Home_Page_Advt
Home_Page_Advt
Breaking News

ಸುವರ್ಣ ಯುಗದಲ್ಲಿ ಪಡೆದ ಅಧಿಕಾರದಿಂದ ಕಾಂಗ್ರೆಸ್ ಮುಕ್ತವಾಗಲಿದೆ: ಬಿಜೆಪಿ ಮಂಡಲಗಳ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ನಳಿನ್ ಕುಮಾರ್ ಕಟೀಲ್

 

  • ದೇಶಕ್ಕಾಗಿ ಬದುಕು ಕೊಡುವ ಸಂದೇಶ ಕೊಡುವುದೇ ಬಿಜೆಪಿ – ಸಂಜೀವ ಮಠಂದೂರು
  • ಜಿಲ್ಲೆ ಬಿಜೆಪಿಯ ಭದ್ರಕೋಟೆಯಾಗಿಯೇ ಮುನ್ನಡೆಯಬೇಕು – ಸುದರ್ಶನ್ ಮೂಡಬಿದ್ರೆ
  • ಪಕ್ಷದ ಸಂದೇಶವನ್ನು ಪಾಲಿಸಿದಾಗ ಸಂಘಟನೆ ಯಶಸ್ವಿ – ಚನಿಲ ತಿಮ್ಮಪ್ಪ ಶೆಟ್ಟಿ
  • ಹೊಸ ತಂಡಕ್ಕೂ ಪೂರ್ಣ ರೀತಿಯ ಸಹಕಾರ ಸಿಗಲಿ – ಜೀವಂಧರ್ ಜೈನ್
  • ಪುತ್ತೂರು ಬಿಜೆಪಿಯ ಭದ್ರಕೋಟೆಯನ್ನಾಗಿ ಉಳಿಸುವೆವು -ಸಾಜ ರಾಧಾಕೃಷ್ಣ ಆಳ್ವ
  • ಬಿಜೆಪಿಯ ಭದ್ರಕೋಟೆಗೆ ಇನ್ನಷ್ಟು ಶಕ್ತಿ – ಪಿ.ಜಿ.ಜಗನ್ನಿವಾಸ ರಾವ್

ಪುತ್ತೂರು: ಭಾರತೀಯ ಜನತಾ ಪಾರ್ಟಿ ಪುತ್ತೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಪುತ್ತೂರು ಗ್ರಾಮಾಂತರ ಹಾಗೂ ನಗರ ಮಂಡಲಗಳ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಫೆ.22ರಂದು ಪುತ್ತೂರು ಸಾಲ್ಮರ ಕೊಟೇಚಾ ಹಾಲ್ ನಲ್ಲಿ ನಡೆಯಿತು.

ರಾಜ್ಯ ಬಿಜೆಪಿ ಅಧ್ಯಕ್ಷ ಸಂಸದ ನಳಿನ್ ಕುಮಾರ್ ಕಟೀಲ್ ಅವರು ಭಾರತ ಮಾತೆಯ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಪದಗ್ರಹಣ ಸಮಾರಂಭವನ್ನು ಉದ್ಘಾಟಿಸಿದ ಬಳಿಕ ಎರಡು ಮಂಡಗಳ ನೂತನ ಅಧ್ಯಕ್ಷ ಪದಾಧಿಕಾರಿಗಳಿಗೆ ಪಕ್ಷದ ಧ್ವಜ ಹಸ್ತಾಂತರ ಮಾಡುವ ಮೂಲಕ ಪದಗ್ರಹಣ ನೆರವೇರಿಸಿದರು. ಬಿಜೆಪಿ ಗ್ರಾಮಾಂತರ ಮಂಡಲದ ಅಧ್ಯಕ್ಷ ಸಾಜ ರಾಧಾಕ್ರಷ್ಣ ಆಳ್ವ, ಪ್ರಧಾನ ಕಾರ್ಯದರ್ಶಿಗಳಾ ಪುರುಷೋತ್ತಮ ಮುಂಗ್ಲಿಮನೆ, ನಿತೀಶ್ ಕುಮಾರ್ ಶಾಂತಿವನ, ನಗರ ಮಂಡಲದ ಅಧ್ಯಕ್ಷ ಪಿ.ಜಿ.ಜಗನ್ನಿವಾಸ ರಾವ್, ಪ್ರಧಾನ ಕಾರ್ಯದರ್ಶಿಗಳಾದ ಯುವರಾಜ್ ಪೆರಿಯತ್ತೋಡಿ, ಜಯಶ್ರಿ ಎಸ್ ಶೆಟ್ಟಿ ಅವರು ರಾಜ್ಯಾಧ್ಯಕ್ಷರಿಂದ ಪಕ್ಷದ ಧ್ವಜ ಸ್ವೀಕರಿಸಿದರು. ಇದೇ ಸಂದರ್ಭದಲ್ಲಿ ಪಕ್ಷದ ಪದಾಧಿಕಾರಿಗಳ ಘೋಷಣೆ ಮಾಡಲಾಯಿತು.

