Home_Page_Advt
Home_Page_Advt
Home_Page_Advt
Breaking News

ಪುತ್ತೂರು ಕೋ ಓಪರೇಟಿವ್ ಟೌನ್ ಬ್ಯಾಂಕ್ ಚುನಾವಣೆ ಬಿಜೆಪಿಯಿಂದ ಹರ್ಷಾಚರಣೆ -ಅಭಿನಂದನಾ ಸಭೆ

ಪುತ್ತೂರು: ಪುತ್ತೂರು ಕೋ ಓಪರೇಟಿವ್ ಟೌನ್ ಬ್ಯಾಂಕ್ ಚುನಾವಣೆಯಲ್ಲಿ ಎಲ್ಲಾ ೧೩ ಸ್ಥಾನಗಳಲ್ಲಿಯೂ ಸಹಕಾರ ಭಾರತಿ ಅಭ್ಯರ್ಥಿಗಳು ವಿಜೇತರಾಗಿದ್ದು ಬ್ಯಾಂಕ್ ವಠಾರದಲ್ಲಿ ಬಿಜೆಪಿ ಕಾರ್ಯಕರ್ತರು ಪಟಾಕಿ ಸಿಡಿಸಿ ಹರ್ಷ ವ್ಯಕ್ತಪಡಿಸಿ, ವಿಜೇತರಿಗೆ ಮತ್ತು ನೆರೆದವರಿಗೆ ಸಿಹಿ ತಿಂಡಿ ವಿತರಿಸಿದರು.

