Home_Page_Advt
Home_Page_Advt
Breaking News

ಹಿರೇಬಂಡಾಡಿ: ಉಳತ್ತೋಡಿ ಶ್ರೀ ಷಣ್ಮುಖ ದೇವಸ್ಥಾನದ ಬ್ರಹ್ಮಕಲಶೋತ್ಸವಕ್ಕೆ ಚಾಲನೆ: ಊರ, ಪರವೂರ ಭಕ್ತಾದಿಗಳಿಂದ ಹೊರೆಕಾಣಿಕೆ ಸಮರ್ಪಣೆ

ಹಿರೇಬಂಡಾಡಿ: ಸಂಪೂರ್ಣ ಶಿಲಾಮಯ ದೇವಸ್ಥಾನವಾಗಿ ನವೀಕರಣಗೊಂಡಿರುವ ಹಿರೇಬಂಡಾಡಿ ಗ್ರಾಮದ ಉಳತ್ತೋಡಿ ಶ್ರೀ ಷಣ್ಮುಖ ದೇವಸ್ಥಾನದಲ್ಲಿ ಫೆ.19ರ ತನಕ ವಿವಿಧ ವೈಧಿಕ, ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ ತಂತ್ರಿ ಹಾಗೂ ಬ್ರಹ್ಮಶ್ರೀ ಕೆಮ್ಮಿಂಜೆ ಲಕ್ಷ್ಮೀಶ ತಂತ್ರಿಯವರ ನೇತೃತ್ವದಲ್ಲಿ ನಡೆಯುವ ನವೀಕರಣ ಪುನ: ಪ್ರತಿಷ್ಠಾಪಷ್ಟಬಂಧ ಬ್ರಹ್ಮಕಲಶೋತ್ಸವ ಕಾರ್ಯಕ್ರಮಗಳಿಗೆ ಫೆ.21ರಂದು ಚಾಲನೆ ನೀಡಲಾಗಿದೆ.

ಹೊರೆಕಾಣಿಕೆ ಸಮರ್ಪಣೆ:
ಫೆ.21ರಂದು ಬೆಳಿಗ್ಗೆ ಊರ ಹಾಗೂ ಪರವೂರ ಭಕ್ತಾಭಿಮಾನಿಗಳಿಂದ ಹಸಿರು ಹೊರೆಕಾಣಿಕೆ ಸಮರ್ಪಣೆ ಮಾಡಲಾಯಿತು. ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ ಮಹಾಕಾಳಿ ದೇವಸ್ಥಾನದಿಂದ ಹೊರೆಕಾಣಿಕೆ ಮೆರವಣಿಗೆಗೆ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷರೂ ಆದ ಶಾಸಕ ಸಂಜೀವ ಮಠಂದೂರುರವರು ಚಾಲನೆ ನೀಡಿದರು. ಉಪ್ಪಿನಂಗಡಿ ದೇವಸ್ಥಾನದಿಂದ ಹೊರಟ ಹೊರೆಕಾಣಿಕೆ ಮೆರವಣಿಗೆಯೂ ಉಪ್ಪಿನಂಗಡಿ ಪೇಟೆಯ ಮೂಲಕ ಗಾಂಧಿಪಾರ್ಕ್‌ಗೆ ಆಗಮಿಸಿ ಅಲ್ಲಿಂದ ವಾಹನದ ಮೂಲಕ ಹಿರೇಬಂಡಾಡಿ, ಮುರದಮೇಲು ಮೂಲಕ ದೇವಸ್ಥಾನಕ್ಕೆ ಆಗಮಿಸಿತು. ಹೊರೆಕಾಣಿಕೆ ಮೆರವಣಿಗೆಯಲ್ಲಿ 1 ಸಾವಿರಕ್ಕೂ ಮಿಕ್ಕಿ ಭಕ್ತರು ಪಾಲ್ಗೊಂಡು ಹೊರೆಕಾಣಿಕೆ ಸಮರ್ಪಣೆ ಮಾಡಿದರು. ಬಳಿಕ ದೇವಸ್ಥಾನದಲ್ಲಿ ಸಾಮೂಹಿಕ ಪ್ರಾರ್ಥನೆ, ತೋರಣ ಮುಹೂರ್ತ, ಉಗ್ರಾಣ ಮುಹೂರ್ತ ನಡೆಯಿತು. ಮಧ್ಯಾಹ್ನ ಮಹಾಪೂಜೆ ಬಳಿಕ ಅನ್ನಸಂತರ್ಪಣೆ ನಡೆಯಿತು.

