Home_Page_Advt
Home_Page_Advt
Breaking News

ಅಪಾಯಕಾರಿ ತಿರುವಿನಲ್ಲಿ ಅಸಮರ್ಪಕ ಬ್ಯಾರಿಕೇಡ್ – ಕಾವುನಲ್ಲಿ ನಡೆಯಿತು ಮತ್ತೊಂದು ಅಪಘಾತ!!

  • ಹಸಿ ಮೀನು ಸಾಗಾಟದ ಟೆಂಪೋ ಮತ್ತು ಓಮ್ನಿ ಕಾರು ನಡುವೆ ಡಿಕ್ಕಿ

ಕಾವು: ಕಳೆದ ೩ ದಿನದ ಹಿಂದೆಯಷ್ಟೇ ಸರಣಿ ಅಪಘಾತ ನಡೆದಿದ್ದ ಕಾವು ಬುಶ್ರಾ ಶಾಲೆಯ ಸಮೀಪದ ತಿರುವಿನಲ್ಲಿ ಮತ್ತೆ ಅಪಘಾತ ಸಂಭವಿಸಿದ ಘಟನೆ ಫೆ.೨೨ರಂದು ಬೆಳಿಗ್ಗೆ ನಡೆದಿದೆ. ಮಾಣಿ-ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಪುತ್ತೂರು ಕಡೆಯಿಂದ ಸುಳ್ಯ ಕಡೆಗೆ ಹಸಿ ಮೀನು ಸಾಗಾಟ ಮಾಡುತ್ತಿದ್ದ ಮಿನಿ ಟೆಂಪೋ(ಕೆಎ೨೧ಬಿ ೨೦೯೮) ಮತ್ತು ಕಾವುನಿಂದ ಪುತ್ತೂರು ಕಡೆಗೆ ಹೋಗುತ್ತಿದ್ದ ಓಮ್ನಿ ಕಾರಿನ(ಕೆಎ೧೯ಎಂಜಿ ೨೮೩೯) ಮಧ್ಯೆ ಮುಖಾಮುಖಿ ಡಿಕ್ಕಿ ಸಂಭವಿಸಿದೆ. ಕಾರು ಚಾಲಕ ಕಾವು ಟಪ್ಪಾಲುಕಟ್ಟೆ ನಿವಾಸಿ, ಪುತ್ತೂರು ಬಸ್‌ಸ್ಟ್ಯಾಂಡ್ ವಾಣಿಜ್ಯ ಸಂಕೀರ್ಣದಲ್ಲಿ ಮಣ್ಣಿನ ಸಾಮಾಗ್ರಿಗಳ ಉದ್ಯಮ ನಡೆಸುತ್ತಿರುವ ಸಿರಿಭೂಮಿಯ ಮಾಲಕ ಶ್ಯಾಂಪ್ರಕಾಶ್‌ರವರಿಗೆ ಗಾಯವಾಗಿದೆ.

ಅಸಮರ್ಪಕ ಬ್ಯಾರಿಕೇಡ್:
೩ ದಿನಗಳ ಹಿಂದೆಯಷ್ಟೇ ಸರಣಿ ಅಪಘಾತ ಸಂಭಿವಿಸಿದ್ದ ಕಾವು ಅಪಾಯಕಾರಿ ತಿರುವಿನಲ್ಲಿ ಅದೇ ದಿನ ರಾತ್ರಿ ಪೊಲೀಸ್‌ನವರು ೨ ಬ್ಯಾರಿಕೇಡ್ ಹಾಕಿದ್ದರು, ಮೊದಲಿಗೆ ೨ ಬ್ಯಾರಿಕೇಡ್‌ನ್ನು ರಸ್ತೆಯ ಒಂದೇ ಭಾಗಕ್ಕೆ ಹಾಕಲಾಗಿತ್ತು, ಬಳಿಕ ೨ ದಿನ ಕಳೆದ ನಂತರ ಈ ಬ್ಯಾರಿಕೇಡ್‌ನ್ನು ಒಂದು ಬ್ಯಾರಿಕೇಡ್‌ನಿಂದ ಇನ್ನೊಂದು ಬ್ಯಾರಿಕೇಡ್‌ಗೆ ಅಂತರ ನೀಡದೇ ರಸ್ತೆಯ ಎಡ ಮತ್ತು ಬಲ ಭಾಗಕ್ಕೆ ಅಸಮರ್ಪಕವಾಗಿ ಹಾಕಿದ ಪರಿಣಾಮವೇ ಮತ್ತೆ ಅದೇ ಸ್ಥಳದಲ್ಲಿ ಅಪಘಾತ ಸಂಭವಿಸಲು ಕಾರಣವಾಗಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ದಿನಂಪ್ರತಿ ಈ ರಸ್ತೆಯಲ್ಲಿ ಹೈವೇ ಪಟ್ರೋಲ್‌ನ ಪೊಲೀಸ್ ವಾಹನ ಓಡಾಟ ಮಾಡುತ್ತಿದ್ದರೂ ಈ ಬಗ್ಗೆ ಗಮನ ಹರಿಸದೇ ಇದ್ದ ಬಗ್ಗೆಯೂ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿದ್ದಾರೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.