ವಿಜೇತ ಅಭ್ಯರ್ಥಿಗಳು ಚುನಾವಣಾಧಿಕಾರಿಯವರಿಂದ ಪ್ರಮಾಣ ಪತ್ರ ಸ್ವೀಕರಿಸಿ ಹೊರಗಡೆ ಬರುತ್ತಿದ್ದಂತೆ ಕಾರ್ಯಕರ್ತರು ವಿಜೇತ ಅಭ್ಯರ್ಥಿಗಳಿಗೆ ಮಾಲಾರ್ಪಣೆ ಮಾಡಿ ಘೋಷಣೆ ಕೂಗುತ್ತಾ ಬಿಜೆಪಿ ಕಚೇರಿಗೆ ತೆರಳಿದರು. ಬಿಜೆಪಿ ಕಚೇರಿಯಲ್ಲಿ ಅಭಿನಂದನಾ ಸಭೆ ನಡೆಯಿತು. ಚುನಾವಣಾ ಮಾರ್ಗದರ್ಶಕರಾಗಿದ್ದು ಹಿರಿಯರಾದ ಅಪ್ಪಯ್ಯ ಮಣಿಯಾಣಿ, ಬಿಜೆಪಿ ನಗರ ಮಂಡಲದ ಅಧ್ಯಕ್ಷ ಪಿ.ಜಿ.ಜಗನ್ನಿವಾಸ ರಾವ್, ಗ್ರಾಮಾಂತರ ಮಂಡಲದ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ, ನಿಕಟಪೂರ್ವ ಅಧ್ಯಕ್ಷ ಚನಿಲ ತಿಮ್ಮಪ್ಪ ಶೆಟ್ಟಿ, ನಗರ ಮಂಡಲದ ನಿಕಟಪೂರ್ವಾಧ್ಯಕ್ಷ ಜೀವಂಧರ್ ಜೈನ್ ವಿಜೇತ ಅಭ್ಯರ್ಥಿಗಳಿಗೆ ಅಭಿನಂದನೆ ಸಲ್ಲಿಸಿದರು. ವಿಜೇತ ಅಭ್ಯರ್ಥಿಗಳಾದ ಯನ್. ಕಿಶೋರ್ ಕೊಳತ್ತಾಯ, ಕುಡ್ಗಿ ವಿಶ್ವಾಸ್ ಶೆಣೈ, ನಾರಾಯಣ ಎ.ವಿ., ಚಂದ್ರಶೇಖರ್ ಗೌಡ ಕೆ., ವಿನೋದ್ ಕುಮಾರ್ ಬಿ., ಸದಾಶಿವ ಪೈ, ಚಂದ್ರಶೇಖರ್ ರಾವ್ ಬಪ್ಪಳಿಗೆ, ಮಲ್ಲೇಶ್ ಕುಮಾರ್, ಜಯಂತಿ ನಾಯಕ್, ಹೇಮಾವತಿ, ರಮೇಶ್ ನಾಯ್ಕ್ ಕೆ., ಗಾಯತ್ರಿ ಪಿ. ಅವರನ್ನು ಇದೇ ಸಂದರ್ಭದಲ್ಲಿ ಗೌರವಿಸಲಾಯಿತು. ಬಿಜೆಪಿ ವಿಭಾಗ ಸಹಪ್ರಭಾರಿ ಗೋಪಾಲಕೃಷ್ಣ ಹೇರಳೆ, ಕ್ಯಾಂಪ್ರೋ ಅಧ್ಯಕ್ಷ ಎಸ್.ಆರ್.ಸತೀಶ್ಚಂದ್ರ, ತಾ.ಪಂ ಅಧ್ಯಕ್ಷ ರಾಧಾಕೃಷ್ಣ ಬೋರ್ಕರ್, ನಗರಸಭೆ ಸದಸ್ಯರಾದ ಭಾಮಿ ಅಶೋಕ್ ಶೆಣೈ, ಗೌರಿ ಬನ್ನೂರು, ವಿದ್ಯಾ ಗೌರಿ, ಪೂರ್ಣಿಮಾ, ಸಂತೋಷ್ ಬೊಳುವಾರು, ಯಶೋದಾ ಹರೀಶ್, ಬಿಜೆಪಿ ಮಹಿಳಾ ಮೋರ್ಛಾದ ಜಯಶ್ರೀ ಎಸ್.ಶೆಟ್ಟಿ, ಗ್ರಾ.ಪಂ ಸದಸ್ಯೆ ಪರಮೇಶ್ವರಿ ಭಟ್, ಪುರುಷೋತ್ತಮ ಮುಂಗ್ಲಿಮನೆ, ಶಂಭು ಭಟ್, ಯುವ ಮೋರ್ಛಾದ ಯುವರಾಜ್ ಪೆರಿಯತ್ತೋಡಿ, ರಾಜೇಶ್ ರೈ ಪರ್ಪುಂಜ, ವಿಠಲ ಆಚಾರ್ಯ, ಬಿಜೆಪಿ ಅಲ್ಪಸಂಖ್ಯಾತ ಮೋರ್ಛಾದ ಮಹಮ್ಮದ್ ಕುಂಞಿ, ಗಣೇಶ್ ಬಾಳಿಗ, ಬಿಜೆಪಿ ಕಚೇರಿ ಕಾರ್ಯದರ್ಶಿ ರುಕ್ಮಯ ಇದ್ಪಾಡಿ, ಪ್ರಕಾಶ್ ಕೀಲಾಡಿ, ರಾಘವೇಂದ್ರ ಪ್ರಭು ಕಲ್ಲೇಗ, ಸಂದೀಪ್ ಲೋಬೋ, ಅಶೋಕ್ ಹಾರಾಡಿ, ಇಂದುಶೇಖರ್, ಹರೀಶ್ ಆಚಾರ್ಯ, ಅರ್ಪಣಾ, ಲೋಕೇಶ್ ಸೇರಿದಂತೆ ಅನೇಕ ಮಂದಿ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಪಿ.ಜಿ.ಜಗನ್ನಿವಾಸ್ ರಾವ್ ಅಧ್ಯಕ್ಷಗಿರಿಯಲ್ಲಿ ಭರ್ಜರಿ ಜಯ
ಬಿಜೆಪಿ ನಗರ ಮಂಡಲದ ಅಧ್ಯಕ್ಷರಾಗಿ ಅಧಿಕೃತವಾಗಿ ಜವಾಬ್ದಾರಿ ಸಿಕ್ಕಿದ ಕೆಲವೆ ದಿನಗಳಲ್ಲಿ ಪುತ್ತೂರು ಪಿ.ಜಿ. ಜಗನ್ನಿವಾಸ್ ರಾವ್‌ರವರಿಗೆ ಕೋ ಓಪರೇಟಿವ್ ಬ್ಯಾಂಕ್ ಚುನಾವಣೆ ನಡೆದಿದ್ದು, ಎಲ್ಲಾ ೧೩ ಸ್ಥಾನಗಳಲ್ಲೂ ಬಿಜೆಪಿ ಬೆಂಬಲಿತ ಸಹಕಾರಭಾರತಿಯ ಸದಸ್ಯರು ವಿಜೇತರಾಗಿದ್ದಾರೆ. ಕೆಲವು ದಿನಗಳ ಹಿಂದೆ ಪುತ್ತೂರು ಮಹಿಳಾ ವಿವಿಧೋzಶ ಸಹಕಾರಿ ಸಂಘದಲ್ಲೂ ಎಲ್ಲಾ ೧೩ ಮಂದಿ ಸಹಕಾರಭಾರತಿ ಸದಸ್ಯರು ಅವಿರೋಧ ಆಯ್ಕೆ ಆಗಿದ್ದರು ಎಂದು ಅಭಿನಂದನಾ ಸಭೆಯಲ್ಲಿ ಅಭಿಪ್ರಾಯ ವ್ಯಕ್ತವಾಯಿತು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.