Home_Page_Advt
Home_Page_Advt
Breaking News

ಫೆ.23: ಪುತ್ತೂರಿನಲ್ಲಿ ಬಾಂಧವ್ಯ ಟ್ರೋಫಿ… ಬಾಂಧವ್ಯದ ಬೆಸುಗೆಗೆ 4 ವರ್ಷ

ಬಹುಮಾನಗಳು
ಪ್ರಥಮ : ರೂ. 10020/- ಹಾಗೂ ಬಾಂಧವ್ಯ ಟ್ರೋಫಿ
ದ್ವಿತೀಯ : ರೂ. 8020/- ಹಾಗೂ ಬಾಂಧವ್ಯ ಟ್ರೋಫಿ
ತೃತೀಯ : ರೂ. 6020/- ಹಾಗೂ ಬಾಂಧವ್ಯ ಟ್ರೋಫಿ
ಚತುರ್ಥ : ರೂ. 4020/- ಹಾಗೂ ಬಾಂಧವ್ಯ ಟ್ರೋಫಿ

   ಭಾಗವಹಿಸುವ ತಂಡಗಳು

  • ಪೊಲೀಸ್ ಇಲೆವೆನ್
  • ಸುದ್ದಿ ಬಿಡುಗಡೆ
  • ಡಾಕ್ಟರ್ಸ್ ತಂಡ
  • ಲಾಯರ್ಸ್ ಪುತ್ತೂರು
  • ಪ್ರೆಸ್ ಕ್ಲಬ್ ಪುತ್ತೂರು
  • ದೈಹಿಕ ಶಿಕ್ಷಣ ಶಿಕ್ಷಕರ ತಂಡ
  • ವರ್ತಕರ ತಂಡ ಪುತ್ತೂರು
  • ಸಹಕಾರಿ ಸಂಘ ಬ್ಯಾಂಕ್ ತಂಡ
  • ಮೆಸ್ಕಾಂ ಪುತ್ತೂರು
  • ಕ್ಯಾಂಪ್ಕೋ ಇಲೆವೆನ್
  • ಪಿಎಸಿಇ ಸಂಡೆ ಕ್ರಿಕೆಟರ್ಸ್ ತಂಡ
  • ಅರಣ್ಯ ಇಲಾಖೆ ತಂಡ

ಪುತ್ತೂರು: ಇಲಾಖೆ ಮತ್ತು ಸಾರ್ವಜನಿಕ ಸಂಸ್ಥೆಗಳ ಉದ್ಯೋಗಿಗಳ ಕ್ರಿಕೆಟ್ ಪಂದ್ಯಾಟ `ಬಾಂಧವ್ಯ ಟ್ರೋಫಿ’ಗೆ ನೆಹರುನಗರ ವಿವೇಕಾನಂದ ಪದವಿ ಕಾಲೇಜಿನ ಕ್ರೀಡಾಂಗಣ ಸಿದ್ದವಾಗಿದೆ. ಫೆ.23ರಂದು ವಿವಿಧ ಸಂಸ್ಥೆಗಳ ಸಿಬ್ಬಂದಿಗಳ ಒಟ್ಟು 12 ತಂಡಗಳೊಳಗೆ ಬಾಂಧವ್ಯ ಟ್ರೋಫಿಗಾಗಿ ಸೆಣಸಾಟ ನಡೆಯಲಿದೆ.