ಸುವರ್ಣ ಯುಗದಲ್ಲಿ ಪಡೆದ ಅಧಿಕಾರದಿಂದ ಕಾಂಗ್ರೆಸ್ ಮುಕ್ತವಾಗಲಿದೆ:
ಬಿಜೆಪಿ ರಾಜ್ಯಾಧ್ಯಕ್ಷ ಸಂಸದ ನಳಿನ್ ಕುಮಾರ್ ಕಟೀಲ್ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ನಮ್ಮ ಪಕ್ಷ ಹಣ, ಗೂಂಡಾಗಿರಿಯಿಂದ ಬಂದಿಲ್ಲ ಸಮಯ ಮತ್ತು ಪ್ರಾಮಾಣಿಕತೆಯಿಂದ ಸಾಮಾನ್ಯ ಕಾರ್ಯಕರ್ತನಿಗೂ ಅವಕಾಶ ಕೊಟ್ಟು ಮುಂದೆ ಬಂದಿದೆ. ಅದನ್ನು ಉಳಿಸಿ ಮುಂದೆ ಹೋಗಬೇಕು. ಇಂತಹ ಸಂದರ್ಭದಲ್ಲಿ ಪುತ್ತೂರಿನಲ್ಲಿ ಸುವರ್ಣ ಯುಗದಲ್ಲಿ ಪಡೆದ ಅಧಿಕಾರದಿಂದ ಕಾಂಗ್ರೆಸ್ ಮುಕ್ತಗೊಳಿಸಿ ಎಂದರು. ಈ ಹಿಂದಿನ ಅಧಿಕಾರ ಅವಧಿಯಲ್ಲಿ ಸಂಘಟನೆಯ ಶಕ್ತಿ ಇದ್ದರೂ ಅಧಿಕಾರದ ಶಕ್ತಿ ಕಡಿಮೆ ಇತ್ತು. ಚನಿಲ ತಿಮ್ಮಪ್ಪ ಶೆಟ್ಟಿ ಮತ್ತು ಜೀವಂಧರ್ ಜೈನ್ ಅವರಿಬ್ಬರು ಅಧಿಕಾರ ಸ್ವೀಕರಿಸಿ ಗೆಲುವು ಸಾಧಿಸಿದ್ದಾರೆ. ಅವರು ಕೋಟಿ ಚೆನ್ನಯರ ಹಾಗೆ ಕೆಲಸ ಮಾಡಿದ್ದಾರೆ. ಸವಾಲಿನ ಮಧ್ಯೆಯೂ ಬಿಜೆಪಿಯನ್ನು ಸುವರ್ಣ ಯುಗಕ್ಕೆ ತಂದಿದ್ದಾರೆ. ಈ ನಿಟ್ಟಿನಲ್ಲಿ ಮುಂದೆ ಬೂತ್ ಮತ್ತು ದೇಶವನ್ನು ಗೆಲ್ಲುವ ಮೂಲಕ ಕಾಂಗ್ರೆಸ್ ಮುಕ್ತಮಾಡುವ ಶಕ್ತಿ ನೂತನ ಅಧ್ಯಕ್ಷರಿಗೆ ದೇವರು ಕರುಣಿಸಲಿ ಎಂದು ಹೇಳಿದರು.

