Home_Page_Advt
Home_Page_Advt
Home_Page_Advt
Breaking News

ಶಾಂತಿಗೋಡು: ವಿಶ್ವನಾಥ ನಾಯ್ಕರವರು ಕೆರೆಗೆ ಬಿದ್ದು ಮೃತ್ಯು

ಪುತ್ತೂರು: ಶಾಂತಿಗೋಡು ಗ್ರಾಮದ ಆನಡ್ಕ ಕಾಯರಪ್ಪು ತೋಟದ ಕೆರೆಯಲ್ಲಿ ವ್ಯಕ್ತಿಯೋರ್ವರ ಶವ ಪತ್ತೆಯಾದ ಘಟನೆ ಫೆ. 12ರಂದು ಬೆಳಕಿಗೆ ಬಂದಿದ್ದು, ಮೃತ ದೇಹ ಕೊಳೆತ ಸ್ಥಿತಿಯಲ್ಲಿದ್ದು ಕೆರೆಗೆ ಪಂಪ್‌ನ ಪೈಪ್ ಇಳಿಸುವ ವೇಳೆ ಆಕಸ್ಮಿಕವಾಗಿ ಕೆರೆಗೆ ಬಿದ್ದಿರಬಹುದು ಎಂದು ಶಂಕಿಸಲಾಗಿದೆ.
ಶಾಂತಿಗೋಡು ಗ್ರಾಮದ ದಿ.ಬಾಬು ನಾಯ್ಕ ಎಂಬವರ ಪುತ್ರ ಅವಿವಾಹಿತ ವಿಶ್ವನಾಥ ನಾಯ್ಕ(29ವ)ರವರು ಕೆರೆಗೆ ಬಿದ್ದು ಮೃತಪಟ್ಟವರು. ಅವರು ತೋಟದದಲ್ಲಿರುವ ಸುರಂಗದಂತ್ತಿರುವ ಕೆರೆ ಬಳಿ ಇದ್ದ ಪಂಪ್‌ನಿಂದ ಕೆರೆಗೆ ಪೈಪ್ ಇಳಿಸುವ ಕೆಲಸ ಮಾಡುತ್ತಿದ್ದ ವೇಳೆ ಆಕಸ್ಮಿಕವಾಗಿ ಅವರು ಕಾಲು ಜಾರಿ ಕೆರೆಗೆ ಬಿದ್ದರಬಹುದು ಎಂದು ಸಂಶಯಿಸಲಾಗಿದೆ. ಫೆ. 12ರಂದು ಆನಡ್ಕ ವ್ಯಾಪ್ತಿಯ ಮೆಸ್ಕಾಂ ಪವರ್‌ಮ್ಯಾನ್ ಅವರು ಮನೆಗೆ ಬಂದಾಗ ಮನೆ ಪರಿಸರದಲ್ಲಿ ದುರ್ವಾಸನೆ ಬರುತ್ತಿರುವುದುನ್ನು ಗಮನಿಸಿ ಕೆರೆಯನ್ನು ನೋಡಿದಾಗ ವಿಶ್ವನಾಥ ನಾಯ್ಕ ಅವರ ಮೃತದೇಹ ಪತ್ತೆಯಾಗಿದೆ. ತಕ್ಷಣ ಅವರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಬಳಿಕ ಅಗ್ನಿಶಾಮಕ ದಳ, ಪುತ್ತೂರು ನಗರ ಠಾಣೆಯ ಪೊಲೀಸರು ಮತ್ತು ಆದರ್ಶ ಆಸ್ಪತ್ರೆಯ ಆಂಬುಲೆನ್ಸ್ ಚಾಲಕ ದಯಾನಂದ ಅವರು ಮೃತ ದೇಹವನ್ನು ಮೇಲಕ್ಕೆ ಎತ್ತಿದ್ದಾರೆ. ಮೃತ ದೇಹವನ್ನು ಪುತ್ತೂರು ಸರಕಾರಿ ಅಸ್ಪತ್ರೆಯ ಶವಗಾರ ಕೊಠಡಿಯಲ್ಲಿ ಇರಿಸಲಾಗಿದೆ.
