Home_Page_Advt
Home_Page_Advt
Home_Page_Advt
Breaking News

ಫೆ.15-16: ಬೆಟ್ಟಂಪಾಡಿ ನವೋದಯ ಕ್ರೀಡಾಂಗಣದಲ್ಲಿ ಬೆಟ್ಟಂಪಾಡಿ ಬಿಪಿಎಲ್ ಸೀಸನ್-4 ಕ್ರಿಕೆಟ್ ಪಂದ್ಯಾಟ, ಹೋಂಡಾ ಆಕ್ಟೀವಾ 6 ಜಿ ಸ್ಕೂಟರ್ ಮಾರುಕಟ್ಟೆಗೆ ಬಿಡುಗಡೆ

ಪುತ್ತೂರು: ಬೆಟ್ಟಂಪಾಡಿ ಬಿಪಿಎಲ್ ಸೀಸನ್-೪ ಕ್ರಿಕೆಟ್ ಪಂದ್ಯಾಟವು ಫೆ.೧೫ ಮತ್ತು ೧೬ ರಂದು ಬೆಟ್ಟಂಪಾಡಿ ನವೋದಯ ಪ್ರೌಢ ಶಾಲಾ ಕ್ರೀಡಾಂಗಣದಲ್ಲಿ ಜರಗಲಿದೆ. ಫೆ.೧೫ ರಂದು ಬೆಳಿಗ್ಗೆ ನೇರಪ್ರಸಾರದ ಉದ್ಘಾಟನೆಯನ್ನು ಎಸ್.ಸಿ.ಡಿ.ಸಿ.ಸಿ ಬ್ಯಾಂಕ್ ನಿರ್ದೇಶಕ ಶಶಿಕುಮಾರ್ ರೈ ಬಾಲ್ಯೊಟ್ಟು ಉದ್ಘಾಟಿಸಲಿದ್ದು, ಸಭಾ ಕಾರ್ಯಕ್ರಮವನ್ನು ತಾಪಂ ಅಧ್ಯಕ್ಷ ರಾಧಾಕೃಷ್ಣ ಬೋರ್ಕರ್ ಕತ್ತಲಕಾನ ಉದ್ಘಾಟಿಸಲಿದ್ದಾರೆ. ಕೃಷಿಕ ದಾಸ್‌ಪ್ರಕಾಶ್ ರೈಯವರ ಸಭಾಧ್ಯಕ್ಷತೆಯಲ್ಲಿ ಕಾರ್ಯಕ್ರಮ ನಡೆಯಲಿದ್ದು, ಅತಿಥಿಗಳಾಗಿ ಉಪ್ಪಳಿಗೆ ವಿಷ್ಣುಯುವಕ ಮಂಡಲದ ಸ್ಥಾಪಕ ಅಧ್ಯಕ್ಷ ಕೃಷ್ಣಪ್ರಸಾದ್ ಆಳ್ವ, ನಿಡ್ಪಳ್ಳಿ ಶಾಂತದುರ್ಗಾ ದೇವಸ್ಥಾನದ ಅಧ್ಯಕ್ಷ ನಾಗೇಶ ಗೌಡ ಪುಳಿತ್ತಡಿ,ವಿಘ್ನೇಶ್ವರ ಅರ್ಥ್‌ಮೂವರ್‍ಸ್‌ನ ಸುರೇಶ್ ತೀರ್ಥಹಳ್ಳಿ, ಪಾಣಾಜೆ ಗ್ರಾಪಂ ಮಾಜಿ ಸದಸ್ಯ ಉಮ್ಮರ್ ಆರ್ಲಪದವು, ಉಪ್ಪಳಿಗೆ ವಿಷ್ಣು ಯುವಕ ಮಂಡಲದ ಮಾಜಿ ಅಧ್ಯಕ್ಷ ಶಶಿಧರ ರೈ ಚೆಲ್ಯಡ್ಕ, ಕೊರಿಂಗಿಲ ಸೆವೆನ್ ಸ್ಟಾರ್‌ನ ಅಬೂಬಕ್ಕರ್ ಕೊರಿಂಗಿಲ, ಗೋಕುಲ್ ಕನ್‌ಸ್ಟ್ರಕ್ಷನ್‌ನ ನವೀನ್, ನಿಖಿಲ್ ಕೆ.ಎನ್.ಪಾಟಾಳಿ ಕುದ್ದುಪದವು ಭಾಗವಹಿಸಲಿದ್ದಾರೆ.

