Home_Page_Advt
Home_Page_Advt
Home_Page_Advt
Breaking News

ಕೊಯಿಲ ಗ್ರಾಮ ಪಂಚಾಯಿತಿಯಿಂದ ಕುಡಿಯುವ ನೀರು ಸಮಸ್ಯೆಗೆ ಪೂರ್ವ ಸಿದ್ಧತೆ

  • ಪಂಚಾಯಿತಿ ವ್ಯಾಪ್ತಿಯಲ್ಲಿರುವ ೪ ಪಾಲು ಬಿದ್ದಿದ್ದ ಬಾವಿಗಳಿಗೆ ಕಾಯಕಲ್ಪ
  • ಪಂಚಾಯಿತಿ ಕ್ರಮಕ್ಕೆ ಸಾರ್ವಜನಿಕ ಪ್ರಶಂಸೆ
  • ಕುಡಿಯುವ ನೀರಿಗೆ ಸಮಸ್ಯೆ ಆಗಬಾರದು-ಹೇಮಾ ಮೋಹನ್‌ದಾಸ್


ಉಪ್ಪಿನಂಗಡಿ: ಫೆಬ್ರುವರಿ ತಿಂಗಳು ಕಳೆಯಿತೆಂದರೆ ಮತ್ತೆ ಜೂನ್ ತನಕ ಎಲ್ಲೆಡೆ ಕುಡಿಯುವ ನೀರಿಗೆ ಸಮಸ್ಯೆ ಎದುರಾಗುವುದು ಸಹಜ. ಅದರಲ್ಲೂ ಕಾಲೋನಿ, ಗುಂಪು  ಮನೆಗಳಿರುವ ಕೇವಲ ಗ್ರಾಮ ಪಂಚಾಯಿತಿ ನೀರು ಸರಬರಾಜು ವ್ಯವಸ್ಥೆಯನ್ನು ಅವಲಂಭಿಸಿರುವವರ ಪಾಡು ಹೇಳ ತೀರದಂತಿರುತ್ತದೆ, ಈ ಹಿನ್ನೆಲೆಯಲ್ಲಿ ಕೊಯಿಲ ಗ್ರಾಮ ಪಂಚಾಯಿತಿ ತನ್ನ ವ್ಯಾಪ್ತಿಯಲ್ಲಿರುವ ಪಾಲು ಬಿದ್ದಿದ್ದ ಬಾವಿಯನ್ನು ದುರಸ್ಥಿ ಪಡಿಸಿಕೊಂಡು ಸಂಭವನೀಯ ಸಮಸ್ಯೆಗೆ ಪರಿಹಾರ ಕಂಡು ಕೊಂಡು ಸಮಸ್ಯೆ ಎದುರಿಸಲು ಹಾದಿ ಸುಗಮಗೊಳಿಸಿದೆ.

ಕೊಲ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಗಂಡಿಬಾಗಿಲು, ಗೋಕುಲನಗರ, ವಲಕಡಮ ಮತ್ತು ಸಬಲೂರು ಸೇರಿದಂತೆ ೪ ಕಡೆಯಲ್ಲಿ ಬಾವಿ ಇದೆ. ಬಾವಿಯಲ್ಲಿ ನೀರು ಇದ್ದರೂ  ಅದನ್ನು ಬಳಸದೆ ಮತ್ತು ಹೂಳು ತುಂಬಿರುವುದರಿಂದಾಗಿ ನಿರುಪಯುಕ್ತವಾಗಿ, ಪಾಲು ಬಿದ್ದಿತ್ತು. ಇನ್ನು ಕೆಲವರು ಕಿಡಿಗೇಡಿಗಳು ತ್ಯಾಜ್ಯ ಮೊದಲಾದವುಗಳನ್ನು ಎಸೆದು ನೀರು  ಮಲೀನಗೊಳಿಸಿದ್ದರು. ಹೀಗಾಗಿ ಅದು ಉಪಯೋಗಕ್ಕೆ ದೊರಕುತ್ತಿರಲಿಲ್ಲ.

