Home_Page_Advt
Home_Page_Advt
Breaking News

ಫೆ.29-ಮಾ.1: ಯಂಗ್ ಬ್ರಿಗೇಡ್ ಸೇವಾದಳದ ನೇತೃತ್ವದಲ್ಲಿ ಕ್ರಿಕೆಟ್ ಪಂದ್ಯಾಟ

  • ಇತಿಹಾಸದಲ್ಲೇ ಪ್ರಪ್ರಥಮ ಬಾರಿಗೆ ರಕ್ತದಾನದ ಮೂಲಕ ಕ್ರಿಕೆಟ್ ಪಂದ್ಯಾಟ
  • ಪ್ರವೇಶ ಶುಲ್ಕವಾಗಿ ಪ್ರತೀ ತಂಡದ ಪರವಾಗಿ 5 ಜನರಿಂದ ರಕ್ತದಾನ

ಪುತ್ತೂರು: ಯಂಗ್ ಬ್ರಿಗೇಡ್ ಸೇವಾದಳ ಪುತ್ತೂರು ಇವರ ನೇತೃತ್ವದಲ್ಲಿ ತಾಲೂಕಿನ ಆಟಗಾರರನ್ನೊಳಗೊಂಡ ಅರ್ಹ 32 ತಂಡಗಳ ಅಂಡರ್ ಆರ್ಮ್ ಫುಲ್ ಗ್ರೌಂಡ್ ಕ್ರಿಕೆಟ್ ಟೂರ್ನಮೆಂಟ್ ಯಂಗ್ ಬ್ರಿಗೇಡ್ ಟ್ರೋಫಿ-2020 ಕ್ರಿಕೆಟ್ ಪಂದ್ಯಾಟ ಫೆ.29 ಮತ್ತು ಮಾ.1ರಂದು ಕೊಂಬೆಟ್ಟು ತಾಲೂಕು ಕ್ರೀಡಾಂಗಣದಲ್ಲಿ ನಡೆಯಲಿದೆ. ತಂಡಗಳಿಂದ ನಗದು ಶುಲ್ಕ ಸಂಗ್ರಹಿಸುವ ಬದಲು ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ ಇದರ ಸಹಭಾಗಿತ್ವದಲ್ಲಿ ಕೆ ಎಂ ಸಿ ಆಸ್ಪತ್ರೆ ಮಂಗಳೂರು ಮತ್ತು ಎ ಜೆ ಆಸ್ಪತ್ರೆ ಮಂಗಳೂರು ಇದರ ಸಹಯೋಗದೊಂದಿಗೆ ರಕ್ತದಾನದ ಮಾಡುವ ಮೂಲಕ ಇತಿಹಾಸದಲ್ಲಿಯೇ ಪ್ರಪ್ರಥಮ ಬಾರಿಗೆ ವಿನೂತ‌ನ ಪಂದ್ಯಾಕೂಟ ಆಯೋಜಿಸಲಾಗಿದೆ.

ಪ್ರಥಮ ವಿಜೇತರಿಗೆ 50,000 ರೂ ಮತ್ತು ಯಂಗ್ ಬ್ರಿಗೇಡ್ ಟ್ರೋಫಿ, ದ್ವಿತೀಯ ವಿಜೇತರಿಗೆ 25,000 ರೂ ಮತ್ತು ಯಂಗ್ ಬ್ರಿಗೇಡ್ ಟ್ರೋಫಿ ಅಲ್ಲದೆ, ಅತೀ ಹೆಚ್ಚು ರಕ್ತದಾನ ಮಾಡಿದ ತಂಡಕ್ಕೆ ವಿಶೇಷ ಬಹುಮಾನ ಹಾಗೂ ಹಲವಾರು ವೈಯುಕ್ತಿಕ ಬಹುಮಾನಗಳನ್ನು ನೀಡಿ ಗೌರವಿಸಲಾಗುವುದು ಎಂದು ಪ್ರಕಟಣೆ ತಿಳಿಸಿದೆ.

‘ಸುದ್ದಿ’ಯಲ್ಲಿ ನೇರ ಪ್ರಸಾರ
ಎರಡು‌ ದಿನ ನಡೆಯಲಿರುವ ಈ ಕ್ರಿಕೆಟ್ ಪಂದ್ಯಾಟ ಸುದ್ದಿ ಯೂ ಟ್ಯೂಬ್ ಚಾನೆಲ್ ನಲ್ಲಿ ನೇರ ಪ್ರಸಾರಗೊಳ್ಳಲಿದೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

1 Comment

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.