶ್ ಕೈಕುರೆ ಮಾತನಾಡಿ, ಜೀವನದ ಕಷ್ಟ ಎದುರಿಸುವಲ್ಲಿ ಸರಕಾರಿ ಶಾಲಾ ಮಕ್ಕಳು ನಿಪುಣರು, ಉತ್ತಮ ಹುದ್ದೆಗೇರಿದವರಲ್ಲಿ ಹೆಚ್ಚಿನವರು ಸರಕಾರಿ ಶಾಲಾ ಮಕ್ಕಳೇ ಎಂದರು. ಪಿಡಿಒ ಆನಂದ ಎ.,ರವರು ಸಂದರ್ಭೋಚಿತವಾಗಿ ಮಾತನಾಡಿದರು. ಸುವರ್ಣ ಮಹೋತ್ಸವ ಆಚರಣಾ ಸಮಿತಿ ಅಧ್ಯಕ್ಷ ಮೃತ್ಯುಂಜಯ ಭಿಡೆ, ಕಾರ್ಯದರ್ಶಿ ಪರಮೇಶ್ವರ ಸಂಕೇಶ, ನೂಜಿಬಾಳ್ತಿಲ ಗ್ರಾ.ಪಂ. ಸದಸ್ಯೆ ರಜಿತಾ ಕೆ., ಎಸ್‌ಡಿಎಂಸಿ ಉಪಾಧ್ಯಕ್ಷೆ ಮಂಜುಳಾ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಶ್ರೀಧರ ಗೌಡ ಗೋಳ್ತಿಮಾರ್ ಪ್ರಸ್ತಾವಣೆಗೈದರು. ಮುಖ್ಯ ಶಿಕ್ಷಕಿ ತಿರುಮಲೇಶ್ವರಿ ಸ್ವಾಗತಿಸಿ, ಎಸ್.ಡಿ.ಎಂ.ಸಿ. ಅಧ್ಯಕ್ಷ ರವಿಪ್ರಸಾದ್ ಕೆ., ವಂದಿಸಿದರು. ಶಿಕ್ಷಕಿ ವಿನೋದ ಅಮೀನ್ ಕಾರ್ಯಕ್ರಮ ನಿರೂಪಿಸಿದರು. ಬಳಿಕ ಸಾರ್ವಜನಿಕರಿಗೆ ವಿವಿಧ ಕ್ರೀಡಾ ಸ್ಪರ್ಧೆ ನಡೆಸಲಾಯಿತು.

ಸನ್ಮಾನ:
ನೂಜಿಬಾಳ್ತಿಲ ಶಾಲಾ ನಿವೃತ್ತ ಮುಖ್ಯ ಶಿಕ್ಷಕ ಶ್ರೇಯಾನ್ಸ್, ನೂಜಿ ಶಾಲೆಯ ಅತಿಥಿ ಶಿಕ್ಷಕಿ ಜಲಜಾಕ್ಷಿ, ಶಾಲೆಗೆ ಗ್ರೈಂಡರ್ ಕೊಡುಗೆಯಾಗಿ ನೀಡಿದ ದಾನಿ ನೇಮಣ್ಣ ಗೌಡ ಕಲ್ನಾರ್ ಅವರನ್ನು ಸನ್ಮಾನಿಸಿ, ಗೌರವಿಸಲಾಯಿತು. ಸನ್ಮಾನಿತರ ಪರವಾಗಿ ಶ್ರೇಯಾನ್ಸ್‌ರವರು ಮಾತನಾಡಿ ಕೃತಜ್ಞತೆ ಸಲ್ಲಿಸಿದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.