Home_Page_Advt
Home_Page_Advt
Breaking News

ಒಕ್ಕಲಿಗ ಗೌಡ ಸಂಘದಲ್ಲಿ ಉಚಿತ ಆರೋಗ್ಯ ಜಾಗೃತಿ ಶಿಬಿರ

ಪುತ್ತೂರು: ಒಕ್ಕಲಿಗ ಗೌಡ ಸಮಾಜ ಸೇವಾ ಸಂಘವು ಕೇವಲ ಒಂದು ಸಮಾಜಕ್ಕಾಗಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದಿಲ್ಲ. ಎಲ್ಲಾ ಸಮಾಜಗಳ ಹಿತಕ್ಕಾಗಿ ಜನಹಿತವಾದ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ ಎಂದು ಒಕ್ಕಲಿಗ ಗೌಡ ಸಮಾಜ ಸೇವಾ ಸಂಘದ ಗೌರವಾಧ್ಯಕ್ಷ ಚಿದಾನಂದ ಬೈಲಾಡಿ ಹೇಳಿದರು.

ಒಕ್ಕಲಿಗ ಗೌಡ ಸೇವಾ ಸಂಘ, ಗೌಡ ಮಹಿಳಾ ಸಂಘ ಹಾಗೂ ಮೋದಿಕೇರ್ ಇದರ ಸಹಭಾಗಿತ್ವದಲ್ಲಿ ಫೆ.21ರಂದು ತೆಂಕಿಲ ಒಕ್ಕಲಿಗ ಗೌಡ ಸಮುದಾಯ ಭವದ ಚುಂಚಶ್ರೀ ಸಭಾಂಗಣದಲ್ಲಿ ನಡೆದ ಉಚಿತ ಆರೋಗ್ಯ ಜಾಗೃತಿ ಶಿಬರದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು. ನೆಮ್ಮದಿಯ ಜೀವನಕ್ಕೆ ಮಾನವನಿಗೆ ಆರೋಗ್ಯ ಬಹಳ ಮುಖ್ಯವಾಗಿದೆ. ಕೇವಲ ಹಣದಿಂದ ಆರೋಗ್ಯ ಪಡೆಯಲು ಸಾಧ್ಯವಿಲ್ಲ. ಆರೋಗ್ಯ ಇದ್ದರೆ ಮಾತ್ರ ಏನನ್ನೂ ಸಾಧಿಸಬಹುದು. ಆರೋಗ್ಯದ ರಕ್ಷಣೆಗೆ ಜಾಗೃತಿಯೂ ಪ್ರಾಮುಖ್ಯವಾಗಿದ್ದು ನೂತನ ಮಹಿಳಾ ಸಂಘದ ಅಧಿಕಾರ ಸ್ವೀಕರಿಸಿದ ಬಳಿಕ ಎರಡನೇ ಕಾರ್ಯಕ್ರಮವಾಗಿ ಆರೋಗ್ಯ ಜಾಗೃತಿ ಶಿಬರವನ್ನು ಆಯೋಜಿಸುತ್ತಿದೆ. ಆರೋಗ್ಯ ಮಾಹಿತಿ ಶಿಬಿರಗಳ ಹಲವು ಕಡೆಗಳಲ್ಲಿ ನಡೆಯುತ್ತಿದೆ.

ಆದರೆ ಪ್ರಥಮ ಬಾರಿಗೆ ಆರೋಗ್ಯ ರಕ್ಷಣೆಯ ಜಾಗೃತಿ ಕಾರ್ಯಕ್ರಮ ಆಯೋಜಿಸಿಕೊಂಡಿರುವ ಗೌಡ ಮಹಿಳಾ ಸಂಘದ ಕಾರ್ಯವನ್ನು ಅವರು ಶ್ಲಾಘಿಸಿದರು. ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ, ಅಧ್ಯಕ್ಷತೆ ವಹಿಸಿದ್ದ ಒಕ್ಕಲಿಗ ಗೌಡ ಸಮಾಜ ಸೇವಾ ಸಂಘದ ಅಧ್ಯಕ್ಷ ಶಿವರಾಮ ಎಚ್.ಡಿ ಮಾತನಾಡಿ, ಇಂದಿನ ದಿನಗಳಲ್ಲಿ ಕಲುಷಿತ ನೀರು, ಆಹಾರಗಳ ಸೇವನೆಯಿಂದ ಮಾನವನ ಆರೋಗ್ಯ ಹದಗೆಡುತ್ತಿದೆ. ಕಲುಷಿತ ಆಹಾರಗಳ ಸೇವನೆಯಿಂದ ಏರುಪೇರುಗಳು ಉಂಟಾಗಿ ಹಲವು ರೀತಿತ ಖಾಯಿಲೆಗಳು ಉಂಟಾಗುತ್ತಿದೆ. ಆರೋಗ್ಯ ರಕ್ಷಣೆಯ ದೃಷ್ಠಿಯಿಂದ ಜಾಗೃತಿ ಶಿಬಿರವು ಪೂರಕವಾಗಿರಲಿ ಎಂದು ಹೇಳಿದರು.

