Home_Page_Advt
Home_Page_Advt
Breaking News

ಈಶ್ವರಮಂಗಲ: ಹಳೆಯ ವಿದ್ಯುತ್ ಪರಿವರ್ತಕದಿಂದಾಗಿ ಲೋ ವೋಲ್ಟೇಜ್ ಸಮಸ್ಯೆ…!

  • ಹೆಚ್ಚು ಸಾಮರ್ಥ್ಯವಿರುವ ಪರಿವರ್ತಕ ಅಳವಡಿಸುವಂತೆ ಆಗ್ರಹಿಸಿ ವರ್ತಕರಿಂದ ಮೆಸ್ಕಾಂಗೆ ಮನವಿ

ಪುತ್ತೂರು: ನೆಟ್ಟಣಿಗೆ ಮುಡ್ನೂರು ಗ್ರಾಮದ ಈಶ್ವರಮಂಗಲ ಪ್ರದೇಶದಲ್ಲಿ ಲೋ ವಿದ್ಯುತ್ ಸಮಸ್ಯೆಯಿಂದ ಜನತೆ ತೊಂದರೆಗೊಳಗಾಗಿದ್ದು ಹೆಚ್ಚು ಸಾಮರ್ಥ್ಯವಿರುವ ವಿದ್ಯುತ್ ಪರಿವರ್ತಕವನ್ನು ಅಳವಡಿಸುವ ಮೂಲಕ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸಬೇಕೆಂದು ಆಗ್ರಹಿಸಿ ಈಶ್ವರಮಂಗಲದ ವರ್ತಕರ ನಿಯೋಗವೊಂದು ಉದ್ಯಮಿ ಹಾಜಿ ಅಬ್ದುಲ್ ರಹಿಮಾನ್ ಮೇನಾಲ ನೇತೃತ್ವದಲ್ಲಿ ಈಶ್ವರಮಂಗಲ ಮೆಸ್ಕಾಂ ಶಾಖಾಧಿಕಾರಿಯವರಿಗೆ ಮನವಿ ಸಲ್ಲಿಸಿದ್ದಾರೆ.

ಇಲ್ಲಿನ ಸುಮಾರು ೨೦೦ಕ್ಕೂ ಅಧಿಕ ಮನೆಯವರು ಹಾಗೂ ವಾಣಿಜ್ಯ ಬಳಕೆಯ ವ್ಯಾಪಾರಸ್ಥರು ವಿದ್ಯುತ್ ಸಂಪರ್ಕ ಹೊಂದಿದ್ದು ಹಳೆಯ ವಿದ್ಯುತ್ ಪರಿವರ್ತಕದಿಂದ ವಿದ್ಯುತ್ ಸರಬರಾಜಾಗುತ್ತಿದೆ, ಸದ್ರಿ ಪರಿವರ್ತಕದ ಸಾಮರ್ಥ್ಯ ತುಂಬ ಕಡಿಮೆಯಾಗಿರುವುದರಿಂದ ವಿದ್ಯುತ್ ಬಳಕೆದಾರರಿಗೆ ಸರಿಯಾದ ರೀತಿಯಲ್ಲಿ ವಿದ್ಯುತ್ ಲಭಿಸುತ್ತಿಲ್ಲ, ಕಳೆದ ೨ ತಿಂಗಳಿನಿಂದ ಸಮಸ್ಯೆ ಉಲ್ಬಣಗೊಂಡಿದ್ದು ಲೋ ವೋಲ್ಟೇಜ್ ಸಮಸ್ಯೆಯಿಂದ ಅನೇಕ ಮನೆಗಳ ಮಿಕ್ಸಿ, ಸಿಂಗಲ್ ಫೇಸ್ ಪಂಪ್‌ಸೆಟ್, ಗ್ರೈಂಡರ್ ಚಾಲನೆಯಾಗುತ್ತಿಲ್ಲ, ವ್ಯಾಪಾರಸ್ಥರಿಗೆ ಅಗತ್ಯವಾಗಿ ಬೇಕಾಗಿರುವ ರೆಫ್ರಿಜರೇಟರ್ ಕೂಡಾ ಚಾಲನೆ ಮಾಡದ ಸನ್ನಿವೇಶ ಸೃಷ್ಠಿಯಾಗಿದೆ, ಈ ಎಲ್ಲಾ ಸಮಸ್ಯೆಗಳನ್ನು ಮನಗಂಡು ಹಳೆಯ ಪರಿವರ್ತಕವನ್ನು ಬದಲಾಯಿಸಿ ಹೊಸ ವಿದ್ಯುತ್ ಪರಿವರ್ತಕ ಅಳವಿಡುವ ಮೂಲಕ ನಮ್ಮ ಸಮಸ್ಯೆಗೆ ಪರಿಹಾರ ಒದಗಿಸಿಕೊಡಬೇಕೆಂದು ಆಗ್ರಹಿಸಿರುವ ಮನವಿ ಪತ್ರವನ್ನು ಮೆಸ್ಕಾಂ ಈಶ್ವರಮಂಗಲ ಶಾಖಾಧಿಕಾರಿಯವರಿಗೆ ಗ್ರಾಮಸ್ಥರ ನಿಯೋಗ ನೀಡಿದೆ. ಇದೇ ಮನವಿಯನ್ನು ಪುತ್ತೂರು ಮೆಸ್ಕಾಂಗೂ ನೀಡುವುದಾಗಿ ನಿಯೋಗದಲ್ಲಿದ್ದ ವರ್ತಕರು ತಿಳಿಸಿದ್ದಾರೆ. ನಿಯೋಗದಲ್ಲಿ ವರ್ತಕರಾದ ಮುಹಮ್ಮದ್ ಕುಂಞಿ, ಶರೀಫ್, ಅಬ್ದುಲ್ಲ ಮುಸ್ಲಿಯಾರ್ ಮತ್ತಿತರರು ಉಪಸ್ಥಿತರಿದ್ದರು.

ವಿದ್ಯಾರ್ಥಿಗಳಿಗೆ ತೊಂದರೆ:
ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ವಾರ್ಷಿಕ ಪರೀಕ್ಷಾ ಸಮಯವಾಗಿರುವುದರಿಂದ ಲೋ-ವೋಲ್ಟೇಜ್‌ನಿಂದ ವಿದ್ಯಾರ್ಥಿಗಳಿಗೆ ತುಂಬಾ ತೊಂದರೆಯಾಗುತ್ತಿದೆ. ವಿದ್ಯಾರ್ಥಿಗಳ ಭವಿಷ್ಯದ ದೃಷ್ಠಿಯಿಂದಲೂ ಇದಕ್ಕೆ ಪರಿಹಾರ ಆಗಲೇಬೇಕಾಗಿದೆ ಎಂದು ಮನವಿ ನೀಡಿದ ನಿಯೋಗದವರು ಆಗ್ರಹಿಸಿದರು.

ಭರವಸೆ:
ಮನವಿ ಸ್ವೀಕರಿಸಿದ ಮೆಸ್ಕಾಂ ಈಶ್ವರಮಂಗಲ ಶಾಖಾಧಿಕಾರಿಯವರು ಮುಂದಿನ ೧೦ ದಿನಗಳೊಳಗಾಗಿ ಲೋ-ವೋಲ್ಟೇಜ್ ಸಮಸ್ಯೆ ಬಗೆಹರಿಸಲು ಪ್ರಯತ್ನಿಸುತ್ತೇವೆ ಎಂದು ಭರವಸೆ ನೀಡಿದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.