Home_Page_Advt
Home_Page_Advt
Home_Page_Advt
Breaking News

ತಾಯಿಯ ಜೀವ ರಕ್ಷಕರಾಗಿದ್ದ ವೈದ್ಯರಿಗೆ ಕೃತಜ್ಞತೆ ಸಲ್ಲಿಸಿದ ಕುಟುಂಬ – ಬೊಳುವಾರಿನಲ್ಲಿ ನಡೆದ ಉತ್ತರಕ್ರಿಯೆ ಸಂದರ್ಭ ನಡೆದ ಘಟನೆ

ಪುತ್ತೂರು: ಸಾಮಾನ್ಯವಾಗಿ ಇಹಲೋಕ ತ್ಯಜಿಸಿದವರಿಗೆ ಇಂತಿಷ್ಟು ದಿನಗಳ ಬಳಿಕ ನಡೆಯುವ ಕ್ರಿಯಾ ವಿಧಿಗಳು ಎಲ್ಲಾ ಧರ್ಮ, ಜಾತಿಗಳಲ್ಲೂ ಇವೆ. ಉತ್ತರ ಕ್ರಿಯಾದಿ ಸದ್ಗತಿ ಕಾರ್ಯಗಳಲ್ಲಿ ಕುಟುಂಬ, ಬಂಧು ಮಿತ್ರರನ್ನು ಕರೆಸಿ ನಿಧನರಾದವರಿಗೆ ಶ್ರದ್ಧಾಂಜಲಿ ಅರ್ಪಿಸಿ ಮಧ್ಯಾಹ್ನ ಊಟೋಪಾಚರಗಳು ನಡೆಯುವ ಕ್ರಮ ಇದೆ. ಆದರೆ ಇಲ್ಲೊಂದು ಕಡೆ ಅವೆಲ್ಲಕ್ಕೂ ಮಿಗಿಲಾಗಿ ಮೃತರ ಆತ್ಮಕ್ಕೆ ಚಿರಶಾಂತಿ ಕೋರುವ ಜೊತೆಗೆ ಇಷ್ಟು ವರ್ಷ ಅವರ ಜೀವರಕ್ಷರಾಗಿ ಆರೈಕೆ ಮಾಡಿದ ವೈದ್ಯರಿಗೂ ಕೃತಜ್ಞತೆ ಸಲ್ಲಿಸುವ ವಿಶೇಷ ಕಾರ್ಯಕ್ರಮ ಫೆ.8ರಂದು ಬೊಳುವಾರು ವಿಶ್ವಕರ್ಮ ಸಭಾಭವನದಲ್ಲಿ ನಗರಸಭಾ ಸದಸ್ಯ ಸಂತೋಷ್ ಕುಮಾರ್ ಅವರ ತಾಯಿ ಕೆ.ಶಶಿಕಲ ಅವರ ಉತ್ತರ ಕ್ರಿಯೆ ಕಾರ್ಯಕ್ರಮದಲ್ಲಿ ನಡೆದಿದೆ.

ನಗರಸಭಾ ಸದಸ್ಯ ಸಂತೋಷ್ ಕುಮಾರ್ ಅವರ ತಾಯಿ ಕೆ.ಶಶಿಕಲ ಅವರ ಆರೋಗ್ಯ ಸುಧಾರಣೆಗೆ ಕಾರಣಕರ್ತರಾದ ಮಹಾವೀರ ಆಸ್ಪತ್ರೆಯ ಡಾ. ಸುರೇಶ್ ಪುತ್ತೂರಾಯ ಅವರನ್ನು ಉತ್ತರ ಕ್ರಿಯೆ ಕಾರ್‍ಯಕ್ರಮದಲ್ಲಿ ಗೌರವಿಸಿ ಕೃತಜ್ಞತೆ ಸಲ್ಲಿಸಲಾಯಿತು. ನನ್ನ ತಾಯಿ ಇಷ್ಟು ವರ್ಷ ಬದುಕಬೇಕಾದರೆ ಇದಕ್ಕೆ ಮೂಲ ಕಾರಣ ಡಾ. ಸುರೇಶ್ ಪುತ್ತೂರಾಯ ಎಂದು ಹೇಳುವ ಮೂಲಕ ಸಂತೋಷ್ ಕುಮಾರ್ ಬೊಳುವಾರು ಅವರು ತಾಯಿಯ ನಿಧನದ ಬಳಿಕವೂ ವೈದ್ಯರನ್ನು ನೆನಪಿಸಿ ಅವರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.

ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಅಚ್ಚುತ ನಾಯಕ್, ವಸಂತ ಅಚಾರ್ಯ ಅವರು ನುಡಿನಮನ ಸಲ್ಲಿಸಿದ ಬಳಿಕ ಮೃತರ ಭಾವಚಿತ್ರಕ್ಕೆ ಎಲ್ಲರು ಪುಷ್ಪಾರ್ಚನೆ ಮಾಡಿದರು. ದಿ.ಶಶಿಕಲಾ ಅವರ ಪುತ್ರರಾದ ನಗರಸಭಾ ಸದಸ್ಯ ಸಂತೋಷ್ ಕುಮಾರ್ ಬೊಳುವಾರು, ಸುರೇಂದ್ರ, ಶೋಭಾವತಿ, ಸುಧಾ, ಸಂಧ್ಯಾ, ಸುರೇಖಾ, ಸುಜಯ, ಶೈಲಜ, ಸುಮನ, ಹಾಗೂ ಅಳಿಯಂದಿರು, ಸೊಸೆಯಂದಿರು, ಮೊಮ್ಮಕ್ಕಳು, ಮರಿಮಕ್ಕಳು ಸೇರಿದಂತೆ ಬಂದು ಮಿತ್ರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ನೀಲಂತ್ ಕುಮಾರ್ ಬೊಳುವಾರು ಕಾರ್ಯಕ್ರಮ ನಿರೂಪಿಸಿದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.