ಸೌಹಾರ್ದ ಪಂದ್ಯಾಟ
ಫೆ.೧೬ ರಂದು ಬೆಳಿಗ್ಗೆ ಬೆಟ್ಟಂಪಾಡಿ ಪ್ರೀಮಿಯರ್ ಲೀಗ್ ಪ್ರಸ್ತುತ ಪಡಿಸುವ ಸೌಹಾರ್ದ ಪಂದ್ಯಾಟವು ಜನಸ್ನೇಹಿ ಪೊಲೀಸ್ ಸಂಪ್ಯ ಮತ್ತು ರೋಟರಿ ಕ್ಲಬ್ ಪುತ್ತೂರು ಸಿಟಿ ಇವುಗಳ ಮಧ್ಯೆ ನಡೆಯಲಿದೆ. ಈ ಪಂದ್ಯಾಟದ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಡಿವೈಎಸ್‌ಪಿ ದಿನಕರ ಶೆಟ್ಟಿ, ನಿವೃತ್ತ ಡಿವೈಎಸ್‌ಪಿ ಭಾಸ್ಕರ್ ರೈ ಎನ್.ಜಿ, ಬೆಂಗಳೂರು ಸಬ್‌ಇನ್ಸ್‌ಪೆಕ್ಟರ್ ಪ್ರದೀಪ್ ಪೂಜಾರಿ, ಸಂಪ್ಯ ಸಬ್‌ಇನ್ಸ್‌ಪೆಕ್ಟರ್ ಉದಯ ರವಿ, ಬೆಟ್ಟಂಪಾಡಿ ನವೋದಯ ಪ್ರೌಢಶಾಲಾ ದೈಹಿಕ ಶಿಕ್ಷಣ ಶಿಕ್ಷಕ ದಯಾನಂದ ರೈ ಕೋರ್ಮಂಡ, ಬೆಳಿಯೂರುಕಟ್ಟೆ ಶೈನ್ ಫ್ರೆಂಡ್ಸ್ ಕ್ಲಬ್ ಅಧ್ಯಕ್ಷ ಯೂಸುಫ್ ಗೌಸಿಯಾ ಭಾಗವಹಿಸಲಿದ್ದಾರೆ. ಸಂಜೆ ಸಮಾರೋಪ ಸಮಾರಂಭ ನಡೆಯಲಿದ್ದು ಪುತ್ತೂರು ತಿರುಮಲ ಹೋಂಡಾ ಮಾಲಕ ಕೃಷ್ಣಕಿಶೋರ್ ಎನ್.ಟಿ ಬಹುಮಾನ ವಿತರಣೆ ಮಾಡಲಿದ್ದಾರೆ. ಶಾಸಕ ಸಂಜೀವ ಮಠಂದೂರು ಸಭಾಧ್ಯಕ್ಷತೆ ವಹಿಸಲಿದ್ದಾರೆ. ಅತಿಥಿಗಳಾಗಿ ತಾಪಂ ಮಾಜಿ ಅಧ್ಯಕ್ಷ ಶಿವಪ್ಪ ಪೂಜಾರಿ ನುಳಿಯಾಲು, ರೋಟರಿ ಕ್ಲಬ್ ಪುತ್ತೂರು ಸಿಟಿಯ ಅಧ್ಯಕ್ಷ ಧರ್ಣಪ್ಪ ಗೌಡ, ಜಿಲ್ಲಾ ಬಿಜೆಪಿಯ ಕಾರ್ಯಕಾರಿ ಸದಸ್ಯ ಆರ್.ಸಿ ನಾರಾಯಣ್ ರೆಂಜ, ಬೆಟ್ಟಂಪಾಡಿ ಗ್ರಾಪಂ ಸದಸ್ಯ ಜಗನ್ನಾಥ ರೈ ಕೊಮ್ಮಂಡ, ನಿಡ್ಪಳ್ಳಿ ಗ್ರಾಪಂ ಮಾಜಿ ಸದಸ್ಯ ಪ್ರಕಾಶ್ ಬೋರ್ಕರ್ ಕತ್ತಲಕಾನ, ಎನ್.ವೈ.ಟಿ ತಂಬುತ್ತಡ್ಕ ಅಧ್ಯಕ್ಷ ಸಂಶೀರ್ ಎನ್.ಎ.ಕೆ, ಕೃತಿಕಾ ಹೊಟೇಲ್ ಮಾಲಕ ದಿವಾಕರ ರೈ, ಕ್ಲಾಸಿಕ್ ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷ ಫಾರೂಕ್ ಟಿ.ಎಂ ಭಾಗವಹಿಸಲಿದ್ದಾರೆ.