ದೇಶಕ್ಕಾಗಿ ಬದುಕು ಕೊಡುವ ಸಂದೇಶ ಕೊಡುವುದೇ ಬಿಜೆಪಿ:
ಶಾಸಕ ಸಂಜೀವ ಮಠಂದೂರು ಅವರು ಮಾತನಾಡಿ ಬಿಜೆಪಿ ಇತರ ಪಾರ್ಟಿಗಿಂತ ಭಿನ್ನ ಎಂಬುದನ್ನು ತೋರಿಸಿಕೊಟ್ಟಿದ್ದೇವೆ. ವ್ಯಕ್ತಿಗಿಂತ ಪಕ್ಷ ದೊಡ್ಡದು, ಪಕ್ಷಕ್ಕಿಂತ ದೇಶ ದೊಡ್ಡದು ಎಂಬ ಕಾರ್ಯಕರ್ತನ್ನು ಸಿದ್ಧ ಮಾಡುತ್ತಿರುವ ಬಿಜಪಿ ಭಾರತೀಯತೆಯ ಇಚ್ಚಾಧಾರಣೆಯ ಅಡಿಯಲ್ಲಿ ಕೆಲಸ ಮಾಡುತ್ತದೆ ಎಂದ ಅವರು ದೇಶದಕ್ಕಾಗಿ ಬದುಕು ಕೊಡುವ ಸಂದೇಶ ಕೊಡುವುದೇ ಪಕ್ಷ ಎಂದರೆ ಅದು ಬಿಜೆಪಿ ಮಾತ್ರ ಎಂದು ಹೇಳಿದರು. ಪಕ್ಷಕ್ಕೆ ಹೊಸ ಚೈತನ್ಯ ಕೊಡಲು ಯುವಕರನ್ನು ಜೋಡಿಸಿ ಕೊಂಡಿದ್ದೆವೆ. ಆ ಮೂಲಕ ಪ್ರತಿಯೊಬ್ಬ ವ್ಯಕ್ತಿಯಲ್ಲಿರುವ ಚೈತನ್ಯ ಗುರುತಿಸಿ ರಾಷ್ಟ್ರ ಭಕ್ತನನ್ನಾಗಿ ಪ್ರೇರಣೆ ಕೊಡುವ ಕೆಲಸ ಆಗಿದೆ. ಬೂತ್‌ನ ಸಾಮಾನ್ಯ ಕಾರ್ಯಕರ್ತ ಪಂಚಾಯತ್ ಸದಸ್ಯನಿಂದ ಹಿಡಿದು ರಾಜ್ಯ, ರಾಷ್ಟ್ರಮಟ್ಟಕ್ಕೂ ಏರಬಹುದು ಎಂದು ತೋರಿಸಿ ಕೊಟ್ಟಿದೆ. ಸಾವಿಲ್ಲದ ಸಂಘಟನೆಯ ಚುಕ್ಕಾಣಿ ಹಿಡಿದ ಹೊಸ ತಂಡ ತನ್ನ ಜವಾಬ್ದಾರಿ ನಿರ್ವಹಣೆ ಮಾಡಲು ಹಿರಿಯರ ಶ್ರಮ ನೆನೆಸಿಕೊಂಡು ಮುನ್ನಡೆಯಬೇಕು ಎಂದರು.

ಗಳಿಸಿಕೊಟ್ಟಿರುವುದನ್ನು ಉಳಿಸಿದರಾಯಿತು:
ಪುತ್ತೂರು ವಿಧಾನಸಭಾ ಕ್ಷೇತ್ರ ತನ್ನದೆ ಆದ ಚಾಪನ್ನು ಹೊಂದಿದೆ. ಬಿಜೆಪಿಯ ಒಬ್ಬ ಶಾಸಕ ಅಥವಾ ಸದಸ್ಯ ಹೇಗಿರುತ್ತಾರೆ ಎಂಬ ಪ್ರಾಮಾಣಿಕತೆ ಪ್ರತಿಯೊಬ್ಬ ಕಾರ್ಯಕ್ರರ್ತನಲ್ಲಿ ಬರಬೇಕು. ಜನರು ಗುರುತಿಸಬೇಕು. ಕಾಂಗ್ರೆಸ್‌ನಲ್ಲಿ ಅಧಿಕಾರ ಬಿಟ್ಟು ಕೊಡದ ರಾಜಕೀಯ ಇದೆ. ಅದು ಬಿಜೆಪಿಯಲ್ಲಿ ಇಲ್ಲ. ನೂರಾರು ವರ್ಷ ದೇಶವನ್ನು ಮುನ್ನಡೆಸಬೇಕೆಂಬ ದಿಸೆಯಿಂದ ಈ ಪದಗ್ರಹಣ ಸಮಾರಂಭ. ಹಿಂದಿನವರು ಗಳಿಸಿಕೊಟ್ಟಿದ್ದಾರೆ. ಮುಂದಿನ ತಂಡ ಅದನ್ನು ಉಳಿಸಿದರಾಯಿತು ಎಂದು ಸಂಜೀವ ಮಠಂದೂರು ಹೇಳಿದರು.