ಲೀಗ್ ಮಾದರಿಯ ಕ್ರಿಕೆಟ್ ಪಂದ್ಯಾಟವಾಗಿರುವ ಇದು ಆಹ್ವಾನಿತ 12 ತಂಡಗಳ ಸಮಾಗಮದೊಂದಿಗೆ ವಿಶೇಷತೆಗಳೊಂದಿಗೆ ೪ನೇ ವರ್ಷದ ಪಂದ್ಯಾಕೂಟಕ್ಕಾಗಿ ಸಕಲ ಸಿದ್ಧತೆ ನಡೆದಿದೆ. ವ್ಯಾಪಾರ ವಹಿವಾಟಿನಲ್ಲಿ ಸದಾ ಬ್ಯುಸಿಯಾಗಿರುವ ಇಂಜಿನಿಯರ್ಸ್ ತಂಡ, ಕ್ಯಾಂಪ್ಕೋ ಇಲೆವೆನ್ ತಂಡ, ಅರಣ್ಯ ಇಲಾಖೆ ತಂಡ ಸೇರ್ಪಡೆಗೊಂಡು ಬಾಂಧವ್ಯ ಟ್ರೋಫಿ ಯಾರಿಗೆ? ಕುತೂಹಲ ಮೂಡಿಸಿದೆ. ಮೊದಲ ವರ್ಷ ಎಸಿ ಇಲೆವೆನ್, ಎರಡನೇ ವರ್ಷ ಸದಾ ಒತ್ತಡದಲ್ಲಿರುವ ಪುತ್ತೂರಿನ ವೈದ್ಯರನ್ನು ಮೈದಾನಕ್ಕಿಳಿಸಿದ ಹೆಗ್ಗಳಿಕೆಯೊಂದಿಗೆ ಮೂರನೇ ವರ್ಷ ಜುವೆಲ್ಲರ್ಸ್ ತಂಡವನ್ನು ಮೈದಾನಕ್ಕಿಳಿಸಿತ್ತು. ೪ ನೇ ವರ್ಷ ಮತ್ತೊಂದು ಹೆಗ್ಗಳಿಕೆಗೆ ಮುಂದಾಗಿದೆ. ಪೊಲೀಸ್ ತಂಡ ಮೊದಲ ವರ್ಷದ ಚಾಂಪಿಯನ್ ಆದರೆ, ಎರಡನೇ ವರ್ಷ ಸಹಕಾರಿ ಸಂಘ, ತೃತೀಯ ವರ್ಷ ಪುತ್ತೂರು ಪ್ರೆಸ್ ಕ್ಲಬ್ ತಂಡ ಗೆಲುವಿನ ಪತಾಕೆ ಹಾರಿಸಿತ್ತು.

ಪಂದ್ಯಾಕೂಟವನ್ನು ಶಾಸಕ ಸಂಜೀವ ಮಠಂದೂರು ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಮಾಜಿ ಶಾಸಕಿ ಶ್ರೀಮತಿ ಶಕುಂತಳಾ ಟಿ. ಶೆಟ್ಟಿ, ತಾಲೂಕು ಪಂಚಾಯತ್ ಅಧ್ಯಕ್ಷ ರಾಧಾಕೃಷ್ಣ ಬೋರ್ಕರ್, ಮಹಿಳಾ ಠಾಣೆಯ ಪಿಐ ಕುಸುಮಾಧರ್, ನಗರ ಸಭಾ ಸದಸ್ಯ ಜೀವಂಧರ್ ಜೈನ್, ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಕೃಷ್ಣ ಭಟ್ ಕೊಂಕೋಡಿ ಸಹಿತ ವಿವಿಧ ಗಣ್ಯರು ಭಾಗವಹಿಸಲಿದ್ದು, ಪುತ್ತೂರು ಡಿವೈಎಸ್‌ಪಿ ದಿನಕರ್ ಶೆಟ್ಟಿ ಅಧ್ಯಕ್ಷತೆ ವಹಿಸಲಿದ್ದಾರೆ.

ಸಂಜೆ ನಡೆಯಲಿರುವ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಸುದ್ದಿ ಸಮೂಹ ಸಂಸ್ಥೆಗಳ ಆಡಳಿತ ನಿರ್ದೇಶಕ ಡಾ. ಯು.ಪಿ. ಶಿವಾನಂದ ವಹಿಸಲಿದ್ದಾರೆ ವಿವಿಧ ಗಣ್ಯರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ಸಂಘಟಕರು ತಿಳಿಸಿದ್ದಾರೆ.