ಸನ್ಮಾನ ಕಾರ್ಯಕ್ರಮ: ಇದೇ ಸಂದರ್ಭದಲ್ಲಿ ಅಂತರರಾಷ್ಟ್ರೀಯ ಬಾಡಿ ಬಿಲ್ಡರ್ ಸಚಿನ್ ರೈ, ರಾಜ್ಯ ಪ್ರಶಸ್ತಿ ಪುರಸ್ಕೃತ ಶಿಕ್ಷಕ ದೇವಪ್ಪ ಎಂ ಮತ್ತು ರಾಜ್ಯ ಪ್ರಶಸ್ತಿ ಪುರಸ್ಕೃತ ಜೇನು ಕೃಷಿಕ ಮನೋಹರ ಅರಂಬ್ಯರವರುಗಳಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದೆ. ಕ್ರೀಡಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಸಂಘಟಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸುದ್ದಿಯಲ್ಲಿ ಲೈವ್ ನೋಡಿ: ಬೆಟ್ಟಂಪಾಡಿ ಬಿ.ಪಿ.ಎಲ್ ಸೀಸನ್ -೪ ಟೂರ್ನಮೆಂಟ್‌ನ ಲೈವ್ ಅನ್ನು `ಸುದ್ದಿ ಪುತ್ತೂರು ಯೂಟ್ಯೂಬ್ ಚಾನೆಲ್’ನಲ್ಲಿ ಲೈವ್ ಆಗಿ ನೋಡಬಹುದಾಗಿದೆ.

ಹೋಂಡಾ ಆಕ್ಟೀವಾ 6 ಜಿ ಸ್ಕೂಟರ್ ಮಾರುಕಟ್ಟೆಗೆ ಬಿಡುಗಡೆ
ಕ್ರಿಕೆಟ್ ಪಂದ್ಯಾಟದಲ್ಲಿ ವಿಶೇಷ ಆಕರ್ಷಣೆಯಾಗಿ ಪುತ್ತೂರು ತಿರುಮಲ ಹೋಂಡಾದ ವತಿಯಿಂದ ಹೋಂಡಾ ಆಕ್ಟೀವಾ ೬ಜಿ ಸ್ಕೂಟರ್ ಮಾರುಕಟ್ಟೆಗೆ ಬಿಡುಗಡೆಗೊಳ್ಳಲಿದೆ. ದ್ವಿಚಕ್ರ ವಾಹನದ ಇತಿಹಾಸದಲ್ಲೇ ಕೋಟ್ಯಾಂತರ ಗ್ರಾಹಕರ ಮನಗೆದ್ದಿರುವ ಹೋಂಡಾ ದ್ವಿಚಕ್ರ ವಾಹನಗಳ ಒಡೆಯನಾಗಬೇಕೆಂಬ ಕನಸು ಪ್ರತಿಯೊಬ್ಬರಲ್ಲೂ ಇದೆ. ಇದೀಗ ಹೋಂಡಾ ಆಕ್ಟೀವಾ ೬ಜಿ ಸ್ಕೂಟರ್ ಹಲವು ಬದಲಾವಣೆಗಳೊಂದಿಗೆ ಮಾರುಕಟ್ಟೆಗೆ ಬಿಡುಗಡೆಗೊಳ್ಳುತ್ತಿದೆ. ಕೇವಲ ರೂ.೪,೪೪೪/ ಪಾವತಿಸುವ ಮೂಲಕ ನಿಮ್ಮಿಷ್ಟದ ಹೋಂಡಾ ಆಕ್ಟೀವಾ ೬ಜಿಯನ್ನು ತಮ್ಮದಾಗಿಸಿಕೊಳ್ಳಬಹುದಾಗಿದೆ.ಹೆಚ್ಚಿನ ಮಾಹಿತಿಗಾಗಿ ಪುತ್ತೂರು ತಿರುಮಲ ಹೋಂಡಾ ಅಥವಾ ಉಪ್ಪಿನಂಗಡಿ, ಕಡಬ, ಸುಳ್ಯ, ನೆಲ್ಯಾಡಿಗಳಲ್ಲಿ ಸಹ ಸಂಸ್ಥೆಗಳನ್ನು ಸಂಪರ್ಕಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ೯೧೦೮೪೭೧೩೭೩ ಗೆ ಸಂಪರ್ಕಿಬಹುದಾಗಿದೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.