ಜಿಲ್ಲೆ ಬಿಜೆಪಿಯ ಭದ್ರಕೋಟೆಯಾಗಿಯೇ ಮುನ್ನಡೆಯಬೇಕು:
ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ್ ಮೂಡಬಿದ್ರೆ ಅವರು ಮಾತನಾಡಿ ಪರಿವರ್ತನೆ ಜಗದ ನಿಯಮ ಜಿಲ್ಲೆಯಲ್ಲಿ ೮ ಸ್ಥಾನದಲ್ಲಿ ೭ ಸ್ಥಾನ ಪಡೆಯುವ ಮೂಲಕ ಬಿಜೆಪಿ ಜಿಲ್ಲೆಯಲ್ಲಿ ಭದ್ರಕೋಟೆಯಾಗಿದೆ. ಮುಂದಿನ ಗ್ರಾ.ಪಂ, ತಾ.ಪಂ, ಜಿ.ಪಂ ಚುನಾವಣೆಯಲ್ಲಿ ಬಿಜೆಪಿಯ ಭದ್ರಕೋಟೆಯಾಗಿಯೇ ಉಳಿಯಬೇಕೆಂದು ಹೇಳಿದರು.

ಪಕ್ಷದ ಸಂದೇಶವನ್ನು ಪಾಲಿಸಿದಾಗ ಸಂಘಟನೆ ಯಶಸ್ವಿ:
ಗ್ರಾಮಾಂತರ ಮಂಡಲದ ಅಧ್ಯಕ್ಷ ಚನಿಲ ತಿಮ್ಮಪ್ಪ ಶೆಟ್ಟಿಯವರು ಮಾತನಾಡಿ ಕಳೆದ ಮೂರು ವರ್ಷ ಪಕ್ಷದ ಜವಾಬ್ದಾರಿ, ಸೂಚನೆಗಳನ್ನು ಯಶಶ್ವಿಯಾಗಿ ನಿರ್ವಹಿಸಿದ್ದೆವೆ. ಇದಕ್ಕೆ ನಮ್ಮ ಎಲ್ಲಾ ಮಂಡಲದ ಕಾರ್ಯಕರ್ತರ ಸಹಕಾರ ಸಿಕ್ಕಿದೆ. ಶಾಸಕರ ನೇತೃತ್ವದಲ್ಲಿ ನಡೆದ ಗಾಂಧಿ ಸಂಕಲ್ಪ ಯಾತ್ರೆಯ ಮೂಲಕ ಕೇಂದ್ರ ಮತ್ತು ರಾಜ್ಯದ ಯೋಜನೆಗಳನ್ನು ಜನರಿಗೆ ಮುಟ್ಟಿಸುವ ಉತ್ತಮ ಕೆಲಸ ಆಗಿದೆ. ಇಂತಹ ಸಂದರ್ಭದಲ್ಲಿ ಕೇವಲ ಚುನಾವಣೆಯಲ್ಲಿ ಗೆದ್ದರೆ ಮಾತ್ರ ಸಂಘಟನೆಯ ಯಶಸ್ವಿಯಲ್ಲ. ನಮ್ಮ ಬೂತ್‌ನಲ್ಲಿ ಪಕ್ಷದ ಸಂದೇಶವನ್ನು ಚಾಚೂ ತಪ್ಪದೆ ಪಾಲಿಸಿ ಕಾರ್ಯಕ್ರಮ, ಯೋಜನೆಯನ್ನು ಮನೆ ಮನೆ ಮುಟ್ಟಿಸುವ ಕೆಲಸ ಆದಾಗ ಬೂತ್ ಗಟ್ಟಿಯಾಗಿದೆ ಎಂದಥ. ಆಗ ಸಂಘಟನೆ ಯಶಸ್ವಿಯ ದಾರಿಯಲ್ಲಿ ನಡೆಯುತ್ತದೆ. ನಮ್ಮ ಜನಪ್ರತಿನಿಧಿಗಳು ಕೂಡಾ ಪಕ್ಷದ ಕಾರ್ಯಕ್ರಮದಲ್ಲಿ ನೂರಕ್ಕೆ ನೂರು ಹಾಜರಿರಬೇಕೆಂದು ಹೇಳಿದರು.