ಭಜನಾ ಕಾರ್ಯಕ್ರಮ:
ಸಂಜೆ ಕೆಮ್ಮಾರ ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂಡಳಿ ಹಾಗೂ ಉದಯಗಿರಿ ಶ್ರೀ ಉಮಾಮಹೇಶ್ವರ ಭಜನಾ ಮಂಡಳಿಯವರಿಂದ ಭಜನಾ ಕಾರ್ಯಕ್ರಮ ನಡೆಯಿತು. ದೇವಸ್ಥಾನದ ಪ್ರಧಾನ ಅರ್ಚಕ ಗೋಪಾಲಕೃಷ್ಣ ತೋಳ್ಪಾಡಿತ್ತಾಯ, ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷರಾದ ಶಾಸಕ ಸಂಜೀವ ಮಠಂದೂರು, ಕಾರ್ಯಾಧ್ಯಕ್ಷ ಗಣೇಶ ಮಠಂದೂರು, ಪ್ರಧಾನ ಕಾರ್ಯದರ್ಶಿ ನವೀನ್ ಪಡ್ಪು, ಕೋಶಾಧಿಕಾರಿ ವಿಶ್ವನಾಥ ಕೆಮ್ಮಟೆ, ಜೊತೆ ಕಾರ್ಯದರ್ಶಿ ರೇವತಿ ಹೊಸಮನೆ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಜನಾರ್ದನ ಗೌಡ ಸಾಂತಿತ್ತಡ್ಡ, ಕಾರ್ಯದರ್ಶಿ ಬಾಲಚಂದ್ರ ಗುಂಡ್ಯ, ಉಪಾಧ್ಯಕ್ಷರುಗಳಾದ ನೀಲಯ್ಯ ಗೌಡ ಬಾರ್ಲ, ಮಾಧವ ಹೆನ್ನಾಳ, ಕುಶಾಲಪ್ಪ ಕೋಟ್ಯಾನ್ ಮುರ ದರ್ಖಾಸು, ಕೋಶಾಧಿಕಾರಿ ನಾರಾಯಣ ಕನ್ಯಾನ, ಜೊತೆ ಕಾರ್ಯದರ್ಶಿಗಳಾದ ಅಶೋಕ್ ಕುಮಾರ್ ಪಡ್ಪು, ಬೆಳಿಯಪ್ಪ ಗೌಡ ಜಾಲು, ನಿತಿನ್ ತಾರಿತ್ತಡಿ, ಸಂಘಟನಾ ಕಾರ್ಯದರ್ಶಿ ದಿವಾಕರ ಗೌಡ ಹಳೆಮನೆ, ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ದೇವಪ್ಪ ಪೂಜಾರಿ ಪಡ್ಪು, ಸದಸ್ಯರುಗಳಾದ ವಿಠಲ ಪೂಜಾರಿ ಪರಕೊಡಂಗೆ, ಮಾಧವ ನಾಕ್ ಗುಂಡಿಗದ್ದೆ, ಸತೀಶ್ ಶೆಟ್ಟಿ ಹೆನ್ನಾಳ, ವಿದ್ಯಾ ನಿಡ್ಡೆಂಕಿ, ಚಂದ್ರಾವತಿ ನೆಹರುತೋಟ, ರೋಹಿತ್ ಸರೋಳಿ, ಕಾಮಗಾರಿ ಸಮಿತಿ ಅಧ್ಯಕ್ಷ ಚೆನ್ನಕೇಶವ ಕನ್ಯಾನ, ಮಹಿಳಾ ಸಮಿತಿ ಅಧ್ಯಕ್ಷೆ ಕಸ್ತೂರಿ ಹೆನ್ನಾಳ, ಕಾರ್ಯದರ್ಶಿ ಭಾರತಿ ನಿಡ್ಡೆಂಕಿ, ಉತ್ಸವ ಸಮಿತಿ ಅಧ್ಯಕ್ಷೆ ದೇವಮ್ಮ ಕುಬಲ, ಕಾರ್ಯದರ್ಶಿ ಬೆಳಿಯಪ್ಪ ಗೌಡ ಜಾಲು, ಕೋಶಾಧಿಕಾರಿ ಶ್ರೀಧರ ಮಠಂದೂರು ಸೇರಿದಂತೆ ಬ್ರಹ್ಮಕಲಶೋತ್ಸವದ ವಿವಿಧ ಉಪಸಮಿತಿಗಳ ಸಂಚಾಲಕರು, ಸದಸ್ಯರುಗಳು, ಗ್ರಾಮಸ್ಥರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