ಟೆಲಿಫೊನ್ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ವಿಶ್ವನಾಥ ನಾಯ್ಕ:
ವಿಶ್ವನಾಥ ನಾಯ್ಕ ಅವರ ಸಹೋದರರು ಮಂಗಳೂರಿನಲ್ಲಿ ಉದ್ಯೋಗದಲ್ಲಿದ್ದು ಅಲ್ಲೇ ವಾಸ್ತವ್ಯ ಹೊಂದಿದ್ದ ಹಿನ್ನೆಲೆಯಲ್ಲಿ ವಿಶ್ವನಾಥ ನಾಯ್ಕ ಅವರೊಬ್ಬರೆ ಮನೆಯಲ್ಲಿದ್ದು ಅಲ್ಪಸ್ವಲ್ಪ ಕೃಷಿ ಚಟುವಟಿಕೆ ನಡೆಸುತ್ತಿದ್ದು ನಡುವೆ ಕೂಡುರಸ್ತೆಯಲ್ಲಿ ಟೆಲಿಪೋನ್ ಕಚೇರಿಯಿಲ್ಲಿ ತಾತ್ಕಾಲಿಕ ಕೆಲಸ ನಿರ್ವಹಿಸುತ್ತಿದ್ದರು.
ಅಡುಗೆ ಮನೆಯಲ್ಲಿತ್ತು ರೊಟ್ಟಿ, ಹಂದಿ ಮಾಂಸ ಪದಾರ್ಥ:
ಫೆ.9ರಂದು ಶಾಂತಿಗೋಡು ಶಿರಾಡಿ ದೈವದ ನೇಮೋತ್ಸವದಲ್ಲಿ ಬಾಗಿದ್ದ ವಿಶ್ವನಾಥ ನಾಯ್ಕ ಅವರು ಬಳಿಕ ಮನೆಗೆ ನೇಮದಲ್ಲಿಂದ ಬಂದು ಹಂದಿ ಮಾಂಸ ಪದಾರ್ಥ ಮಾಡಿದ್ದಾರೆ. ಅಡುಗೆ ಮನೆಯಲ್ಲಿ ರೊಟ್ಟಿ, ಹಂದಿ ಮಾಂಸ ಪದಾರ್ಥ ಅಡುಗೆ ಪಾತ್ರೆಯಲ್ಲಿತ್ತು. ನೇಮೋತ್ಸವದಿಂದ ರಾತ್ರಿ ಮನೆಗೆ ಬಂದ ವಿಶ್ವನಾಥ ನಾಯ್ಕ ಅವರು ಫೆ. ೧೦ರಂದು ಬೆಳಿಗ್ಗೆ ರೊಟ್ಟಿ, ಪದಾರ್ಥ ಮಾಡಿಟ್ಟು ತೋಟದಕ್ಕೆ ಹೋಗಿ ಕೆರೆಯಲ್ಲಿ ಪಂಪ್‌ನಿಂದ ಪೈಪ್‌ನ್ನು ಕೆರೆಗೆ ಇಳಿಸುವಾಗ ಆಕಸ್ಮಿಕವಾಗಿ ಮೃತಪಟ್ಟಿರಬಹುದು ಎಂದು ಶಂಕೆ ವ್ಯಕ್ತಪಡಿಸಲಾಗಿದೆ. ಮೃತ ವಿಶ್ವನಾಥ ನಾಯ್ಕ ಅವರ ಸಹೋದ ರೋಹಿತಾಕ್ಷ ನಾಯ್ಕ ನೀಡಿದ ದೂರಿನಂತೆ ಪ್ರಕರಣ ದಾಖಲಿಸಲಾಗಿದೆ. ಮೃತರು ನಾಲ್ವರು ಸಹೋದರರನ್ನು ಅಗಲಿದ್ದಾರೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.