ಮೋದಿಕೇರ್ ಕಂಪನಿಯ ಸತ್ಯನಾರಾಯಣ ಕುಂದಾಪುರ ಮಾತನಾಡಿ, ಪ್ರತಿಯೊಬ್ಬರಿಗೂ ಆರೋಗ್ಯ ಸ್ವಾತಂತ್ರ್ಯ ಹಾಗೂ ಆರ್ಥಿಕ ಸ್ವಾತಂತ್ರ್ಯ ನೀಡುವುದೇ ಕಂಪನಿಯ ಉದ್ದೇಶವಾಗಿದ್ದು ಜಾಗೃತಿ ಶಿಬಿರವನ್ನು ಆಯೋಜಿಸಲಾಗಿದೆ. ಮುಂದಿನ ದಿನಗಳಲ್ಲಿ ಮಹಿಳೆಯರಿಗೆ ಚರ್ಮರೋಗದ ರಕ್ಷಣೆ ಹಾಗೂ ಕೃಷಿ ತರಬೇತಿ ನೀಡುವ ಯೋಜನೆಯಿದೆ ಎಂದರು. ಆರೋಗ್ಯ ರಕ್ಷಣೆಯ ಕುರಿತು ಜಾಗೃತಿ ಮೂಡಿಸಿ 2025 ವೇಳೆಗೆ ವಿದೇಶ ಉತ್ಪನ್ನಗಳನ್ನು ತ್ಯಜಿಸಿ ಸಂಪೂರ್ಣ ದೇಶಿಯ ಉತ್ಪನ್ನಗಳನ್ನೇ ಬಳಕೆ ಮಾಡುವಂತೆ ಜನರನ್ನು ಜಾಗೃತಿಗೊಳಿಸಲಾಗುತ್ತಿದೆ ಎಂದರು.

ಒಕ್ಕಲಿಗ ಗೌಡ ಸೇವಾ ಸಂಘದ ಪ್ರಧಾನ ಕಾರ್ಯದರ್ಶಿ ಶ್ರೀಧರ ಗೌಡ ಕಣಜಾಲು, ಯುವ ಒಕ್ಕಲಿಗ ಗೌಡ ಸಂಘದ ಅಧ್ಯಕ್ಷ ರಾಧಾಕೃಷ್ಣ ನಂದಿಲ, ಮೋದಿಕೇರ್‌ನ ತೇಜಕಿರಣ್, ಕಾರ್ಯಕ್ರಮದ ಸಂಯೋಜಕಿ ಶೋಭಾ ಶಿವಾನಂದ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸುಶ್ರೀ ಪ್ರಾರ್ಥಿಸಿದರು. ಗೌಡ ಮಹಿಳಾ ಸಂಘದ ಅಧ್ಯಕ್ಷೆ ಮೀನಾಕ್ಷಿ ಡಿ.ಗೌಡ ಪ್ರಸ್ತಾವಣೆಯೊಂದಿಗೆ ಸ್ವಾಗತಿಸಿದರು. ಮಹಿಳಾ ಸಂಘದ ಪದಾಧಿಕಾರಿಗಳಾದ ಸಂಧ್ಯಾ ಶಶಿಧರ್, ಸುಪ್ರೀಯ, ಶೋಭಾ ಶಿವಾನಂದ, ವಾರಿಜಾ ಕೆ.ಪಿ, ವಿದ್ಯಾ ಲಿಂಗಪ್ಪ ಗೌಡ, ಗೌರಿ ಬನ್ನೂರು, ಗೀತಾ ಪುಂಡರೀಕ ಹಾಗೂ ರೇಖಾ ಅತಿಥಿಗಳನ್ನು ಹೂ ನೀಡಿ ಸ್ವಾಗತಿಸಿದರು. ಮಹಿಳಾ ಸಂಘದ ಕಾರ್ಯದರ್ಶಿ ವಾರಿಜ ಕಾರ್ಯಕ್ರಮ ನಿರೂಪಿಸಿ, ಪ್ರಧಾನ ಕಾರ್ಯದರ್ಶಿ ಗೀತಾ ವಂದಿಸಿದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.