Home_Page_Advt
Home_Page_Advt
Home_Page_Advt
Breaking News

ವೀರಮಂಗಲ ನಿವಾಸಿ ಅಟೋ ಚಾಲಕ ರವೀಂದ್ರ ಪ್ರಭು ನಿಧನ


ಪುತ್ತೂರು: ವೀರಮಂಗಲ ನಿವಾಸಿ ಆಟೋ ರಿಕ್ಷಾ ಚಾಲಕ ರವೀಂದ್ರ ಪ್ರಭು ಅವರು ಫೆ. 11ರಂದು ಮಂಗಳೂರು ಆಸ್ಪೆತ್ರೆಯಲ್ಲಿ ಮೃತಪಟ್ಟಿದ್ದಾರೆ.
ಬಿ.ಎಮ್.ಎಸ್ ಆಟೋ ರಿಕ್ಷಾ ಚಾಲಕ ಮಾಲಕರ ಸಂಘದ ಸಕ್ರೀಯ ಸದಸ್ಯರಾಗಿದ್ದ ಅವರು ಎಪಿಎಂಸಿ ರಸ್ತೆಯ ಆದರ್ಶ ಪಾರ್ಕ್‌ನಲ್ಲಿ ಬಾಡಿಗೆ ಮಾಡುತ್ತಿದ್ದರು. ಇತ್ತೀಚೆಗೆ ಅವರು ಅನಾರೋಗ್ಯದಿಂದ ಬಳಲುತ್ತಿದ್ದು ಮಂಗಳೂರು ದೇರಳಕಟ್ಟೆ ಆಸ್ಪತ್ರೆಯಲ್ಲಿ ದಾಖಲಾಗಿದ್ದು, ಅಲ್ಲಿ ಅವರು ಚಿಕಿತ್ಸೆಗೆ ಸ್ಪಂಧಿಸದೆ ಫೆ.11ರಂದು ಮೃತಪಟ್ಟಿದ್ದಾರೆ. ಮೃತರು ಪತ್ನಿ, ಮಕ್ಕಳನ್ನು ಅಗಲಿದ್ದಾರೆ.

ಆದರ್ಶ ಆಸ್ಪತ್ರೆ ಎದುರು ಶ್ರದ್ಧಾಂಜಲಿ:
ರವೀಂದ್ರ ಪ್ರಭು ಅವರ ಮೃತ ದೇಹವನ್ನು ಪುತ್ತೂರು ಆದರ್ಶ ಆಸ್ಪತ್ರೆಯ ಬಳಿ ತಂದು ಆಟೋ ಚಾಲಕರ ದರ್ಶನಕ್ಕೆ ಸ್ವಲ್ಪ ಹೊತ್ತು ಇಡಲಾಗಿತ್ತು. ಈ ಸಂದರ್ಭ ಬಿ.ಎಮ್.ಎಸ್ ಆಟೋ ರಿಕ್ಷಾ ಚಾಲಕರು ಶ್ರದ್ಧಾಂಜಲಿ ಸಲ್ಲಿಸಿದರು. ಬಿ.ಎಮ್.ಎಸ್ ಆಟೋ ರಿಕ್ಷಾ ಚಾಲಕ ಮಾಲಕರ ಸಂಘದ ಗೌರವ ಅಧ್ಯಕ್ಷ ಡಾ. ಎಂ ಕೆ ಪ್ರಸಾದ್, ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ವಠಾರದ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಕಾರ್ಯಾಧ್ಯಕ್ಷ ಅರುಣ್ ಕುಮಾರ್ ಪುತ್ತಿಲ, ಬಿಎಮ್‌ಎಸ್ ಆಟೋ ರಿಕ್ಷಾ ಚಾಲಕ ಮಾಲಕರ ಸಂಘದ ಅಧ್ಯಕ್ಷ ಬಾಲಕೃಷ್ಣ ಗೌಡ, ಕಾರ್ಯದರ್ಶಿ ರಾಜೇಶ್, ಕೋಶಾಧಿಕಾರಿ ಕೃಷ್ಣ ಚೆಟ್ಟಿಯಾರ್, ಮಾಜಿ ಅಧ್ಯಕ್ಷರಾದ ಬಿ ಕೆ. ದೇವಪ್ಪ ಗೌಡ, ಸುರೇಶ ಸುಧಾಕರ್ ನಾಯಕ್,  ವಾಲ್ಟ್ ರ್ ರೆಬೆಲ್ಲೊ ಮತ್ತು ಆಸ್ಪತ್ರೆ ಸಿಬ್ಬಂದಿ ಆದರ್ಶ ಪಾರ್ಕ್ ಸದಸ್ಯರು ಸಂದರ್ಭದಲ್ಲಿ ಉಪಸ್ಥಿತರಿದ್ದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.