Home_Page_Advt
Home_Page_Advt
Breaking News

“ಸಂವಿಧಾನ ಉಳಿಸಿ ದೇಶ ರಕ್ಷಿಸಿ” ಫೆ.23 ರಾಮಕುಂಜದ ಆತೂರಿನಲ್ಲಿ ಬೃಹತ್ ಪ್ರತಿಭಟನೆ

ಕಡಬ: ರಾಮಕುಂಜದ ಆತೂರಿನ ಸಂವಿಧಾನ ಸಂರಕ್ಷಣಾ ಒಕ್ಕೂಟದ ನೇತೃತ್ವದಲ್ಲಿ ಸಂವಿಧಾನ ಉಳಿಸಿ ದೇಶ ರಕ್ಷಿಸಿ ಎನ್ನುವ ಧ್ಯೇಯ ವಾಕ್ಯದೊಂದಿಗೆ ಫೆ. 23 ರಂದು ಅಪರಾಹ್ನ ಗಂಟೆ 2.3೦ ರಿಂದ ಆತೂರು ಜಂಕ್ಷನ್‌ನಲ್ಲಿ ಬೃಹತ್ ಪ್ರತಿಭಟನೆ ಜರಗಲಿದೆ ಎಂದು ಆತೂರಿನ ಸಂವಿಧಾನ ಸಂರಕ್ಷಣಾ ಒಕ್ಕೂಟದ ಸಂಚಾಲಕ ಮಹಮ್ಮದ್ ತುಫೈಲ್ ಅವರು ತಿಳಿಸಿದ್ದಾರೆ.

ಅವರು ಫೆ.21ರಂದು ಕಡಬದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದರು. ನಮ್ಮ ಪ್ರತಿಭಟನೆ ಯಾವುದೇ ಧರ್ಮ ಅಥವಾ ರಾಜಕೀಯ ಪಕ್ಷದ ವಿರುದ್ಧವಲ್ಲ. ನಮ್ಮ ದೇಶದ ಜಾತ್ಯಾತೀತ ತಳಹದಿ ಹಾಗೂ ಬಹುತ್ವ ಸಂಸ್ಕೃತಿಯ ವಿರೋಧಿಯಾದ ಕಾಯಿದೆಗಳನ್ನು ಜಾರಿಗೊಳಿಸುವ ಪ್ರಯತ್ನದ ವಿರುದ್ಧ ನಮ್ಮ ಹೋರಾಟವಾಗಿದೆ. ಧರ್ಮದ ಹೆಸರಿನಲ್ಲಿ ದೇಶವನ್ನು ಅಸ್ಥಿರಗೊಳಿಸುವ ಷಡ್ಯಂತ್ರದ ವಿರುದ್ಧ ನಡೆಯುವ ಈ ಹೋರಾಟದಲ್ಲಿ ಪ್ರತಿಯೊಬ್ಬ ನಾಗರಿಕರೂ ಭಾಗವಹಿಸಿ ದೇಶದ ಸಂವಿಧಾನದ ಆಶಯಗಳನ್ನು ರಕ್ಷಣೆ ಮಾಡುವ ಕಾರ್ಯದಲ್ಲಿ ಕೈಜೋಡಿಸಬೇಕು ಎಂದು ಅವರು ಮನವಿ ಮಾಡಿದರು. ಆತೂರಿನ ಸಯ್ಯದ್ ಮಹಮ್ಮದ್ ಜುನೈದ್ ಜಿಫ್ರಿ ತಂಙಳ್ ಅವರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದು, ಸಯ್ಯದ್‌ಆನಸ್ ತಂಙಳ್ ಅಲ್‌ಅಝ್‌ಹರಿ ಅವರು ದುವಾಃ ನೆರವೇರಿಸಲಿದ್ದಾರೆ. ಆತೂರಿನ ಸಂವಿಧಾನ ಸಂರಕ್ಷಣಾ ಒಕ್ಕೂಟದ ಅಧ್ಯಕ್ಷ ಅಬ್ದುಲ್ ರಝಾಕ್ ಬಿ.ಕೆ. ಅವರು ಅಧ್ಯಕ್ಷತೆ ವಹಿಸಲಿದ್ದು, ಕಡೂರಿನ ಮಾಜಿ ಶಾಸಕ ವೈ.ಎಸ್.ವಿ.ದತ್ತ, ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಸಿ.ಎಸ್.ದ್ವಾರಕಾನಾಥ್ ಪತ್ರಕರ್ತ ಶಶಿಧರ್ ಭಟ್, ಮಾಜಿ ಸಚಿವ ಯು.ಟಿ.ಖಾದರ್, ದಲಿತಪರ ಹೋರಾಟಗಾರ ಡಾ| ಭಾಸ್ಕರ ಪ್ರಸಾದ್, ಪ್ರಗತಿಪರ ಚಿಂತಕ ಸುಧೀರ್ ಕುಮಾರ್ ಮುರೋಳ್ಳಿ ಅವರು ಪ್ರಧಾನ ಭಾಷಣ ಮಾಡಲಿದ್ದಾರೆ. ಪ್ರಮುಖರಾದ ವಂ|ವಿಲಿಯಂ ಮಾರ್ಟಿಸ್ ಉಡುಪಿ, ಅನೀಸ್ ಕೌಸರಿ, ಸುಫಿಯಾನ್ ಸಖಾಫಿ, ರಿಯಾಝ್ ಫರಂಗಿಪೇಟೆ, ಇಬ್ರಾಹಿಂ ಖಲೀಲ್ ತಲಪಾಡಿ, ಕೆ.ಟಿ.ಮಧುಸುಧನ ಗೌಡ, ಹಾಜಿ ಮೀರಾನ್ ಸಾಹೇಬ್, ಮುಸ್ತಾಫಾ ಹಾಜಿ ಕೆಂಪಿ, ಪಿ.ಡೀಕಯ್ಯ, ಅಬ್ದುಲ್‌ಖಾದರ್ ಹಾಜಿ ಕಡಬ ಅವರು ಮುಖ್ಯಅತಿಥಿಗಳಾಗಿ ಆಗಮಿಸಲಿದ್ದಾರೆ ಎಂದು ಅವರು ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಆತೂರಿನ ಸಂವಿಧಾನ ಸಂರಕ್ಷಣಾ ಒಕ್ಕೂಟದ ಅಧ್ಯಕ್ಷ ಅಬ್ದುಲ್ ರಝಾಕ್ ಬಿ.ಕೆ. ಹಾಗೂ ಸಹ ಸಂಚಾಲಕ ಸಿದ್ದೀಕ್ ನೀರಾಜೆ ಅವರು ಉಪಸ್ಥಿತರಿದ್ದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.