ಹೊಸ ತಂಡಕ್ಕೂ ಪೂರ್ಣ ರೀತಿಯ ಸಹಕಾರ ಸಿಗಲಿ:
ನಗರ ಮಂಡಲದ ನಿಕಟಪೂರ್ವ ಅಧ್ಯಕ್ಷ ಜೀವಂಧರ್ ಜೈನ್ ಅವರು ಮಾತನಾಡಿ ನಮ್ಮ ಮೂರು ವರ್ಷದ ಅವಧಿಯಲ್ಲಿ ಅನೇಕ ಪಕ್ಷದ ಸೂಚನೆಯಂತೆ ಅನೇಕ ಕಾರ್ಯಕ್ರಮ ಹಾಕಿಕೊಂಡಾಗ ಕಾರ್ಯಕರ್ತರು ಪೂರ್ಣ ರೀತಿಯಲ್ಲಿ ಸಹಕಾರ ನೀಡಿದ್ದಾರೆ. ಮುಂದೆಯೂ ನೂತನ ತಂಡಕ್ಕೂ ಪೂರ್ಣ ರೀತಿಯ ಸಹಕಾರ ನೀಡಬೇಕೆಂದು ಅವರು ವಿನಂತಿಸಿದರು.

ಪುತ್ತೂರು ಬಿಜೆಪಿಯ ಭದ್ರಕೋಟೆಯಾಗಿಯೇ ಉಳಿಸುವೆವು:
ಬಿಜೆಪಿ ಗ್ರಾಮಾಂತರ ಮಂಡಲದ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ ಅವರು ಮಾತನಾಡಿ ಬೂತ್ ಮಟ್ಟದಿಂದ ಹಿಡಿದು ಎಲ್ಲಾ ಹಂತದಲ್ಲೂ ಯಾವ ರೀತಿ ಸಂಘಟನೆ ಮಾಡಬೇಕೆಂದು ಹಿರಿಯರ ಮಾರ್ಗದರ್ಶನ ಪಡೆದು ಕೊಂಡು ಮುಂದೆ ನಡೆಯುತ್ತಾ ಪುತ್ತೂರನ್ನು ಬಿಜೆಪಿ ಭದ್ರಕೋಟೆಯಾಗಿಯೇ ಉಳಿಸುವೆವು ಎಂದು ಹೇಳಿದ ಅವರು ಮುಂದೆ ಗ್ರಾ.ಪಂ, ತಾ.ಪಂ, ಜಿ.ಪಂ ಚುನಾವಣೆಗಳಿಗೆ ಈಗಿನಿಂದಲೇ ತಯಾರಿ ನಡೆಸಬೇಕೆಂದರು.

ಬಿಜೆಪಿಯ ಭದ್ರಕೋಟೆಗೆ ಶಕ್ತಿ ಇನ್ನಷ್ಟು ಶಕ್ತಿ:
ಬಿಜೆಪಿ ನಗರ ಮಂಡಲದ ಅಧ್ಯಕ್ಷ ಪಿ.ಜಿ.ಜಗನ್ನಿವಾಸ ರಾವ್ ಅವರು ಮಾತನಾಡಿ ಬಿಜೆಪಿಯ ಭದ್ರಕೋಟೆಯಗೆ ಇನ್ನಷ್ಟು ಶಕ್ತಿ ಕೊಡುವ ಕೆಲಸ ಎಲ್ಲರ ಸಹಕಾರದೊಂದಿಗೆ ಮುಂದೆ ಹೋಗಲಿದ್ದೇವೆ. ಹಿರಿಯ ಮಾರ್ಗದರ್ಶನ, ಕಾರ್ಯಕರ್ತರ ಸಹಕಾರ ಅಗತ್ಯ ಎಂದರು.