 
ದೇವಸ್ಥಾನದಲ್ಲಿ ಇಂದು:
ಫೆ.22ರಂದು ಬೆಳಿಗ್ಗೆ ಉಷ:ಪೂಜೆ, ಮಹಾಗಣಪತಿ ಹೋಮ, ಅಂಕುರಪೂಜೆ, ಚತು:ಶುದ್ಧಿ, ಧಾರೆ, ಪಂಚಗವ್ಯ, ಪಂಚಕ ಬಿಂಬಶುದ್ಧಿ, ಖನನಾದಿ, ಸ್ಥಳಶುದ್ಧಿ, ದಹನ ಪ್ರಾಯಶ್ಚಿತ್ತ, ಪ್ರಾಯಶ್ಚಿತ್ತ ಹೋಮಗಳು, ಮಧ್ಯಾಹ್ನ ಹೋಮಗಳ ಕಲಶಾಭಿಷೇಕ, ಅನ್ನಸಂತರ್ಪಣೆ ನಡೆಯಲಿದೆ. ಸಂಜೆ ಶ್ರೀ ಕಾಳಿಕಾಂಬಾ ಭಜನಾ ಮಂಡಳಿ ಉಪ್ಪಿನಂಗಡಿ ಹಾಗೂ ಶ್ರೀ ಸುಬ್ರಹ್ಮಣ್ಯ ಭಜನಾ ಮಂಡಳಿ ಉಳತ್ತೋಡಿ ಹಿರೇಬಂಡಾಡಿ ಇವರಿಂದ ಭಜನಾ ಕಾರ್‍ಯಕ್ರಮ ನಡೆಯಲಿದೆ. ಸಂಜೆ ದೀಪಾರಾಧನೆ, ಅಂಕುರಪೂಜೆ, ದುರ್ಗಾಪೂಜೆ, ಮಹಾಸುದರ್ಶನ ಹೋಮ ನಡೆಯಲಿದೆ. ಸಂಜೆ ನಡೆಯುವ ಧಾರ್ಮಿಕ ಸಭೆಯಲ್ಲಿ ಮಾಣಿಲ ಶ್ರೀಧಾಮ ಶ್ರೀ ಮಹಾಲಕ್ಷ್ಮೀ ಕ್ಷೇತ್ರದ ಯೋಗಿಕೌಸ್ತುಭ ಕರ್ಮಯೋಗಿ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿಯವರು ಆಶೀರ್ವಚನ ನೀಡಲಿದ್ದಾರೆ. ಪುತ್ತೂರು ಶ್ರೀ ರಾಮಕೃಷ್ಣ ಪ್ರೌಢಶಾಲೆಯ ಸಂಚಾಲಕ ಹೇಮನಾಥ ಶೆಟ್ಟಿ ಅಧ್ಯಕ್ಷತೆ ವಹಿಸಲಿದ್ದಾರೆ. ಸವಣೂರು ವಿದ್ಯಾರಶ್ಮಿ ವಿದ್ಯಾಲಯದ ಪ್ರಾಂಶುಪಾಲ ಸೀತಾರಾಮ ಕೇವಳ ಧಾರ್ಮಿಕ ದಿಕ್ಸೂಚಿ ಭಾಷಣ ಮಾಡಲಿದ್ದಾರೆ. ವಲಯ ಅರಣ್ಯಾಧಿಕಾರಿ ಮೋಹನ್ ಕುಮಾರ್, ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಬಿಲ್ಲವ ಸಂಘದ ಅಧ್ಯಕ್ಷ ಜಯಂತ ನಡುಬೈಲು, ಬೆಂಗಳೂರಿನ ಉದ್ಯಮಿ ಎಂ.ಬಿ ಮುರಳೀಧರರವರು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ. ಬಳಿಕ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ನಾಟ್ಯನಿಲಯಂ ವಿದ್ವಾನ್ ಬಾಲಕೃಷ್ಣ ಮಂಜೇಶ್ವರ ಶಿಷ್ಯಬಳಗದಿಂದ “ಭರತನಾಟ್ಯ ಕಾರ್ಯಕ್ರಮ” ನಡೆಯಲಿದೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.