ಸಿದ್ಧಗೊಂಡಿದೆ ವಿವೇಕಾನಂದ ಕ್ರೀಡಾಂಗಣ: ಎರಡನೇ ಬಾರಿಗೆ ವಿವೇಕಾನಂದ ವಿದ್ಯಾವರ್ಧಕ ಸಂಘ ಹೊರಗಿನ ಕ್ರಿಕೆಟ್ ಪಂದ್ಯಾಕೂಟಕ್ಕೆ ಕ್ರೀಡಾಂಗಣ ನೀಡುತ್ತಿದೆ. ವಿವಿಧ ಇಲಾಖೆಗಳ ಮತ್ತು ಸಿಬ್ಬಂದಿಗಳ ಮಧ್ಯೆ ನಡೆಯುವ ಪಂದ್ಯಾಕೂಟವಾದುದರಿಂದ ವಿದ್ಯಾವರ್ಧಕ ಸಂಘವೂ ವಿಶೇಷವಾಗಿ ಕ್ರೀಡಾಂಗಣವನ್ನು ಸಜ್ಜುಗೊಳಿಸಿ ಪಂದ್ಯಾಕೂಟ ಸುಸೂತ್ರವಾಗಿ ನೆರವೇರಲು ಸಹಕಾರ ನೀಡಿದೆ.

ಹೀಗೆ ಹುಟ್ಟಿತು ಬಾಂಧವ್ಯ ಟ್ರೋಫಿ…: ಈ ಪಂದ್ಯಾಕೂಟದ ಹೆಸರಿನಲ್ಲಿಯೇ ಇದರ ಮೂಲ ಉದ್ಧೇಶ ಅಡಗಿದೆ. ಸಂಸ್ಥೆಗಳು ಮತ್ತು ಇಲಾಖೆಗಳು ಪರಸ್ಪರ ಬಾಂಧವ್ಯದ ಬೆಸುಗೆಯಿಂದ ಕೂಡಿರಬೇಕು ಮತ್ತು ಕ್ರಿಕೆಟ್ ಆಡಲು ಇನ್ನೆಂದಿಗೂ ಅವಕಾಶ ಇಲ್ಲ ಎಂದು ಭಾವಿಸಿ ಅವಕಾಶ ವಂಚಿತರಾಗುತ್ತಿರುವ ಉದ್ಯೋಗಿಗಳು ಕ್ರಿಕೆಟ್‌ನ್ನು ಆಡಿ ಸಂಭ್ರಮಿಸಲು ಅವಕಾಶ ನೀಡುವ ನಿಟ್ಟಿನಲ್ಲಿ ಮೂವರು ವ್ಯಕ್ತಿಗಳು ಈ ಬಾಂಧವ್ಯ ಟ್ರೋಫಿ ನಡೆಸಲು ಚಿಂತಿಸಿದರು. ಪೊಲೀಸ್ ಇಲಾಖೆಯ ಸ್ಕರಿಯ ಹಾಗೂ ಪ್ರಶಾಂತ್ ಮತ್ತು ಸುದ್ದಿ ಬಿಡುಗಡೆಯ ಫಾರೂಕ್ ಶೇಖ್‌ರವರು ಈ ಚಿಂತನೆಯನ್ನು ಕಾರ್ಯರೂಪಕ್ಕೆ ಇಳಿಸಿ ೨೦೧೭ ರಲ್ಲಿ ಪ್ರಥಮ ಬಾರಿಗೆ ೧೬ ತಂಡಗಳನ್ನು ಸಂಘಟಿಸಿ ಓವರ್‌ಆರ್ಮ್ ಪಂದ್ಯಾಕೂಟವನ್ನು ಸಂತ ಫಿಲೋಮಿನಾ ಕಾಲೇಜಿನ ಕ್ರೀಡಾಂಗಣದಲ್ಲಿ ನಡೆಸಿ ಯಶಸ್ವಿಯಾಗಿದ್ದರು. ಎರಡನೇ ವರ್ಷ ೮ ತಂಡಗಳನ್ನು ಆಹ್ವಾನಿಸಿ ಲೀಗ್ ಮಾದರಿಯಲ್ಲಿ ಕಿಲ್ಲೆ ಮೈದಾನದಲ್ಲಿ ನಡೆಸಿ ೩ನೇ ವರ್ಷ ೧೨ ತಂಡಗಳನ್ನು ಅಹ್ವಾನಿಸಿ ಲೀಗ್ ಮಾದರಿಯಲ್ಲಿ ನೆಹರುನಗರ ವಿವೇಕಾನಂದ ಪದವಿ ಕಾಲೇಜಿನ ಕ್ರೀಡಾಂಗಣದಲ್ಲಿ ನಡೆಸಿ ಜಿಲ್ಲಾ ಮಟ್ಟದಲ್ಲಿಯೇ ಹೆಸರು ಮಾಡಿತ್ತು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.