ಬೂತ್ ಸಮಿತಿ ಅಧ್ಯಕ್ಷರುಗಳಿಗೆ ಗೌರವಾರ್ಪಣೆ:
ಪುತ್ತೂರು ವಿಧಾನಸಭಾದ ಗ್ರಾಮಾಂತರ ಮಂಡಲದ ೨೨೦ ಬೂತ್ ಗಳ ಹಾಗೂ ನಗರ ಮಂಡಲದ ೪೨ ಬೂತ್ ಸಮಿತಿ ಅಧ್ಯಕ್ಷರುರಗಳಿಗೆ ಗೌರವಾರ್ಪಣೆ ನಡೆಯಿತು. ಬಿಜೆಪಿ ಗ್ರಾಮಾಂತರ ಮಂಡಲದ ಪ್ರಧಾನ ಕಾರ್ಯದರ್ಶಿ ನಿತೀಶ್ ಕುಮಾರ್ ಶಾಂತಿವನ ಮತ್ತು ನಗರ ಮಂಡಲದ ಪ್ರಧಾನ ಕಾರ್ಯದರ್ಶಿ ಯುವರಾಜ್ ಪೆರಿಯತ್ತೋಡಿ ಗೌರವಾರ್ಪಣೆ ಕಾರ್ಯಕ್ರಮ ನಿರ್ವಹಿಸಿದರು. ಬಿಜೆಪಿ ಮಂಗಳೂರು ವಿಭಾಗ ಸಹ ಪ್ರಭಾರಿ ಗೋಪಾಲಕೃಷ್ಣ ಹೇರಳೆ, ಮಾಜಿ ಶಾಸಕಿ ಮಲ್ಲಿಕಾ ಪ್ರಸಾದ್, ತಾ.ಪಂ ಅಧ್ತಕ್ಷ ರಾಧಾಕೃಷ್ಣ ಬೋರ್ಕರ್, ಜಿ.ಪಂ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಗ್ರಾಮಾಂತರ ಮಂಡಲದ ನಿಕಟ ಪೂರ್ವ ಪ್ರಧಾನ ಕಾರ್ಯದರ್ಶಿ ಶಂಭು ಭಟ್, ನಗರ ಮಂಡಲದ ನಿಕಟಪೂರ್ವ ಪ್ರಧಾನ ಕಾರ್ಯದರ್ಶಿಗಳಾದ ರಾಮ್‌ದಾಸ್ ಹಾರಾಡಿ, ಗೌರಿ ಬನ್ನೂರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಜಯರಾಮ ಪೂಜಾರಿ, ಆರಾಧನ ಸಮಿತಿ ಸದಸ್ಯೆ ಉಷಾ ನಾರಾಯಣ್, ಬಾಲಕೃಷ್ಣ ನಾಕ್ ಮಾಲ್ತೊಟ್ಟು, ನಗರಸಭಾ ಸದಸ್ಯೆ ವಿದ್ಯಾ ಗೌರಿ, ಟೌನ್ ಬ್ಯಾಂಕ್ ನಿರ್ದೇಶಕ ಕಿರಣ್ ಕುಮಾರ್ ಬಲ್ನಾಡು, ಯಶೋದ ಹರೀಶ್ ಬಿರಾವು, ಉಪ್ಪಿನಂಗಡಿ ಗ್ರಾ.ಪಂ ಮಾಜಿ ಅಧ್ಯಕ್ಷ ಚಂದ್ರಶೇಖರ್ ಮಡಿವಾಳ, ಅರ್ಗತ ಬೈಲು ಕ್ರಷ್ಣ, ಮಂಡಲದ ನಿಕಟಪೂರ್ವ ಪ್ರಧಾನ ಕಾರ್ಯದರ್ಶಿ ಶಂಭು ಭಟ್ ಅತಿಥಿಗಳನ್ನು ಗೌರವಿಸಿದರು. ಬಿಜೆಪಿ ನಗರ ಮಂಡಲದ ನಿಕಟಪೂರ್ವ ಪ್ರಧಾನ ಕಾರ್ಯದರ್ಶಿ ಗೌರಿ ಬನ್ನೂರು ಪ್ರಾರ್ಥಿಸಿದರು. ಬಿಜೆಪಿ ಗ್ರಾಮಾಂತರ ಮಂಡಲದ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ ಸ್ವಾಗತಿಸಿ, ಪ್ರಧಾನ ಕಾರ್ಯದರ್ಶಿ ಪುರುಷೊತ್ತಮ ಮುಂಗ್ಲಿಮನೆ ವಂದಿಸಿದರು. ಮಾಜಿ ಪುರಸಭೆ ಅಧ್ಯಕ್ಷ ರಾಜೇಶ್ ಬನ್ನೂರು ಕಾರ್ಯಕ್ರಮ ನಿರೂಪಿಸಿದರು.