ನೀರಿಗೆ ಹಾಹಾಕಾರ ಎದುರಾದಾಗ ವ್ಯಥೆ ಆಗುತ್ತಿತ್ತು:
ಪ್ರತೀ ವರ್ಷ ಬಿರು ಬೇಸಿಗೆ ಎಪ್ರಿಲ್, ಮೇ ತಿಂಗಳಲ್ಲಿ ಬೋರ್‌ವೆಲ್‌ನಲ್ಲಿ ಅಂತರ್ಜಲ ಕುಸಿತ ಆಗಿ ಕುಡಿಯುವ ನೀರಿಗೆ ಹಾಹಾಕಾರ ಪಡುವಂತಾಗುತ್ತಿರುತ್ತದೆ. ಈ ಸಂದರ್ಭಗಳಲ್ಲಿ ಇಂತಹ ಬಾವಿಯಲ್ಲಿ ನೀರು ಇರುತ್ತಿತ್ತು. ಆದರೆ ಮಲೀನಗೊಂಡಿದ್ದ ಕಾರಣ ತೆಗೆಯುವ ಹಾಗೆ ಇರುತ್ತಿರಲಿಲ್ಲ. ಊಟಕ್ಕೆ ಇಲ್ಲದ ಉಪ್ಪಿನಕಾಯಿ ಎನ್ನುವಂತಿದ್ದವು. ಇದನ್ನೆಲ್ಲ ಮನಗಂಡ ಕೊಲ ಗ್ರಾಮ ಪಂಚಾಯಿತಿ ಕುಡಿಯುವ ನೀರಿಗೆ ಸಮಸ್ಯೆ ಎದುರಾಗುವ ಮುನ್ನ ಪರಿಹಾರ ಕಂಡುಕೊಂಡು ಪೂರ್ವ ಸಿದ್ಧತೆ ಮಾಡಿಕೊಂಡಿದೆ.

ಪಂಚಾಯಿತಿ ಕ್ರಮಕ್ಕೆ ಸಾರ್ವಜನಿಕ ಪ್ರಶಂಸೆ:
ಕಳೆದ ಹತ್ತಾರು ವರ್ಷಗಳಿಂದ ಪಾಲು ಬಿದ್ದಿದ್ದ ಬಾವಿಯನ್ನು ದುರಸ್ಥಿ ಮಾಡುವ ಮೂಲಕ ಬಿರು ಬೇಸಿಗೆ ಸಂದರ್ಭದಲ್ಲಿ ಗ್ರಾಮಸ್ಥರ ಕುಡಿಯುವ ನೀರಿಗೆ ಸಮಸ್ಯೆಯನ್ನು ಎದುರಾಗಬಾರದು ಎಂಬ ನಿಟ್ಟಿನಲ್ಲಿ ಗ್ರಾಮ ಪಂಚಾಯಿತಿ ಕೈಗೊಂಡಿರುವ ಬಾವಿ ದುರಸ್ಥಿ ಕ್ರಮದ ಬಗ್ಗೆ ಗ್ರಾಮಸ್ಥರಿಂದ ಪ್ರಶಂಸೆಯ ಮಾತುಗಳು ವ್ಯಕ್ತವಾಗಿದೆ.

ಕುಡಿಯುವ ನೀರಿಗೆ ಸಮಸ್ಯೆ ಆಗಬಾರದು-ಹೇಮಾ ಮೋಹನ್‌ದಾಸ್
ವರ್ಷಂಪ್ರತಿ ಬಿರು ಬೇಸಿಗೆಯಲ್ಲಿ ಪಂಚಾಯಿತಿ ವ್ಯಾಪ್ತಿಯಲ್ಲಿ ಕುಡಿಯುವ ನೀರಿಗೆ ಸಮಸ್ಯೆ ಎದುರಾಗುತ್ತಿತ್ತು. ಇದನ್ನು ಅರ್ಥೈಸಿಕೊಂಡು ಅಂತಹ ಸಮಸ್ಯೆ ಎದುರಾದಾಗ ಕನಿಷ್ಠ ಕುಡಿಯುವ ನೀರಿನ ಸಲುವಾಗಿ ಆದರೂ ನೀರು ಸೇದಿ ತಂದು ತುರ್ತು ಸಮಸ್ಯೆಗೆ ಪರಿಹಾರ ಕಂಡು ಕೊಳ್ಳುವ ಸಲುವಾಗಿ ಬಾವಿಯನ್ನು ದುಸ್ಥಿತಿಯಲ್ಲಿ ಇಟ್ಟುಕೊಳ್ಳಬೇಕು ಎಂದು ನಿರ್ಧರಿಸಿದ್ದೆವು. ಆದರೆ ಕಾರ್ಮಿಕರು ಸಿಗದೆ ತಡವಾಗಿತ್ತು. ಇದೀಗ ಅದನ್ನು ದುರಸ್ಥಿ ಮಾಡಲು ಸಾಧ್ಯವಾಗಿರುವುದಕ್ಕೆ ಹೆಮ್ಮೆ ಅನಿಸುತ್ತಿದೆ ಎಂದು ಕೊಲ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶ್ರೀಮತಿ ಹೇಮಾ ಮೋಹನ್‌ದಾಸ್ ಪ್ರತಿಕ್ರಿಯಿಸಿದ್ದಾರೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.