ಬಿಜೆಪಿ ಕಚೇರಿಯಲ್ಲಿ ಅಟಲ್ ಸೇವಾ ಸಂಸ್ಥೆ
ಕೇಂದ್ರದ ಹಲವಾರು ಯೋಜನೆಗಳು ಅಟಲ್ ಸೇವಾ ಯೋಜನೆಯಿಂದ ನಡೆಯುತ್ತಿದ್ದು, ಇದು ಸಾಮಾನ್ಯ ಜನರಿಗೂ ತಲುಪಬೇಕೆಂದು ಬಿಜೆಪಿ ಕಚೇರಿಯಲ್ಲಿ ಅಟಲ್ ಸೇವಾ ಸಂಸ್ಥೆ ಆರಂಭ ಮಾಡುವ ಚಿಂತನೆ ನಡೆಸಲಾಗುವುದು ಎಂದು ಕಾರ್ಯಕ್ರಮ ನಿರೂಪಕ ರಾಜೇಶ್ ಬನ್ನೂರು ಉದ್ಘೋಷಣೆ ಮಾಡಿದರು. ಸಂಸ್ಥೆಯಿಂದ ಸಿಗುವ ಸೇವಾ ಯೋಜನೆ ಮಾಹಿತಿ ವ್ರದ್ದಾಪ್ಯ ವೇತನ, ವಿಧವಾ ವೇತನ, ಸಂದ್ಯಾ ಸುರಕ್ಷಾ, ಆಯುಷ್ಮಾನ್ ಕಾರ್ಡ್, ಕಿಸಾನ್ ಸಮ್ಮಾನ್ ಯೋಜನೆ, ಅಟಲ್ ಫೆನ್ಶನ್ ಯೋಜನೆ, ದೀನ್ ದಯಾಳ್ ಉಪಾಧ್ಯಾಯ ಗ್ರಾಮೀಣ ಕೌಶಲ್ಯ ಯೋಜನೆ, ಪ್ರಧಾನ ಮಂತ್ರಿ ಗ್ರಾಮೀಣ ಆವಾಜ್ ಯೋಜನೆ, ಪ್ರಧಾನ ಮಂತ್ರಿ ಮಾತೃತ್ವ ವಂದನ ಯೋಜನೆ, ದೀನ್ ದಯಾಳ್ ಉಪಾದ್ಯಾಯ ಅಂತ್ಯೋದಯ ಯೋಜನೆ, ಜನನಿ ಸುರಕ್ಷಾ ಯೋಜನೆ, ಪ್ರಧಾನ ಮಂತ್ರಿ ಸುರಕ್ಷಾ ಭಿಮಾ ಯೋಜನೆ, ಪ್ರಧಾನ ಮಂತ್ರಿ ಜೀವನ್ ಜ್ಯೋತಿ ಭಿಮಾ ಯೋಜನೆ, ಪ್ರಧಾನ ಮಂತ್ರಿ ಜನ್‌ಧನ್ ಯೋಜನೆ, ದೀನ್ ದಯಾಳ್ ಉಪಾಧ್ಯಾಯ ಗ್ರಾಮೀಣ ಜ್ಯೋತಿ ಯೋಜನೆ, ಸುರಕ್ಷಾ ಸಮೃದ್ಧಿ ಯೋಜನೆ, ಪ್ರಧಾನ ಮಂತ್ರಿ ಉಜ್ವಲ್ ಯೋಜನೆ, ಪ್ರಧಾನ ಮಂತ್ರಿ ಜನೌಷಧಿ ಕೇಂದ್ರ, ಪ್ರಧಾನ ಮಂತ್ರಿ ಮುದ್ರಾ ಯೋಜನೆ, ಪ್ರಧಾನ ಮಂತ್ರಿ ಫಸಲ್ ಭಿಮಾ ಯೋಜನೆ ಸೌಲಭ್ಯ ಮಾಹಿತಿಗಾಗಿ ಸಂಪರ್ಕ ಮಾಡಲು ಬಿಜೆಪಿ ಕಚೇರಿಯಲ್ಲಿ ಸೇವಾ ಕೇಂದ್ರ ತರೆಯಲಾಗುತ್ತದೆ ಎಂದು ಅವರು ಹೇಳಿದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.